Amruthadhaare Serial: ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?
ಭೂಮಿಕಾ ಮತ್ತು ಮಗುವನ್ನು ಕೊಲ್ಲಿಸಲು ಅಪಘಾತ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ ಜೈದೇವ್ ಮತ್ತು ಶಕುಂತಲಾ. ಈ ಪ್ಲ್ಯಾನ್ನಲ್ಲಿ ಅರಿಯದೇ ತನ್ನ ಸ್ವಂತ ಮಗ ಪಾರ್ಥನನ್ನೇ ಬಲಿ ಕೊಡ್ತಾಳಾ ಶಕುಂತಲಾ? ಏನಿದು ಅಮೃತಧಾರೆ ಸೀರಿಯಲ್ ಟ್ವಿಸ್ಟ್?

ಶಕುಂತಲಾ ಮತ್ತು ಭೂಮಿಕಾ ನಡುವೆ ಸಮರ
ಸದ್ಯ ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಶಕುಂತಲಾ ನಡುವೆ ಸಮರ ಶುರುವಾಗಿದೆ. ಶಕುಂತಲಾಗೆ ತಾನು ಸೋಲುವುದು ಖಚಿತವಾಗಿದೆ. ಭೂಮಿಕಾ ಬದುಕಿದ್ದರೆ ಅದು ತನ್ನ ಸರ್ವನಾಶ ಎನ್ನುವುದು ತಿಳಿದಿದೆ. ತಾನು ಏನೇ ಕುತಂತ್ರ ಮಾಡಿದರೂ, ಅದು ಗೌತಮ್ಗೆ ತಿಳಿಯುವುದಿಲ್ಲ ಎನ್ನುವುದೂ ಅವಳಿಗೆ ಗೊತ್ತಾಗಿದೆ. ಏಕೆಂದರೆ ಗೌತಮ್ ತನ್ನನ್ನು ಅಷ್ಟು ಕುರುಡಾಗಿ ನಂಬಿದ್ದಾನೆ ಎನ್ನುವುದು ಅವಳಿಗೆ ಗೊತ್ತು.
ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್
ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಶಕುಂತಲಾ ಭೂಮಿಕಾ ಮತ್ತು ಮಗುವನ್ನು ಕೊಲ್ಲುವ ಸಂಚು ಹೂಡಿದ್ದಾಳೆ. ಅತ್ತ ಗೌತಮ್ಗೆ ಮಗಳು ಸಿಕ್ಕಿರುವ ಖುಷಿ ಇದೆ. ಪೊಲೀಸರು ಫೋನ್ ಮಾಡಿ ಒಂದು ಮಗು ಸಿಕ್ಕಿದ್ದು ಅದು ನಿಮ್ಮದೇ ಇರಬಹುದು ಎಂದಿದ್ದಾರೆ. ಆ ಮಗು ಸಿಕ್ಕಿರುವುದರಿಂದ ಆನಂದ್ ಜೊತೆ ಆತ ಅತ್ತ ಹೋಗುತ್ತಿದ್ದಂತೆಯೇ ಇತ್ತ ಶಕುಂತಲಾ ಜೈದೇವನ ಸಹಾಯ ಪಡೆದು ಇಬ್ಬರನ್ನೂ ಮುಗಿಸಲು ಸ್ಕೆಚ್ ಹಾಕಿದ್ದಾಳೆ.
ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್
ಭೂಮಿಕಾ ಮತ್ತು ಮಗು ಆಸ್ಪತ್ರೆಗೆ ಹೋಗಲು ರೆಡಿಯಾಗಿದ್ದಾರೆ. ಡ್ರೈವರ್ ಬಳಿ ಭೂಮಿಕಾ ಮಾತನಾಡುವುದನ್ನು ನೋಡಿದ ಶಕುಂತಲಾ ಜೈದೇವ್ಗೆ ಕರೆ ಮಾಡಿ, ಆ್ಯಕ್ಸಿಡೆಂಟ್ ಮಾಡಿಸಲು ಜೈದೇವ್ ಜೊತೆ ಸ್ಕೆಚ್ ಹಾಕಿದ್ದಾಳೆ. ಆದರೆ ಆಕೆ ಅತ್ತ ಹೋಗುತ್ತಿದ್ದಂತೆಯೇ ಇತ್ತ ಪಾರ್ಥ ಭೂಮಿಕಾಗೆ ತಾನು ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಭೂಮಿಕಾ ಬೇಡ ಎಂದರೂ ಕೇಳದೇ ನಾನೇ ಕರೆದುಕೊಂಡು ಹೋಗುವುದಾಗಿ ಹೇಳಿ ಡ್ರೈವರ್ ಅನ್ನು ಬಿಟ್ಟು ತಾನು ಡ್ರೈವ್ ಮಾಡಿದ್ದಾನೆ.
ಅರಿಯದೇ ಮಗನನ್ನು ಬಲಿಕೊಡಲು ಹೊರಟ ಶಕುಂತಲಾ
ಇದು ಶಕುಂತಲಾಗೆ ಗೊತ್ತಿಲ್ಲ. ಭೂಮಿಕಾ ಮತ್ತು ಮಗುವಿನ ಜೊತೆ ಡ್ರೈವರ್ ಸತ್ತರೆ ಸಾಯಲಿ ಬಿಡು ಎಂದು ಹೇಳುತ್ತಲೇ ಆ್ಯಕ್ಸಿಡೆಂಟ್ ಪ್ಲ್ಯಾನ್ ಮಾಡಿಸಿದ್ದಾರೆ. ಲಾರಿಯೊಂದು ಬಂದು ಕಾರಿಗೆ ಗುದ್ದಿರುವ ಪ್ರೊಮೋ ಕೂಡ ಇದಾಗಲೇ ಅಪ್ಲೋಡ್ ಆಗಿತ್ತು. ಪಾರ್ಥನ ಜೀವ ಹೋಗತ್ತಾ, ಅಥವಾ ಡ್ರೈವಿಂಗ್ ಮಾಡ್ತಿರೋದು ಪಾರ್ಥನೇ ಎಂದು ತಿಳಿದು ಅಪಘಾತವನ್ನು ಶಕುಂತಲಾ ಸ್ಟಾಪ್ ಮಾಡಿಸ್ತಾಳಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಆ್ಯಕ್ಸಿಡೆಂಟ್ ಆದರೆ ಮುಂದೇನು?
ಒಂದು ವೇಳೆ ಆ್ಯಕ್ಸಿಡೆಂಟ್ ಆಗದೇ ಹೋದರೆ, ಲಾರಿ ಚಾಲಕನನ್ನು ಹಿಡಿದು ಥಳಿಸಿದರೆ ಆತ ಶಕುಂತಲಾ ಮತ್ತು ಜೈದೇವ್ ಹೆಸರು ಹೇಳುತ್ತಾನೆ. ಅಲ್ಲಿಗೆ ಗೌತಮ್ಗೆ ಎಲ್ಲಾ ವಿಷಯ ತಿಳಿಯುತ್ತೆ, ಅತ್ತ ಮಗಳು ಕೂಡ ಸಿಕ್ಕಿದ್ದಾಳೆ. ಹೀಗೆ ಆದರೆ ಸೀರಿಯಲ್ ಒಂದೇ ವಾರದಲ್ಲಿ ಮುಗಿಯತ್ತೆ. ಆದರೆ ಆ್ಯಕ್ಸಿಡೆಂಟ್ ಮಾಡಿಸಿ ಪಾರ್ಥ ಆಸ್ಪತ್ರೆಗೆ ಸೇರಿ... ಇನ್ನೇನೋ ಅವಾಂತರ ಆದರೆ ಮತ್ತಷ್ಟು ವರ್ಷ ಸೀರಿಯಲ್ ಮುಂದುವರೆಯತ್ತದೆ.
ಸಹನೆ ಮಿತಿಮೀರಿ ಸಿಡಿದೆದ್ದ ಭೂಮಿಕಾ
ಅಷ್ಟಕ್ಕೂ ಭೂಮಿಕಾ, ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಾಗಿದೆ. ಅತ್ತೆ ಶಕುಂತಲಾ ಎಂದ ಕುತಂತ್ರಿ ಎಂದು ಗೊತ್ತಿದ್ದರೂ ಭೂಮಿಕಾಗೆ ಏನೂ ಮಾಡಲು ಆಗದ ಸ್ಥಿತಿ. ಏಕೆಂದರೆ ಸಾಕಿರೊ ಅಮ್ಮನನ್ನು ಅಷ್ಟು ನಂಬಿದ್ದಾನೆ ಗೌತಮ್. ಆದರೆ ಇದಾಗಲೇ ಶಕುಂತಲಾಳ ಬಣ್ಣ ಬಯಲಾಗಿದೆ. ಆದರೆ, ಅವಳಿಗೆ ಅವಳದ್ದೇ ಭಾಷೆಯಲ್ಲಿ ಭೂಮಿಕಾಗೆ ಹೇಳಬೇಕಿದೆ. ಮಗುವನ್ನು ಸಾಯಿಸಲು ಬಂದಿರೋ ವಿಷ್ಯ ತಿಳಿಯುತ್ತಲೇ ಅವಳು ಕೆಂಡಾಮಂಡಲ ಆಗಿದ್ದಾಳೆ. ಆದರೆ ಇದೀಗ ಶಕುಂತಲಾ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದಾಳೆ.
ಗಂಡನ ಬಗ್ಗೆ ಮಾತನಾಡಿದ್ದಕ್ಕೆ ಭೂಮಿಕಾ ಗರಂ
ನಿನ್ನ ಗಂಡ ಗೌತಮ್ ನಾನು ಸಾಕಿರೋ ನಾಯಿ, ಅವನಿಗೆ ನನ್ನ ವಿಷ್ಯ ನೀನು ಏನೇ ಹೇಳಿದ್ರೂ ನಂಬಲ್ಲ ಎಂದಿದ್ದಾಳೆ. ಗಂಡನ ಬಗ್ಗೆ ಈ ರೀತಿಯ ಮಾತು ಕೇಳಿ ಕೆಂಡಾಮಂಡಲವಾದ ಭೂಮಿಕಾ, ಅತ್ತೆಯ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಶಕುಂತಲಾ ಗಡಗಡ ನಡುಗಿ ಹೋಗಿದ್ದಾಳೆ.
ಭೂಮಿಕಾ ತಿರುಗೇಟು
ತಿರುಗೇಟು ನೀಡಿದೋ ಭೂಮಿಕಾ, ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದಿದ್ದಾಳೆ. ಅಡಕತ್ತರಿಯಲ್ಲಿ ಸಿಲುಕಿದ ಅನುಭವವಾಗಿದೆ ಶಕುಂತಲಾಗೆ. ಇದರಿಂದ ಆಕೆಯನ್ನೇ ಮುಗಿಸುವ ಪ್ಲ್ಯಾನ್ ಮಾಡಿದ್ದಾಳೆ.
ಮುಂದೇನು?
ಈ ಪ್ಲ್ಯಾನ್ ಶಕುಂತಲಾಗೆ ತಿರುಗೇಟು ಆಗತ್ತಾ? ಗೌತಮ್ಗೆ ಮಗಳು ಸಿಕ್ತಾಳಾ? ಸಿಕ್ಕಿರೋ ಮಗು ಅವರದ್ದೇನಾ? ಶಕುಂತಲಾ ಮುಂದಿನ ನಡೆ ಏನು? ಇಷ್ಟು ಕುತೂಹಲ ಸದ್ಯ ವೀಕ್ಷಕರಿಗೆ ಇದೆ.