ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ 5 ವರ್ಷದ ಬಾಲಕಿ ಹೃದಯಸ್ವರ್ಶಿ ಪತ್ರ ಬರೆದಿದ್ದಾರೆ. ಇದು ಬಾಲಕಿಯ ಸಮಸ್ಯೆ ಮಾತ್ರವಲ್ಲ, ಬೆಂಗಳೂರಿನ ಬಹುತೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಅಷ್ಟಕ್ಕೂ ಬಾಲಕಿ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರು (ಆ.10) ಪ್ರಧಾನಿ ನರೇಂದ್ರ ಮೋದಿ ಇಂದು (ಆ.10) ಬೆಂಗಳೂರಿಗೆ ಆಗಮಿಸಿ ಮೆಟ್ರೋ ಉದ್ಘಾಟನೆ, ಹೊಸ ಮೆಟ್ರೋ ರೈಲಿಗೆ ಶಂಕು ಸ್ಥಾಪನೆ, ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರು ಮತ್ತಷ್ಟು ಅಭಿವೃದ್ಧಿಗೆ ಜೊತೆಯಾಗೆ ಕೆಲಸ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದ 5 ವರ್ಷದ ಬಾಲಕಿ ಮೋದಿಗೆ ಹೃದಯಸ್ವರ್ಶಿ ಪತ್ರ ಬರೆದಿದ್ದಾರೆ. ಪ್ರತಿ ದಿನ ಶಾಲೆಗೆ ತೆರಳುವಾಗ ಎದುರಾಗುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ತಡವಾಗುತ್ತಿದೆ ಎಂದು ಟ್ರಾಫಿಕ್ ಸಮಸ್ಯೆ, ರಸ್ತೆ ಸರಿಪಡಿಸಲು ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಭಾರಿ ವೈರಲ್ ಆಗಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ.
ಬೆಂಗಳೂರು ನಿವಾಸಿ ಅಭಿರೂಪ್ ಚಟರ್ಜಿಯ 5 ವರ್ಷದ ಪುತ್ರಿ ಬರೆದ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರು ಭೇಟಿ ಸಂದರ್ಭದಲ್ಲಿ ಹಲವು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುವ ನನ್ನ ಪುತ್ರಿ ಪತ್ರದ ಮೂಲಕ ಪ್ರಯತ್ನಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
5 ವರ್ಷದ ಬಾಲಕಿ ಬರೆದ ಪತ್ರದಲ್ಲಿ ಏನಿದೆ?
ನರೇಂದ್ರ ಮೋದಿ ಜಿ, ಇಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಇದೆ. ಇದರಿಂದ ನಾವು ಶಾಲೆಗೆ ತೆರಳುವಾಗ ವಿಪರೀತ ತಡವಾಗುತ್ತಿದೆ, ಜೊತೆಗೆ ಆಫೀಸ್ ತೆರಳುವವರಿಗೂ ತಡವಾಗುತ್ತಿದೆ. ಜೊತೆಗೆ ಇಲ್ಲಿನ ರಸ್ತೆ ಕೂಡ ಹಾಳಾಗಿದೆ. ದಯವಿಟ್ಟು ಸಹಾಯಮಾಡಿ ಎಂದು 5 ವರ್ಷದ ಬಾಲಕಿ ಆರ್ಯ ಪತ್ರ ಬರೆದಿದ್ದಾರೆ.
ಬೆಂಗಳೂರು ಕೆಲ ಭಾಗದಲ್ಲಿನ ಟ್ರಾಫಿಕ್ ಸಮಸ್ಯೆ ಕುರಿತು ಹಲವರು ಧ್ವನಿ ಎತ್ತಿದ್ದಾರೆ. ಈ ಬಾಲಕಿ ಪತ್ರದ ಅಭಿಪ್ರಾಯ ನಮ್ಮದು. ಪ್ರತಿ ದಿನ ಟ್ರಾಫಿಕ್ ಸಮಸ್ಯೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ. ರಸ್ತೆಗಳು ಹಾಳಾಗಿದೆ. ಜೊತೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಣ್ಮ ರಸ್ತೆಗಳು, ಅವೈಜ್ಞಾನಿಕ ಫ್ಲೈಓವರ್ ಸೇರಿದಂತೆ ಹಲವು ಸಮಸ್ಯೆಗಳು ಬೆಂಗಳೂರಿನ ಕೆಲ ಭಾಗದ ಟ್ರಾಫಿಕ್ ಸಮಸ್ಯೆ ಹೆಚ್ಚಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಲೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಬೆಂಗಳೂರಿಗೆ ಮಸಿ ಬಳಿಯು ಪ್ರಯತ್ನ ಎಂದಿದ್ದಾರೆ. ಬೆಂಗಳೂರಲ್ಲಿ ಟ್ರಾಫಿಕ್ ಇದೆ. ಇದು ಇತರ ಎಲ್ಲಾ ನಗರದಲ್ಲಿರುಂತೆ ಇಲ್ಲೂ ಇದೆ. ಆದರೆ ಇದೇ ಬೆಂಗಳೂರಿನ ಅತೀ ದೊಡ್ಡ ಸಮಸ್ಯೆ ರೀತಿ ಬಿಂಬಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮೋದಿ
ಬೆಂಗಳೂರಿನ ಟ್ರಾಫಿಕ್ ಸಮಸ್ಯಗೆ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಹಳದಿ ಮಾರ್ಗ ಉತ್ತರವಾಗಲಿದೆ. ನಾಳೆಯಿಂದ ಹಳದಿ ಮೆಟ್ರೋ ಮಾರ್ಗ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಿದೆ. ಆರ್‌ವಿ ರೋಡ್ ನಿಂದ ಬೊಮ್ಮಸಂದ್ರ ಮಾರ್ಗದ ಒಟಟಿ 19.3 ಕಿಲೋಮೀಟರ್ ಉದ್ದದ ಈ ರಸ್ತೆ ಮಾರ್ಗದಲ್ಲಿ 25 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಾಗಿದೆ. ಈ ಭಾಗದಲ್ಲಿ ಪ್ರತಿ ದಿನ ಓಡಾಡುವ ಮಂದಿಗೆ ಈ ಹಳದಿ ಮೆಟ್ರೋ ನೆರವಾಗಲಿದೆ. ಟ್ರಾಫಿಕ್, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.
ಹಳದಿ ಮೆಟ್ರೋ ಮಾರ್ಗದ ನಿಲ್ದಾಣಗಳು
- ಬೊಮ್ಮಸಂದ್ರ
- ಹೆಬ್ಬಗೋಡಿ
- ಹುಸ್ಕೂರ್ ರಸ್ತೆ
- ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ
- ಎಲೆಕ್ಟ್ರಾನಿಕ್ ಸಿಟಿ
- ಬೆರತೇನ ಅಗ್ರಹಾರ
- ಹೊಸ ರೋಡ್
- ಸಿಂಗಸಂದ್ರ
- ಕೂಡ್ಲು ಗೇಟ್
- ಹೊಂಗಸಂದ್ರ
- ಬೊಮ್ಮನಹಳ್ಳಿ
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬಿಟಿಎಂ ಲೇಔಟ್
- ಜಯದೇವ ಆಸ್ಪತ್ರೆ
- ರಾಗಿ ಗುಡ್ಡ ದೇವಸ್ಥಾನ
- ಆರ್.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ
