ಪ್ರಧಾನಿ ಮೋದಿ ಇಂದು ಬೆಂಗಳೂರಿನ ಹಳದಿ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದ ಹಳದಿ ಮೆಟ್ರೋ ಸಂಚಾರ ಆರಂಭಿಸುತ್ತಿದೆ. ರೈಲು ಸಮಯ, ನಿಲ್ದಾಣ, ಟಿಕೆಟ್ ದರ ಸೇರಿದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಬೆಂಗಳೂರು (ಆ.10) ಬೆಂಗಳೂರಿನ ಮೆಟ್ರೋ ರೈಲಿಗೆ ಹಳದಿ ಮೆಟ್ರೋ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.3 ಕಿಲೋಮೀಟರ್ ಉದ್ದದ ಈ ಮೆಟ್ರೋ ರೈಲು ಈ ಭಾಗದಲ್ಲಿ ಪ್ರತಿ ನಿತ್ಯ ಓಡಾಡುವ ಜನರಿಗೆ ನೆರವಾಗಲಿದೆ. ಇಷ್ಟೇ ಅಲ್ಲ ಟ್ರಾಫಿಕ್ ಕಿರಿಕಿರಿಗೂ ಉತ್ತರ ನೀಡಲಿದೆ.ನಾಳೆ (ಆ.11) ಬೆಳಗ್ಗೆ 6.30 ರಿಂದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳುತ್ತಿದೆ. ಒಟ್ಟು ಪ್ರಯಾಣದ 35 ನಿಮಿಷ.

16 ನಿಲ್ದಾಣ, ಎರಡು ಟರ್ಮಿನಲ್

ನಾಳೆ (ಆಗಸ್ಟ್ 11) ಬೆಳಗ್ಗೆ 6.30ಕ್ಕೆ ಹಳದಿ ಮೆಟ್ರೋ ಮೊದಲ ವಾಣಿಜ್ಯ ಸಂಚಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 6.30ಕ್ಕೆ ಹಳದಿ ಮೆಟ್ರೋ ಸಂಟಾರ ಆರಂಭಗೊಳ್ಳಲಿದೆ. ಭಾನುವಾರ ಮಾತ್ರ ಬೆಳಗ್ಗೆ 6.30ರ ಬದಲು 7 ಗಂಟೆಗೆ ಹಳದಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಒಟ್ಟು ಪ್ರಯಾಣಕ್ಕೆ 35 ನಿಮಿಷ ತೆಗೆದುಕೊಳ್ಳಲಿದೆ. ಈ ಮೆಟ್ರೋ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ.ಎರಡು ಟರ್ಮಿನಲ್‌ಗಳಿವೆ.

ಪ್ರತಿ ದಿನದ ಕೊನೆಯ ರೈಲು ಎಷ್ಟು ಗಂಟೆಗೆ

ಹಳದಿ ಮೆಟ್ರೋ ಮಾರ್ಗದಲ್ಲಿ ಪ್ರತಿನಿತ್ಯ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42 ಕ್ಕೆ ಹೊರಡಲಿದೆ. ಇತ್ತ ಆ‌ರ್.ವಿ.ರೋಡ್ ಇಂಟ‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಹೊರಡಲಿದೆ. ಬೊಮ್ಮಸಂದ್ರದಿಂದ ಬೆಳಿಗ್ಗೆ 6.30‌ಕ್ಕೆ ಮೊದಲ ರೈಲು ಹೊರಟರೆ, ಆರ್.ವಿ.ರಸ್ತೆಯಿಂದ ಬೆಳಿಗೆ 7.10 ಕ್ಕೆ ಮೊದಲ ರೈಲು ಹೊರಡಲಿದೆ.

ಪ್ರತಿ 25 ನಿಮಿಕ್ಕೊಮ್ಮೆ ರೈಲು ಸೇವೆ

ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ನಡುವೆ ಪ್ರತಿ 25 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸೇವೆ ಲಭ್ಯವಿದೆ. ಆದರೆ ಪ್ರತಿ ದಿನ ರಾತ್ರಿ 10 ಗಂಟೆ ಬಳಿಕ ರೈಲು ಸೇವೆಯಲ್ಲಿ ಕಡಿಮೆಯಾಗಲಿದೆ. ಭಾನುವಾರ ಮೆಟ್ರೋ ಸಂಚಾರ ಸೇವೆ ಕಡಿಮೆ ಇರಲಿದೆ. ಈ ಮಾರ್ಗದಲ್ಲಿನ ಪ್ರಯಾಣಿಕರ ಸಂಖ್ಯೆ, ಪ್ರತಿಕ್ರಿಯೆಗೆ ಅನುಗುವಣಾಗಿ ರೈಲು ಸಂಖ್ಯೆ ಹೆಚ್ಚಿಸುವ ಸಾಧ್ಯತೆ ಇದೆ.

ಹಳದಿ ಮೆಟ್ರೋ ಮಾರ್ಗದ ಬೆಲೆ

ಹಳಿ ಮೆಟ್ರೋ ಮಾರ್ಗದ ಟಿಕೆಟ್ ಬೆಲೆ 60 ರೂಪಾಯಿ

ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ನಿಲ್ದಾಣ

- ಬೊಮ್ಮಸಂದ್ರ

- ಹೆಬ್ಬಗೋಡಿ

- ಹುಸ್ಕೂರ್ ರಸ್ತೆ

- ಇನ್ಫೋಸಿಸ್‌ ಫೌಂಡೇಶನ್ ಕೋನಪ್ಪನ ಅಗ್ರಹಾರ

- ಎಲೆಕ್ಟ್ರಾನಿಕ್‌ ಸಿಟಿ

- ಬೆರತೇನ ಅಗ್ರಹಾರ

- ಹೊಸ ರೋಡ್

- ಸಿಂಗಸಂದ್ರ

- ಕೂಡ್ಲು ಗೇಟ್

- ಹೊಂಗಸಂದ್ರ

- ಬೊಮ್ಮನಹಳ್ಳಿ

- ಸೆಂಟ್ರಲ್ ಸಿಲ್ಕ್ ಬೋರ್ಡ್

- ಬಿಟಿಎಂ ಲೇಔಟ್

- ಜಯದೇವ ಆಸ್ಪತ್ರೆ

- ರಾಗಿ ಗುಡ್ಡ ದೇವಸ್ಥಾನ

- ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ

ತಲುಪಿಲ್ಲ ಡ್ರೈವರ್ ಲೆಸ್ ರೈಲು

ಮೆಟ್ರೋ ಈಗಾಗಲೇ ಮಹತ್ವಾಕಾಂಕ್ಷಿ ಚಾಲಕ ರಹಿತ ರೈಲು ಓಡಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಆದರೆ ಡ್ರೈವರ್ ಲೆಸ್ ರೈಲು ಇನ್ನೂ ಭಾರತ ತಲುಪಿಲ್ಲ. ಈ ಡ್ರೈವರ್ ಲೆಸ್ ರೈಲನ್ನು ಇದೇ ಹಳದಿ ಮಾರ್ಗದಲ್ಲಿ ಓಡಿಸಲು ನಿರ್ಧರಿಸಲಾಗಿದೆ. ಸದ್ಯ ಹಳದಿ ಮೆಟ್ರೋ ಮಾರ್ಗದಲ್ಲಿ ಮೂರು ರೈಲುಗಳು ನಾಳೆಯಿಂದ ಸಂಚಾರ ಆರಂಭಿಸಲಿದೆ. ಈ ಮಾರ್ಗದಲ್ಲಿ ಮುಂದಿನ ದಿನಗಳಲ್ಲಿ 15 ರೈಲು ಸೇವೆ ನೀಡಲಿದೆ. ಆರಂಭಿಕ ಹಂತದಲ್ಲಿ ಪ್ರತಿನಿತ್ಯ 25 ರಿಂದ 30 ಸಾವಿರ ಪ್ರಯಾಣಿಕರು ಪ್ರಯಾಣ ಮಾಡುವ ಸಾಧ್ಯತೆ ಇದೆ. ಈ ಸಂಖ್ಯೆ ದಿನದಿಂದ ದಿನದಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.