LIVE NOW
Published : Aug 07, 2026, 07:26 AM ISTUpdated : Aug 07, 2026, 11:29 PM IST

State News Live: Wow.. ಕರ್ನಾಟಕದಲ್ಲೇ ಇಂತಹ ಜಲಪಾತಗಳಿವೆಯಾ? ಈ 6 ತಾಣಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ!

ಸಾರಾಂಶ

ಬೆಂಗಳೂರು (ಆ.7): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಜೆನ್‌ಝೀಗಳು ನಡೆಸಿದ ಪ್ರತಿಭಟನೆಯ ತೀವ್ರತೆ ಮನಗಂಡು ಎಚ್ಚೆತ್ತಿರುವ ರಾಜ್ಯ ಸರ್ಕಾರ, ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸಿದೆ. ಆಗಸ್ಟ್ 8 ಮತ್ತು 9 ರಂದು ನಿಗದಿಯಾಗಿದ್ದ 945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ಪರಿಶೀಲನೆಗಾಗಿ ವಿಶೇಷ ತಜ್ಞರ ಸಮಿತಿ ರಚಿಸಿ, 15 ದಿನಗಳೊಳಗೆ ವರದಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:29 PM (IST) Aug 07

Wow.. ಕರ್ನಾಟಕದಲ್ಲೇ ಇಂತಹ ಜಲಪಾತಗಳಿವೆಯಾ? ಈ 6 ತಾಣಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ!

ಕರ್ನಾಟಕ ಎಂದರೆ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳು ಮಾತ್ರವಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಕಾಡು, ಬೆಟ್ಟ ಹಾಗೂ ಕಣಿವೆಗಳ ನಡುವೆ ಹಲವು ಅಪರೂಪದ ಜಲಪಾತಗಳು ಜೀವ ಪಡೆದುಕೊಳ್ಳುತ್ತವೆ.

Read Full Story

09:14 PM (IST) Aug 07

ಹಾರ್ದಿಕ್‌ಗೆ ಬಿಗ್‌ ಆಫರ್; ಪಾಂಡ್ಯ ಬೇಕಾದ್ರೆ ಆ ಇಬ್ಬರನ್ನು ಕೊಡಿ; KKR ಮುಂದೆ ಅತಿದೊಡ್ಡ ಕಂಡೀಷನ್ ಇಟ್ಟ ಮುಂಬೈ ಇಂಡಿಯನ್ಸ್!

ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ್, ಚೆನ್ನೈ ಬಳಿಕ ಇದೀಗ ಕೆಕೆಆರ್ ಕೂಡ ಆಸಕ್ತಿ ತೋರಿದೆ. ಆದರೆ, ಪಾಂಡ್ಯರನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ಮುಂದೆ ಆ ಇಬ್ಬರು ಆಟಗಾರರನ್ನು ನೀಡಬೇಕೆಂಬ ದೊಡ್ಡ ಷರತ್ತು ಇಟ್ಟಿದೆ ಎನ್ನಲಾಗಿದೆ.

Read Full Story

09:03 PM (IST) Aug 07

ರಾಕೇಶ್ ಅಡಿಗ ಮದುವೆ ಫಿಕ್ಸ್ - 'ನನಗೆ ಬೇಕಾದ ಹುಡುಗಿ ಸಿಕ್ಕಿದ್ದಾರೆ' ಎಂದ ಬಿಗ್‌ ಬಾಸ್ ಖ್ಯಾತಿಯ ನಟ!

‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಬಳಿಕ ‘ಬಿಗ್ ಬಾಸ್’ ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Read Full Story

08:33 PM (IST) Aug 07

‘ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ’ - ಕೈಮಗ್ಗಕ್ಕೆ ಸರ್ಕಾರದ ಬಿಗ್ ಪ್ಲ್ಯಾನ್

Karnataka Handloom: ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ..

Read Full Story

08:21 PM (IST) Aug 07

BOSS Review - 'ಬಾಸ್' ಸಿನಿಮಾದಲ್ಲಿ ಇರೋದು ಯಾವ ಬಾಸ್‌? ಯಾವ ಕ್ರಿಕೆಟಿಗ..? ಕಥೆ ನೋಡಿ ನೀವೇ 'ಡಾಟ್' ಕನೆಕ್ಟ್ ಮಾಡ್ಕೊಳ್ಳಿ!

'ಬಾಸ್' ಸಿನಿಮಾ ಕೇವಲ ಮನರಂಜನೆಗಿಂತ ಹೆಚ್ಚಾಗಿ, ಸಮಾಜದಲ್ಲಿ ಸ್ಟಾರ್‌ಡಮ್ ಮತ್ತು ಕಾನೂನಿನ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ದೊಡ್ಡ ಸೆಲೆಬ್ರಿಟಿಗಳ ಸುತ್ತ ಫ್ಯಾನ್ಸ್ ಮತ್ತು ವಿವಾದಗಳು ಹೇಗೆ ಸುತ್ತಿಕೊಳ್ಳುತ್ತವೆ ಎಂಬುದಕ್ಕೆ ಈ ಸಿನಿಮಾ ಒಂದು ಕೈಗನ್ನಡಿ. ನಿಜವಾಗಿಯೂ ಬಾಸ್ ಸಿನಿಮಾದಲ್ಲಿ ಏನಿದೆ?

Read Full Story

08:19 PM (IST) Aug 07

Yash Ravana Voice - ‘ರಾಮಾಯಣ’ ಇಂಗ್ಲಿಷ್ ಟ್ರೇಲರ್‌ನ ಹಿಂದಿರುವ ಧ್ವನಿ ಇವರದ್ದೇ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಇದೀಗ ಬಿಡುಗಡೆಯಾಗಿರುವ ಚಿತ್ರದ ಇಂಗ್ಲಿಷ್ ಟ್ರೇಲರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Read Full Story

08:01 PM (IST) Aug 07

RBI - ಸಾಲಗಾರರಿಗೆ ದೊಡ್ಡ ರಿಲೀಫ್! ಲೋನ್ ಡಿಫಾಲ್ಟ್ ಆದ್ರೂ ಡಿವೈಸ್ ಲಾಕ್ ಮಾಡೋ ಹಾಗಿಲ್ಲ! ರಿಸರ್ವ್ ಬ್ಯಾಂಕ್‌ನಿಂದ ಹೊಸ ರೂಲ್ಸ್‌!

ಸಾಲ ಮರುಪಾವತಿ ಮಾಡದ ಗ್ರಾಹಕರ ಫೋನ್‌ಗಳನ್ನು ಬ್ಯಾಂಕ್‌ಗಳು ರಿಮೋಟ್ ಆಗಿ ಲಾಕ್ ಮಾಡುವಂತಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆದರೆ, ನಿರ್ದಿಷ್ಟವಾಗಿ 'ಡಿವೈಸ್ ಲೋನ್' ಪಡೆದು ಅದನ್ನು ಮರುಪಾವತಿಸದಿದ್ದಲ್ಲಿ ಮಾತ್ರ, ಮುಂಚಿತ ಮಾಹಿತಿ ನೀಡಿ ಆ ಸಾಧನವನ್ನು ಸ್ಥಗಿತಗೊಳಿಸಲು ಅವಕಾಶವಿದೆ.

Read Full Story

07:03 PM (IST) Aug 07

ನೇಣಿಗೆ ಕೊರಳೊಡ್ಡಿದ ಉಡುಪಿಯ ಖ್ಯಾತ ಮಾಡೆಲ್​ - ಜೀವ ಕೊನೆಗಾಣಿಸಿದ್ಯಾಕೆ ಕೃತಿ ಬಂಗೇರಾ

ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
Read Full Story

06:43 PM (IST) Aug 07

7 ದಿನಗಳಲ್ಲಿ ಮಳಿಗೆ ಖಾಲಿ ಮಾಡಿ! ಗಂಗಾವತಿಯಲ್ಲಿ 11 ಮಾಲೀಕರಿಗೆ ನಗರಸಭೆ ನೋಟಿಸ್

Gangavathi News: ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ..

Read Full Story

06:37 PM (IST) Aug 07

Rehane - ಗಾವಸ್ಕರ್ Vs ತೆಂಡೂಲ್ಕರ್; ಯಾರು ಗ್ರೇಟ್? ಕ್ಷಣಕಾಲ ಮೌನಕ್ಕೆ ಜಾರಿದ ರಹಾನೆ ಕೊಟ್ಟ 'ಮಾಸ್‌' ಉತ್ತರ ಹೀಗಿತ್ತು!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆ, ಸಂದರ್ಶನವೊಂದರಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಯಾರು ಎಂಬ ಕಠಿಣ ಪ್ರಶ್ನೆಗೆ ಉತ್ತರಿಸಿದ್ದಾರೆ. ಸುನಿಲ್ ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ, ಅವರು ಈ ಹೆಸರನ್ನು ಆಯ್ಕೆ ಮಾಡಿ, ತಮ್ಮ ಆಯ್ಕೆಗೆ ಕಾರಣವನ್ನು ವಿವರಿಸಿದ್ದಾರೆ.

Read Full Story

06:32 PM (IST) Aug 07

ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ - ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!

‘ಅಯೋಗ್ಯ’ ಸಿನಿಮಾ ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ ‘ಅಯೋಗ್ಯ 2’ ರೂಪದಲ್ಲಿ ತೆರೆಗೆ ಬಂದಿದೆ.

Read Full Story

06:16 PM (IST) Aug 07

ಮೊದಲ ಭಾಗಕ್ಕಿಂತ ‘ಅಯೋಗ್ಯ 2’ ಹೇಗಿರಲಿದೆ? ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದೇನು?

Ayogya 2: ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ ‘ಅಯೋಗ್ಯ 2’ ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ.

Read Full Story

05:57 PM (IST) Aug 07

Politics - ಅದಲು ಬದಲಾಗುತ್ತಾ ಡಿಕೆ ಸಂಪುಟ? ಇವರೇನಾ ಹೊಸ ಸಚಿವರು; ಯಾರು ಇನ್‌ ಯಾರು ಔಟ್; ಬಂಡಾಯ ಶಮನಕ್ಕೆ ಬಂಡೆ ರಣತಂತ್ರ!

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಅಸಮಾಧಾನ ಭುಗಿಲೆದ್ದಿದ್ದು, ಮಹಿಳಾ ಕೋಟಾ ಭರ್ತಿ ಹಾಗೂ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾರು ಸಚಿವರಾಗುತ್ತಾರೆ ಮತ್ತು ಯಾರು ಸ್ಥಾನ ಕಳೆದುಕೊಳ್ಳುತ್ತಾರೆ? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

05:17 PM (IST) Aug 07

ಬೆಂಗಳೂರು ಜೈಲು ಸೇರಿದ್ದ ಜಪಾನ್ ಪ್ರಜೆ! ಜಪಾನ್‌ನಿಂದಲೇ ಪೊಲೀಸರ ವಿರುದ್ಧ ಗೆದ್ದ ಹಿರೋ.. ಇಲ್ಲಿ ಪ್ರೇಮ ಕತೆಯೂ ಇದೆ!

ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದ ಜಪಾನ್‌ನ ಹಿರೋಟೋಶಿ ತನಕಾ, ಇಲ್ಲಿನ ಜೈಲು ಸೇರಿ, ಪೊಲೀಸ್ ಭ್ರಷ್ಟಾಚಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಾರೆ. ಜಪಾನ್‌ನಿಂದಲೇ ಸಮರ ಸಾರಿ ಗೆಲ್ಲುವ ಅವರ ಈ ರೋಚಕ ಪಯಣದಲ್ಲಿ, ಅವರಿಗೆ ಬೆಂಗಳೂರಿನಲ್ಲೇ ಒಬ್ಬ ಜೀವದ ಗೆಳತಿಯೂ ಸಿಗುತ್ತಾರೆ.
Read Full Story

05:02 PM (IST) Aug 07

‘ರಾಮಾಯಣ’ಕ್ಕೆ ವಿಶ್ವದಾಖಲೆಯ ರಿಲೀಸ್ ಪ್ಲ್ಯಾನ್ - 59000 ಸ್ಕ್ರೀನ್‌ಗಳಲ್ಲಿ ಲಂಕಾಧಿಪತಿ ಯಶ್ ಅಬ್ಬರ!

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 59,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ ಎಂದು ವರದಿಯಾಗಿದೆ.

Read Full Story

04:55 PM (IST) Aug 07

Science - ವಿಜ್ಞಾನ ಲೋಕದಲ್ಲೊಂದು ಅಪರೂಪದ ಶೋಧ! 12 ವರ್ಷಗಳ ಸುದೀರ್ಘ ಹುಡುಕಾಟದ ಬಳಿಕ 'ಡೈಮಂಡ್ ಫ್ರಾಗ್' ರಹಸ್ಯ ಭೇದಿಸಿದ ವಿಜ್ಞಾನಿಗಳು

ಮಡಗಾಸ್ಕರ್‌ನಲ್ಲಿ ವಿಜ್ಞಾನಿಗಳು 'ರೋಂಬೊಫ್ರೈನ್' ಕುಲಕ್ಕೆ ಸೇರಿದ ಏಳು ಹೊಸ ಜಾತಿಯ ವಜ್ರ ಕಪ್ಪೆಗಳನ್ನು ಪತ್ತೆಹಚ್ಚಿದ್ದಾರೆ. ಡಿಎನ್‌ಎ ವಿಶ್ಲೇಷಣೆ ಮತ್ತು ಸಿಟಿ ಸ್ಕ್ಯಾನ್‌ಗಳಂತಹ ಆಧುನಿಕ ತಂತ್ರಜ್ಞಾನ ಬಳಸಿ ಈ ಆವಿಷ್ಕಾರ ಮಾಡಲಾಗಿದ್ದು, ಇದು ದ್ವೀಪದ ಅಪಾರ ಜೀವವೈವಿಧ್ಯತೆ ಮತ್ತು ಅದರ ಸಂರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.
Read Full Story

04:52 PM (IST) Aug 07

ಮೋದಿ ಹಾದಿಯಲ್ಲೇ ಡಿಕೆಶಿ! 3 ಹೊಸ ಲಾಲ್ ಬಾಗ್ ಮಾದರಿಯ ಉದ್ಯಾನಕ್ಕಾಗಿ ರಕ್ಷಣಾ ಇಲಾಖೆ ಭೂಮಿ ಮೇಲೆ ಸಿಎಂ ಕಣ್ಣು

ನಗರದ ಹಸಿರು ಸಿರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಹತ್ತರ ಯೋಜನೆ ರೂಪಿಸಿದೆ. ಲಾಲ್ ಬಾಗ್ ಮಾದರಿಯಲ್ಲಿ ನಗರದ ಮೂರು ಕಡೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಅನುಸರಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿಇದೆ.

Read Full Story

04:40 PM (IST) Aug 07

ನಟನೆಯಷ್ಟೇ ಅಲ್ಲ, ವಿತರಣೆಯಲ್ಲೂ ಯಶ್ - ಕೆವಿಎನ್ ಜೊತೆ ‘ಟಾಕ್ಸಿಕ್’ ಡಿಸ್ಟ್ರಿಬ್ಯೂಷನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಬಿಡುಗಡೆಯ ಮುನ್ನವೇ ಸದ್ದು ಮಾಡುತ್ತಿದೆ. ಸಿನಿಮಾ ಯಾವ ಮಟ್ಟಿಗೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲಿದೆ.

Read Full Story

04:26 PM (IST) Aug 07

ಸಿಎಂ ವಿಜಯ್ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್, ಪತ್ನಿ ಸಂಗೀತಾ ನಡೆಯಿಂದ ಅನಿರೀಕ್ಷಿತ ನಡೆ, ಪ್ರಕರಣ ಕ್ಲೋಸ್!

8 ತಿಂಗಳ ಹಿಂದೆ ನಟ ಹಾಗೂ ಪ್ರಸ್ತುತ ತಮಿಳನಾಡಿನ ಸಿಎಂ ಆಗಿರುವ ‘ದಳಪತಿ’ ಖ್ಯಾತಿಯ ನಟ ವಿಜಯ್ ಜೋಸೆಫ್ ಅವರೊಂದಿಗೆ ದಾಂಪತ್ಯ ವಿರಸ ಹೊಂದಿದ್ದ ಪತ್ನಿ ಸಂಗೀತಾ ಅವರು ಚೆನ್ನೈ ಕೋರ್ಟ್‌ಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಕೋರ್ಟ್ ವಿಚಾರಣೆಗೆ ಈ ಜೋಡಿ ಹಾಜರಾಗಿರಲಿಲ್ಲ.

Read Full Story

04:25 PM (IST) Aug 07

ಬೆಂಗಳೂರು ಪೊಲೀಸ್‌ ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆ! 63 ವರ್ಷಗಳ ನಂತರ 5 ಭಾಗವಾಗಿ ವಿಭಜನೆ; 6,633 ಹೊಸ ಪೊಸ್ಟ್!

ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಸ್ವತಂತ್ರ ಕಮಿಷನರೇಟ್‌ಗಳಾಗಿ ವಿಭಜಿಸುವ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದೆ.

Read Full Story

04:23 PM (IST) Aug 07

ಸೋಲುಗಳ ನಡುವೆಯೇ ಕನ್ನಡತಿ ಶ್ರೀಲೀಲಾಗೆ ಬಿಗ್ ಬ್ರೇಕ್ - ರಜನಿಕಾಂತ್ ಚಿತ್ರಕ್ಕೆ ನಾಯಕಿ!

ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸತತವಾಗಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಇದೀಗ ಮತ್ತೊಂದು ಬಹುದೊಡ್ಡ ಅವಕಾಶದ ಮೂಲಕ ಸುದ್ದಿಯಲ್ಲಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯಿಸಲಿರುವ..

Read Full Story

04:09 PM (IST) Aug 07

Viral - ಅಯ್ಯೋ ದೇವರೇ ದೆವ್ವದ ಕಾಟವೋ? ಭೂಕಂಪದ ಸೂಚನೆಯೋ? ಬಾವಿಯ ನೀರು ತನ್ನಷ್ಟಕ್ಕೆ ತಾನೇ ಅಲ್ಲಾಡ್ತಿದೆ!

ಗುಜರಾತ್‌ನ ಮೋರ್ಬಿ ಬಳಿಯ ಗ್ರಾಮವೊಂದರಲ್ಲಿ ಬಾವಿಯ ನೀರು ತಾನಾಗಿಯೇ ಚಲಿಸುತ್ತಿರುವುದು ನಿಗೂಢತೆಗೆ ಕಾರಣವಾಗಿದೆ. ಈ ವಿಚಿತ್ರ ವಿದ್ಯಮಾನವು ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದ್ದು, ಅಧಿಕಾರಿಗಳು ಇದು ಭೂಕಂಪವಲ್ಲ ಎಂದು ಸ್ಪಷ್ಟಪಡಿಸಿ, ತನಿಖೆ ನಡೆಸುತ್ತಿದ್ದಾರೆ.
Read Full Story

02:54 PM (IST) Aug 07

YASH - ಕನ್ನಡ ಸಿನಿಮಾ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ; ಜಗತ್ತನ್ನೇ ಹುಚ್ಚೆಬ್ಬಿಸಿರುವ ಯಶ್ ಈವೆಂಟ್‌ ನಡೆಯೋದು ಬೆಂಗಳೂರಿನಲ್ಲಿ!

ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿದಂತೆ ಅತೀ ದೊಡ್ಡ ನಟಿಯರ ಬಳಗ ಈ ಟಾಕ್ಸಿಕ್ ಚಿತ್ರದಲ್ಲಿದೆ. ಈಗಾಗಲೇ ಯಶ್-ಕಿಯಾರಾ ಅಡ್ವಾಣಿಯ 'ತಬಾಹಿ' ಹಾಡು ಹಾಗೂ ಯಶ್-ತಾರಾ ಸುತಾರಿಯಾ 'ಮನಮೋಹಕ' ಹಾಡು ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ. ನಾಳೆ ಟ್ರೇಲರ್ ರಿಲೀಸ್..

Read Full Story

02:43 PM (IST) Aug 07

ಪ್ರಯಾಣಕ್ಕೆ ತಯಾರಿ ನಡೆಸಿದ್ದೀರಾ? Be Careful - ಬೆಂಗಳೂರು ಸೇರಿ ಎಲ್ಲೆಲ್ಲಿ ಬಿರುಗಾಳಿ- ಭಾರಿ ಮಳೆ ಸೂಚನೆ

ಭಾರತ ಹವಾಮಾನ ಇಲಾಖೆಯು ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದ್ದು, ಸಂಚಾರಕ್ಕೆ ಅಡಚಣೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
Read Full Story

02:27 PM (IST) Aug 07

ಫಲಿಸದ ಪ್ರಯತ್ನ.. ಸಿಎಂ ಭೇಟಿ ಬೆನ್ನಲ್ಲೇ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ

ರಾಜ್ಯ ರಾಜಕಾರಣದಲ್ಲಿ ಇವತ್ತು ಮತ್ತೊಂದು ಬೆಳವಣಿಗೆ ನಡೆದಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ ಭಾವುಕರಾಗಿ ಮಾತನ್ನಾಡಿದ್ದಾರೆ.

Read Full Story

01:59 PM (IST) Aug 07

'ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಬೇಡಿ' - ಲಂಕಾ ಟೆಸ್ಟ್ ಸರಣಿಗೂ ಮುನ್ನ ಆಟಗಾರರಿಗೆ ಗಂಭೀರ್ ಖಡಕ್ ವಾರ್ನಿಂಗ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ, ಹೆಡ್ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾಗೆ ಕಠಿಣ ಅಭ್ಯಾಸ ನಡೆಸಲು ಸೂಚಿಸಿದ್ದಾರೆ. ಸ್ಪಿನ್ ಬೌಲಿಂಗ್ ಎದುರಿಸಲು ವಿಶೇಷ ತರಬೇತಿ ನಡೆಯುತ್ತಿದ್ದು, ಕೊಲಂಬೊದಲ್ಲಿ ಆರಂಭವಾದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಇಲೆವನ್ ಉತ್ತಮ ಆರಂಭ ಪಡೆದಿದೆ.

Read Full Story

01:05 PM (IST) Aug 07

1977ರ ಆಫರ್ ಲೆಟರ್ ವೈರಲ್ - ಟಿಸಿಎಸ್‌ನಲ್ಲಿ ತಮ್ಮ ಮೊದಲ ಸಂಬಳ ಬಹಿರಂಗಪಡಿಸಿದ ಸಿಂಡಿಕೇಟ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ!

1970ರ ದಶಕದ ಟಿಸಿಎಸ್ ಆಫರ್ ಲೆಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಡಿಕೇಟ್ ಬ್ಯಾಂಕಿನ ಮಾಜಿ ಅಧ್ಯಕ್ಷ ಅಜಯ್ ನಾನಾವತಿ ಅವರು ಹಂಚಿಕೊಂಡ ಈ ಪತ್ರದಲ್ಲಿ, ಅವರ ಆರಂಭಿಕ ಮಾಸಿಕ ವೇತನ ಕೇವಲ ₹960 ಆಗಿತ್ತು. ಆರಂಭಿಕ ಸಂಬಳಕ್ಕಿಂತ ಕಲಿಕೆಗೆ ಆದ್ಯತೆ ನೀಡುವುದು ಯಶಸ್ವಿ ವೃತ್ತಿಜೀವನಕ್ಕೆ ಹೇಗೆ ಅಡಿಪಾಯ ಹಾಕುತ್ತದೆ ಎಂಬುದಕ್ಕೆ ಅವರ ಪಯಣವೇ ಸಾಕ್ಷಿಯಾಗಿದೆ.
Read Full Story

12:30 PM (IST) Aug 07

Prasada, Food for Soul - ಮುಟ್ಟಿನ ಸಂದರ್ಭದಲ್ಲಿ ಪ್ರಸಾದ ಸೇವಿಸಬಹುದಾ? ಪಂಡಿತರು ಹೇಳಿದ್ದೇನು?

ಮುಟ್ಟು ಅಥವಾ ಸೂತಕದ ಸಮಯದಲ್ಲಿ ದೇವರ ಪ್ರಸಾದ ಸೇವಿಸಬಹುದೇ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಈ ಕುರಿತಂತೆ ಸಾಮಾಜಿಕ ಪಂಡಿತರನ್ನು ಹಲವರು ಪ್ರಶ್ನೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಗೊಂದಲಕ್ಕೆ ಪಂಡಿತರು ಸ್ಪಷ್ಟನೆ ನೀಡಿದ್ದಾರೆ. ನಿಮ್ಮಲ್ಲಿರುವ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

Read Full Story

11:49 AM (IST) Aug 07

ಬೆಂಗಳೂರಿನಿಂದ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ..

ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಆರು ಮಂದಿ ಸ್ನೇಹಿತರಿದ್ದ ಕಾರು ಶಿವಮೊಗ್ಗ ತಾಲೂಕಿನ ಚೋರಡಿ ಬ್ರಿಡ್ಜ್ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಆರೂ ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story

11:42 AM (IST) Aug 07

ಎರಡನೇ ಬಾರಿ ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಸಿಟ್ಟಿನಿಂದಲೇ ಹೊರಬಂದ ಬಸವರಾಜ್ ಹೊರಟ್ಟಿ

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜೀನಾಮೆ ನೀಡುವುದಿಲ್ಲ ಎಂದಿದ್ದ ತಮ್ಮ ನಿಲುವನ್ನು ಬದಲಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮಾತುಕತೆಯ ನಂತರ, ತಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ಸದನದಲ್ಲೇ ರಾಜೀನಾಮೆ ನೀಡುವುದಾಗಿ ಮಾರ್ಮಿಕವಾಗಿ ತಿಳಿಸಿದ್ದಾರೆ.
Read Full Story

11:21 AM (IST) Aug 07

ಬೆಂಗಳೂರು-ಹೊಸೂರು ಪ್ರಸ್ತಾವಿತ ಮೆಟ್ರೋ ಯೋಜನೆ ವರ್ಕ್ ಔಟ್ ಆಗಲ್ಲ, ಸಬರ್ಬನ್ ರೈಲೇ ಬೆಸ್ಟ್! ತಜ್ಞರ ವಾದ

ತಮಿಳುನಾಡು ಸರ್ಕಾರವು ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಆಸಕ್ತಿ ತೋರಿದೆ. ಆದರೆ, ಸಾರಿಗೆ ತಜ್ಞರು ಈ ಯೋಜನೆಗೆ ಮೆಟ್ರೋಗಿಂತ ಉಪನಗರ ರೈಲು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದು, ಯಾವುದೇ ನಿರ್ಧಾರಕ್ಕೂ ಮುನ್ನ ವೈಜ್ಞಾನಿಕ ಬೇಡಿಕೆ ಅಧ್ಯಯನದ ಅಗತ್ಯವನ್ನು ಒತ್ತಿಹೇಳಿದ್ದಾರೆ.
Read Full Story

11:04 AM (IST) Aug 07

ಬೆಂಗಳೂರಿನ 100 ಎಕರೆ ಜಾಗದಲ್ಲಿ ಎಐ ಯುನಿವರ್ಸಿಟಿ, ಮಸೂದೆ ಮಂಡನೆಗೆ ಸರ್ಕಾರ ಸಜ್ಜು!

ಕರ್ನಾಟಕ ಸರ್ಕಾರವು ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಯು ಎಐ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಕರ್ನಾಟಕವನ್ನು ಜಾಗತಿಕ ಹಬ್ ಆಗಿ ರೂಪಿಸುವ ಗುರಿ ಹೊಂದಿದೆ.

Read Full Story

10:27 AM (IST) Aug 07

ಆ.11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್, 57 ಸುರಂಗ, 226 ಸೇತುವೆ 108 ವಕ್ರಾಕೃತಿ ತಿರುವು ದಾಟಲಿದೆ ರೈಲು!

ನೈಋತ್ಯ ರೈಲ್ವೆಯು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಿದಾದ ಮತ್ತು ನೈಸರ್ಗಿಕ ಸೌಂದರ್ಯದ ಘಟ್ಟ ಪ್ರದೇಶದಲ್ಲಿ ಈ ಪರೀಕ್ಷಾರ್ಥ ಓಟ ನಡೆಯಲಿದ್ದು, ಯಶಸ್ವಿಯಾದರೆ ಸೇವೆಯನ್ನು ಮಡಗಾಂವ್‌ವರೆಗೆ ವಿಸ್ತರಿಸುವ ಚಿಂತನೆಯಿದೆ.
Read Full Story

10:07 AM (IST) Aug 07

ಹಂಪಿಯ ನಿಷೇಧಿತ, ಬಫರ್ ವಲಯದಲ್ಲಿ ಅಕ್ರಮ ಹೋಮ್‌ಸ್ಟೇ - 53ಕ್ಕೂ ಹೆಚ್ಚು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಬಿಗ್ ಶಾಕ್!

ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯ ಸಂರಕ್ಷಿತ ವಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು 250ಕ್ಕೂ ಹೆಚ್ಚು ಅನಧಿಕೃತ ಹೋಮ್‌ಸ್ಟೇಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Read Full Story

09:44 AM (IST) Aug 07

KRS Party - ವಾಲ್ಮೀಕಿ ನಿಗಮ ಹಗರಣ - ಗಂಭೀರ ಆರೋಪ ಎದುರಿಸುತ್ತಿರುವ ಬಿ ನಾಗೇಂದ್ರಗೆ ಮಂತ್ರಿಗಿರಿ ಯಾಕೆ? KRS ಪಾರ್ಟಿ ಕಿಡಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಂಪುಟದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.

Read Full Story

09:11 AM (IST) Aug 07

ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?

ನಟ ದರ್ಶನ್‌ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆತನ ಆಪ್ತ ಸ್ನೇಹಿತರಾದ ಪ್ರದೋಷ್‌ ಮತ್ತು ವಿನಯ್‌ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ದರ್ಶನ್‌ ತಮಗೆ ಬೆದರಿಕೆ ಹಾಕಿದ್ದಾಗಿ ಪ್ರದೋಷ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಈ ಬೆಳವಣಿಗೆಯಿಂದ ಜೈಲಿನಲ್ಲಿರುವ ದರ್ಶನ್‌ಗೆ ತೀವ್ರ ಸಂಕಷ್ಟ ಎದುರಾಗಿದೆ.
Read Full Story

08:06 AM (IST) Aug 07

Flipkar - 1 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಫ್ಲಿಪ್‌ ಕಾರ್ಟ್, ಅಕ್ಷಯ ಪಾತ್ರೆ ಬೆಳಗಿನ ಉಪಾಹಾರ ವಿತರಣೆ

ಫ್ಲಿಪ್‌ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.

Read Full Story

07:29 AM (IST) Aug 07

ಪರೀಕ್ಷಾ ಅಕ್ರಮ: ಪ್ರಧಾನ್‌ ರೀತಿಯಲ್ಲೇ ಜಾರ್ಖಂಡ್ ಸಿಎಂ ಸೊರೇನ್‌ ರಿಸೈನ್‌ಗೆ ಪಟ್ಟು!

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಹೇಮಂತ್ ಸೊರೇನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಿದೆ.

 

Read Full Story

07:28 AM (IST) Aug 07

ಹಳ್ಳಿಗಳಲ್ಲೂ ಪಿಒಪಿ ಗಣೇಶ ಮೂರ್ತಿ ಬಳಸುವಂತಿಲ್ಲ; ರಾತ್ರಿ 10 ಗಂಟೆಗೆಲ್ಲ ಡಿಜೆ ಸಂಗೀತ ಬಂದ್ ಆಗಬೇಕು!

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ.

 

Read Full Story

07:28 AM (IST) Aug 07

‘ಜಿ ರಾಮ್‌ ಜಿ’ ಉದ್ಯೋಗ ಕೊಡದ ಪಿಡಿಒ ಸಸ್ಪೆಂಡ್‌: ಕೆಲಸ ಸಿಗುತ್ತಿಲ್ಲವೇ? ನಿಮ್ಮೂರಲ್ಲೇ ಉದ್ಯೋಗ ಕೇಳಿ, ಸರ್ಕಾರ ನಿಮ್ಮೊಂದಿಗಿದೆ

‘ವಿಬಿ ಜಿ ರಾಮ್‌ ಜಿ’ ಯೋಜನೆ ಅಡಿ ಮಾನವ ದಿನ ಸೃಜನೆ ಮಾಡಲು ನಿರ್ಲಕ್ಷ್ಯ ವಹಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತುಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ಮನರೇಗಾ ಬದಲಿಗೆ ಜಾರಿಗೆ ಬಂದಿರುವ ಈ ಯೋಜನೆಯ ಮೊದಲ ತಿಂಗಳಲ್ಲೇ ಹಿನ್ನಡೆ?

 

Read Full Story

More Trending News