Published : Aug 12, 2026, 06:38 AM ISTUpdated : Aug 12, 2026, 11:33 PM IST

Karnataka Latest News Live: ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ - ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?

ಸಾರಾಂಶ

ಬೆಂಗಳೂರು: ತಮಿಳುನಾಡಿಗೆ ನಿತ್ಯ 12000 ಕ್ಯು.ನಂತೆ 15 ದಿನ 16 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ವಿರೋಧಿಸಿ ಕಾವೇರಿ ಕೊಳ್ಳದ ರೈತರು ವಿವಿಧೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಕೆಲ ಕಾಲ ರಸ್ತೆ ತಡೆ ನಡೆಸಿ, ಹೆದ್ದಾರಿ ಸಂಚಾರಕ್ಕೆ ಅಡ್ಡಿಪಡಿಸಿದರು. ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. 

ಮದ್ದೂರಿನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

11:33 PM (IST) Aug 12

ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ - ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?

ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಕಿರಣ್‌ ರಾಜ್‌, ಸಂತೋಷ್‌ ಆನಂದ್‌ರಾಮ್‌, ನರ್ತನ್‌, ಪವನ್‌ ಕುಮಾರ್‌, ತರುಣ್‌ ಸುಧೀರ್‌ ಸೇರಿದಂತೆ ಹಲವು ನಿರ್ದೇಶಕರ ಮುಂದಿನ ಸಿನಿಮಾ ಏನು? ಸ್ಯಾಂಡಲ್‌ವುಡ್‌ನ ಸದ್ಯದ ಸ್ಥಿತಿಯ ಕುರಿತ ವಿಶೇಷ ವರದಿ.

Read Full Story

11:02 PM (IST) Aug 12

ಭಾರತೀಯ ರೈಲ್ವೆಯೊಂದಿಗೆ ಕೊಂಕಣ್‌ ರೈಲ್ವೆ ವಿಲೀನಕ್ಕೆ ವಿಘ್ನ - ಗೋವಾ ಒಪ್ಪಿಗೆ, ಮಹಾರಾಷ್ಟ್ರ, ಕರ್ನಾಟಕದಿಂದ ಕಂಡಿಷನ್!

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Read Full Story

10:52 PM (IST) Aug 12

ಮಗಳಿಗಾಗಿ ತಂದೆಯ ಹೋರಾಟ, ಅಯ್ಯಪ್ಪ ಭಕ್ತನ ರೌದ್ರಾವತಾರ - ರವಿತೇಜ 'ಇರುಮುಡಿ' ಟ್ರೇಲರ್‌ ಹೇಗಿದೆ?

ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾದ ಟ್ರೇಲರ್‌ ರಿಲೀಸ್ ಆಗಿದೆ. ಕುತೂಹಲ ಕೆರಳಿಸಿರುವ ಈ ಟ್ರೇಲರ್‌, ರವಿತೇಜ ಅವರ ಮಾಮೂಲಿ ಮಾಸ್ ಮಸಾಲಾ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಅನ್ನೋದು ವಿಶೇಷ.

Read Full Story

10:33 PM (IST) Aug 12

ಚರಂಡಿಯೂ ಇಲ್ಲ, ಡಾಂಬರೂ ಇಲ್ಲ! - ಎಲೆಕ್ಟ್ರಾನಿಕ್‌ ಸಿಟಿಯ ಅನಂತನಗರದ ಕಳಪೆ ರಸ್ತೆಗೆ ಬಲಿಯಾಯ್ತು EPF ಉದ್ಯೋಗಿ ಜೀವ!

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೆಟ್ಟ ರಸ್ತೆಯಿಂದಾಗಿ ಬೈಕ್‌ನಿಂದ ಬಿದ್ದ ಕೇರಳ ಮೂಲದ ಯುವತಿ ಮೇಧಾ ಪೃಥ್ವಿರಾಜ್ ಮೇಲೆ ಗೂಡ್ಸ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಅನಂತನಗರದ ರಸ್ತೆಗಳ ದುಸ್ಥಿತಿಯನ್ನು ಎತ್ತಿ ತೋರಿಸಿದೆ.

Read Full Story

10:15 PM (IST) Aug 12

ಸ್ಟೀಲ್ ಸಿಂಕ್‌ ಮೇಲಿನ ಕಲೆ, ಮಂಕು ಕ್ಷಣದಲ್ಲೇ ಹೋಗಬೇಕಾ? ಹೊಳಪು ತರಲು ಇಲ್ಲಿವೆ 6 ಸುಲಭ ಟಿಪ್ಸ್

Sink Cleaning Hacks: ಸ್ಟೇನ್‌ಲೆಸ್ ಸ್ಟೀಲ್ ಸಿಂಕ್ ಮಂಕಾಗಿ ಕಾಣಿಸುತ್ತಿದೆಯೇ? ಕಲೆ, ಖನಿಜಾಂಶ ಹಾಗೂ ಸ್ಕ್ರಾಚ್‌ಗಳಿಂದ ಸಿಂಕ್‌ ಹೊಳಪು ಕಳೆದುಕೊಳ್ಳದಂತೆ ಮಾಡಲು ಈ 6 ಸರಳ ಕ್ಲೀನಿಂಗ್ ಟಿಪ್ಸ್‌ ತಿಳಿಯಿರಿ.

Read Full Story

10:13 PM (IST) Aug 12

ಪ್ರಜ್ವಲ್ ರೇವಣ್ಣ ಜೈಲಲ್ಲಿ ಜಾಲಿ ಜಾಲಿ.. ಬಿಂದಾಸ್ ಆಗಿ ಫೋನ್‌ನಲ್ಲಿ ಮಾತಾಡೋ ವಿಡಿಯೋ ವೈರಲ್

ಪರಪ್ಪನ ಅಗ್ರಹಾರದ ಜೈಲಿನ ಬ್ಯಾರೆಕ್‌ನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್‌ನಲ್ಲಿ ಧೈರ್ಯವಾಗಿ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸಿಸಿಬಿ ದಾಳಿಯ ಬೆನ್ನಲ್ಲೇ ಈ ಆಘಾತಕಾರಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಕರ್ತವ್ಯ ನಿರ್ಲಕ್ಷ್ಯ ತೋರಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.

Read Full Story

10:08 PM (IST) Aug 12

'ಜೀವನ ನೋಡುವ ದೃಷ್ಟಿಕೋನವೇ ಬದಲಾಯ್ತು..' ಬೆಂಗಳೂರು ಬ್ಯೂಟಿ ಬಗ್ಗೆ ಯುವತಿಯ ಭಾವುಕ ಪೋಸ್ಟ್ ವೈರಲ್

ಕಂಟೆಂಟ್ ಕ್ರಿಯೇಟರ್ ಸುರುಚಿ, ಗುರುಗ್ರಾಮ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಒಂಟಿತನ ಮತ್ತು ಮನೆ ನೆನಪಿನಿಂದ ಬಳಲಿದ ಅವರು, ನಂತರ ಬೆಂಗಳೂರಿನ ಫಿಲ್ಟರ್ ಕಾಫಿ, ಹವಾಮಾನ ಮತ್ತು ಸ್ವತಂತ್ರ ಬದುಕನ್ನು ಪ್ರೀತಿಸಲು ಆರಂಭಿಸಿದ್ದಾರೆ.

Read Full Story

09:39 PM (IST) Aug 12

ಆಟಿ ಅಮಾವಾಸ್ಯೆ ವಿಶೇಷ! ಅಮೃತಕ್ಕೆ ಸಮಾನ ಹಾಲೆ ಮರದ ಕಷಾಯ.. ತುಳುನಾಡಿನಲ್ಲಿ ಇವತ್ತು ಇದನ್ನ ಕುಡಿಯೋದು ಯಾಕೆ?

ತುಳುನಾಡಿನಾದ್ಯಂತ ಪಾರಂಪರಿಕ 'ಪಾಲೆ' ಮರದ ತೊಗಟೆಯ ಕಷಾಯ ಮತ್ತು ಪಿತೃ ಕಾರ್ಯಗಳೊಂದಿಗೆ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕೇರಳ ಸಮಾಜಂ ವತಿಯಿಂದ ಮಲ್ಪೆ ಕಡಲತೀರದಲ್ಲಿ ಕೇರಳ ಶೈಲಿಯ 'ಬಲಿತರ್ಪಣಂ' ಆಯೋಜಿಸಲಾಗಿತ್ತು.

Read Full Story

09:12 PM (IST) Aug 12

'2 ವರ್ಷದ ಮಗನನ್ನು ಹೊರಗೆ ನಿಲ್ಲಿಸಿ, ಲ್ಯಾಪ್‌ಟಾಪ್‌ ಕೊಟ್ಟು ಬಂದೆ..' ಲೇಆಫ್ ಬೆನ್ನಲ್ಲೇ ಆಫೀಸ್‌ನಲ್ಲಿ ಬೆಂಗಳೂರು ಉದ್ಯೋಗಿಗೆ ಕಹಿ ಅನುಭವ!

ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ಕಂಪನಿಯ ಲ್ಯಾಪ್‌ಟಾಪ್ ಹಿಂತಿರುಗಿಸಲು ತಮ್ಮ 2 ವರ್ಷದ ಮಗನೊಂದಿಗೆ ಕಚೇರಿಗೆ ಹೋದಾಗ ಅವಮಾನ ಎದುರಿಸಿದ್ದಾರೆ. ಮಗುವನ್ನು ಒಳಗೆ ಬಿಡದ ಈ ಘಟನೆಯು ಕಾರ್ಪೊರೇಟ್ ಜಗತ್ತಿನ ಸ್ವಾರ್ಥ ಸ್ವರೂಪವನ್ನು ಬಯಲು ಮಾಡಿದ್ದಾರೆ.

Read Full Story

08:44 PM (IST) Aug 12

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್! ರಾಜ್ಯ ಸರ್ಕಾರದಿಂದ ಖಡಕ್ ಆದೇಶ

ಕರ್ನಾಟಕ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ. 'ವ್ಯಸನಮುಕ್ತ ಕರ್ನಾಟಕ' ನಿರ್ಮಾಣದ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.

Read Full Story

08:33 PM (IST) Aug 12

ಕನ್ನಡದ ಚೆಲುವೆಗೆ ಬಂಪರ್‌ ಚಾನ್ಸ್‌ - ಯಶ್‌, ಜೂ.ಎನ್‌ಟಿಆರ್‌ ಬಳಿಕ ರುಕ್ಮಿಣಿ ವಸಂತ್‌ ಮುಂದಿನ ಹೆಜ್ಜೆ ಏನು?

Rukmini Vasanth: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್‌, ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

Read Full Story

08:26 PM (IST) Aug 12

ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ತಂದಿಟ್ಟ ಪ್ರಜ್ವಲ್ ರೇವಣ್ಣ -ಏರ್‍‌ಟೆಲ್ ಕಂಪನಿಗೆ ಅಲೋಕ್ ಕುಮಾರ್ ಎಚ್ಚರಿಕೆ

ಜೈಲಿನ ಜಾಮರ್‌ಗಳನ್ನು ಮೀರಿ ಆಂಧ್ರ ಮೂಲದ 5ಜಿ ಸಿಮ್‌ಗಳನ್ನು ಅಕ್ರಮವಾಗಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ರೇವಣ್ಣ ಮೊಬೈಲ್ ಪತ್ತೆ ಪ್ರಕರಣದಲ್ಲಿ ಏರ್‌ಟೆಲ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅವರನ್ನು 'ಸಹ ಆರೋಪಿ' ಎಂದು ಹೆಸರಿಸಲು ಸೂಚಿಸಿದ್ದಾರೆ.

Read Full Story

08:14 PM (IST) Aug 12

Fashion Mistakes - ವಯಸ್ಸಿಗಿಂತ ಚಿಕ್ಕವರಾಗಿ ಕಾಣಬೇಕಾ? ಈ ಫ್ಯಾಷನ್‌ ತಪ್ಪುಗಳನ್ನು ಮಾತ್ರ ಮಾಡಬೇಡಿ!

ನಾವು ಧರಿಸುವ ಬಟ್ಟೆ, ಆಯ್ಕೆ ಮಾಡಿಕೊಳ್ಳುವ ಬಣ್ಣ, ಆಭರಣ, ಶೂ ಹಾಗೂ ಮೇಕಪ್‌-ಇವೆಲ್ಲವೂ ನಮ್ಮ ಒಟ್ಟಾರೆ ಲುಕ್‌ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಫ್ಯಾಷನ್‌ ಬಗ್ಗೆ ಮಾಡುವ ಸಣ್ಣ ತಪ್ಪುಗಳೇ ನಮ್ಮ..

Read Full Story

08:03 PM (IST) Aug 12

ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!

ಭೀಮನ ಅಮಾವಾಸ್ಯೆಯ ಪ್ರಯುಕ್ತ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ತಾರೆಯರು ತಮ್ಮ ಪತಿಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ, ಪಾದಪೂಜೆ ನೆರವೇರಿಸಿದ್ದಾರೆ. ನೆನಪಿರಲಿ ಪ್ರೇಮ್ ಪತ್ನಿ, ಉಗ್ರಂ ಮಂಜು ದಂಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದ್ದಾರೆ.

Read Full Story

07:39 PM (IST) Aug 12

40 ವರ್ಷಗಳ ಕಲಾ ಪಯಣಕ್ಕೆ ತಾರಾ ಅನುರಾಧ - ನೆನಪುಗಳ ಹಾದಿಯಲ್ಲಿ ಭಾವುಕರಾದ ‘ತಾರಮ್ಮ’!

ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿವೆ. 1986ರ ಆಗಸ್ಟ್‌ 10ರಂದು ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದ ಹಿರಿಯ ನಟಿ ತಾರಾ ಅನುರಾಧ, ಇದೀಗ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.

Read Full Story

07:35 PM (IST) Aug 12

ಪ್ರಜ್ವಲ್ ರೇವಣ್ಣಗೆ ಮೊದಲೇ ವಾರ್ನ್‌ ಮಾಡಿದ್ವಿ - ಅಲೋಕ್ ಕುಮಾರ್ ಬಿಚ್ಚಿಟ್ರು ಅಸಲಿ ಸತ್ಯ

ಎಚ್ಚರಿಕೆ ನೀಡಿದ ಹೊರತಾಗಿಯೂ ಪ್ರಜ್ವಲ್ ರೇವಣ್ಣ ಕಡ್ಡಾಯವಾದ ಬಿಳಿ ಸಮವಸ್ತ್ರ ಧರಿಸಲು ನಿರಾಕರಿಸುವ ಮೂಲಕ ಜೈಲಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಡಿಜಿಪಿ ಅಲೋಕ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅವರ ಬ್ಯಾರೆಕ್‌ನಲ್ಲಿ ಮೊಬೈಲ್ ಪತ್ತೆಯಾದ ಸಿಸಿಬಿ ದಾಳಿಯ ಬೆನ್ನಲ್ಲೇ, ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಜೈಲು ಎಸ್ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ

Read Full Story

06:44 PM (IST) Aug 12

Chamarajanagara - ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನ; ಮೂವರ ಬಂಧನ

ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

06:42 PM (IST) Aug 12

ಪತ್ನಿ ಜೊತೆ ಜಗಳ, 6 ವರ್ಷದ ಮಗನ ನದಿಗೆ ಎಸೆದ ಅಪ್ಪ.. ಅಯ್ಯೋ ಪಾಪಿ..

ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನ ರಭಸವಾಗಿ ಹರಿಯುತ್ತಿದ್ದ ರಾವಿ ನದಿಗೆ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

Read Full Story

06:33 PM (IST) Aug 12

ಅರುಣ್​ ಸಾಗರ್ ಪುತ್ರಿಗೆ ನಾಯಕಿ ಪಟ್ಟ - ಡಾಲಿ ಧನಂಜಯ ‘ಹೆಗ್ಗಣ ಮುದ್ದು’ಗೆ ರಿಲೀಸ್ ಡೇಟ್ ಫಿಕ್ಸ್

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Read Full Story

06:16 PM (IST) Aug 12

700 ವರ್ಷ ಹಿಂದಿನ ಕಥೆ, 400ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌ - ಶ್ರೀಮುರಳಿ ‘ಉಗ್ರಾಯುಧಮ್’ ಶೂಟಿಂಗ್‌ ಜೋರು!

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾ ಇದೀಗ ಶೂಟಿಂಗ್‌ ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್‌..

Read Full Story

06:08 PM (IST) Aug 12

ಕರ್ನಾಟಕದಲ್ಲಿ ಇನ್ಮುಂದೆ ಮದುವೆ ಊಟದ ವೇಳೆ ಕೇಟರರ್ಸ್‌ಗಳು ಕ್ಯಾಲೋರಿ ಕೌಂಟ್‌ ಡಿಸ್‌ಪ್ಲೇ ಮಾಡುವುದು ಕಡ್ಡಾಯ!

ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಮದುವೆ ಹಾಗೂ ಸಮಾರಂಭಗಳಲ್ಲಿ ಬಡಿಸುವ ಆಹಾರಕ್ಕೆ ಕ್ಯಾಲೋರಿ ಚಾರ್ಟ್ ಪ್ರದರ್ಶನವನ್ನು ಕಡ್ಡಾಯಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಸಿದ್ಧತೆ ನಡೆಸಿದೆ.

Read Full Story

06:01 PM (IST) Aug 12

‘ಅಯೋಗ್ಯ 2’ ಸಕ್ಸಸ್‌ ಬೆನ್ನಲ್ಲೇ ಬಿಗ್‌ ಅಪ್‌ಡೇಟ್‌ - ರವಿಚಂದ್ರನ್‌ ಪಾತ್ರಕ್ಕೇ ಪ್ರತ್ಯೇಕ ಸಿನಿಮಾ ಮಾಡ್ತಾರಂತೆ ನಿರ್ದೇಶಕ!

ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲಿ ₹6 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

Read Full Story

05:36 PM (IST) Aug 12

ಕನ್ನಡಕ್ಕೆ ಬರಲು ರೆಡಿಯಾದ್ರಾ ಮಾಧುರಿ ದೀಕ್ಷಿತ್‌? ಶಿವಣ್ಣನ ‘ಎ ಫಾರ್‌ ಆನಂದ್‌’ಗೆ ಬಾಲಿವುಡ್‌ ಚೆಲುವೆ!

ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಎ ಫಾರ್‌ ಆನಂದ್‌’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ‘ಘೋಸ್ಟ್‌’ ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

Read Full Story

05:12 PM (IST) Aug 12

ಚಿನ್ನದ ತಾಳಿ ಕಳೆದುಕೊಂಡು ಕಣ್ಣೀರಿಟ್ಟ ‘ಲಕ್ಷ್ಮೀ ನಿವಾಸ’ ನಟಿ - ಸ್ಪಾ ಘಟನೆ ಬಿಚ್ಚಿಟ್ಟ ವಿನೋದಿನಿ ಶ್ವೇತಾ

ಕನ್ನಡಿಗರ ಮನದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಚ್ಚಳಿಯದೆ ಉಳಿದಿರುವ ನಟಿ ವಿನೋದಿನಿ ಶ್ವೇತಾ ಇದೀಗ ಬೇಸರದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

Read Full Story

04:54 PM (IST) Aug 12

'ಬೈಕ್ ಟ್ಯಾಕ್ಸಿಗಳು ಸಾರ್ವಜನಿಕ ಸಾರಿಗೆ ವಾಹನಗಳಲ್ಲ' - ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ

ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದ ಹೈಕೋರ್ಟ್ ತೀರ್ಪನ್ನು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ದ್ವಿಚಕ್ರ ವಾಹನಗಳು ಕಡಿಮೆ ಸುರಕ್ಷತೆ, ಹೆಚ್ಚಿನ ಅಪಘಾತದ ಅಪಾಯ ಮತ್ತು ಸಾರ್ವಜನಿಕ ಸಾರಿಗೆಗೆ ಸೂಕ್ತವಲ್ಲ ಎಂದು ಸರ್ಕಾರ ವಾದಿಸಿದೆ.

Read Full Story

04:49 PM (IST) Aug 12

ಸ್ಟಾರ್‌ ಹೀರೋಗಳ ಜೊತೆ ಸಾಲು ಸಾಲು ಸಿನಿಮಾಗಳು - ಬಳಿಕ 3 ವರ್ಷ ಡಿಪ್ರೆಶನ್‌, ಕಣ್ಣೀರಿಟ್ಟ ನಟಿ!

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಟಾಪ್‌ ಹೀರೋಯಿನ್‌ ಆಗಿ ಮಿಂಚಿದ್ದ ನಟಿ ಯಮುನಾ, ಸ್ಟಾರ್‌ ಹೀರೋಗಳ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು.

Read Full Story

04:38 PM (IST) Aug 12

‘ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ - Toxic ಟ್ರೇಲರ್‌ ನೋಡಿ ಯಶ್‌ಗೆ ಕನ್ನಡದ ಹಿರಿಯ ನಿರ್ದೇಶಕರ ಪುತ್ರಿ ವಾರ್ನಿಂಗ್‌

Yash Toxic Trailer Sparks Controversy: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್‌ ಫಾರ್ ಗ್ರೋನ್-ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲೇ ಭರ್ಜರಿ ಚರ್ಚೆ ಶುರುವಾಗಿದೆ.

Read Full Story

04:35 PM (IST) Aug 12

ಸೆಪ್ಟೆಂಬರ್‌ನಲ್ಲಿ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಬಾಂಗ್ಲಾದೇಶ ಪ್ರವಾಸಕ್ಕೆ ಬಿಗ್ ಟ್ವಿಸ್ಟ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಈ ಹೊಸ ವೇಳಾಪಟ್ಟಿಯಿಂದಾಗಿ, ಅದೇ ಸಮಯದಲ್ಲಿ ನಡೆಯಬೇಕಿದ್ದ ಭಾರತದ ಬಾಂಗ್ಲಾದೇಶ ಪ್ರವಾಸದ ಮೇಲೆ ಅನುಮಾನದ ಕರಿಮೋಡ ಕವಿದಿದೆ.
Read Full Story

03:57 PM (IST) Aug 12

ಸಂಪೂರ್ಣವಾಗಿ ಬದಲಾಗಲಿದೆ ಬೆಂಗಳೂರಿನ ಮೊಟ್ಟಮೊದಲ ಫ್ಲೈಓವರ್‌, 10 ಕೋಟಿ ವೆಚ್ಚ ಮಾಡಲಿರುವ GBA

ಬೆಂಗಳೂರಿನ ಮೊದಲ ಮೇಲ್ಸೇತುವೆಯಾದ ಸಿರ್ಸಿ ಸರ್ಕಲ್ ಫ್ಲೈಓವರ್, ಆರು ವರ್ಷಗಳ ನಂತರ ಬೃಹತ್ ನಿರ್ವಹಣೆಗೆ ಸಜ್ಜಾಗಿದೆ. ಈ ಯೋಜನೆಯಡಿ ಡಾಂಬರೀಕರಣ, ಎಕ್ಸ್‌ಪ್ಯಾನ್ಷನ್ ಜಾಯಿಂಟ್‌ಗಳ ಬದಲಿ ಸೇರಿದಂತೆ ಸಂಪೂರ್ಣ ಕಾಯಕಲ್ಪ ನೀಡಲಾಗುತ್ತಿದೆ.

Read Full Story

03:47 PM (IST) Aug 12

ಮುದ್ದಾದ ಇಬ್ಬರು ಮಕ್ಕಳನ್ನ ಅನಾಥರನ್ನಾಗಿ ಮಾಡಿ ಹೋದ ಅಪ್ಪ-ಅಮ್ಮ.. ಯಾಕೆ ಹೀಗೆ ಮಾಡಿಬಿಟ್ಟರು?

ತೆಲಂಗಾಣದ ನಿಜಾಮಾಬಾದ್‌ನಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿ ಸಾವಿಗೆ ಶರಣಾಗಿದ್ದಾರೆ. ಅಷ್ಟಕ್ಕೂ ಈ ದಂಪತಿಗೆ ಏನಾಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

03:03 PM (IST) Aug 12

ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್ - ರಾಜ್ಯದಲ್ಲಿ ಬಸ್, ಶಾಲೆ, ಸಂತೆ, ಕಚೇರಿ ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

ಕಾವೇರಿ ನೀರು ಹಂಚಿಕೆ ವಿರೋಧಿಸಿ ವಾಟಾಳ್ ನಾಗರಾಜ್ ಅವರು ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ಪ್ರಮುಖ ರೈತ, ಸಾರಿಗೆ ಮತ್ತು ಕನ್ನಡ ಸಂಘಟನೆಗಳು ಬೆಂಬಲ ಸೂಚಿಸದ ಕಾರಣ, ಬಂದ್ ವಿಫಲವಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜು, ಸಾರಿಗೆ ಸೇರಿದಂತೆ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
Read Full Story

02:39 PM (IST) Aug 12

ವಾಲ್ಮೀಕಿ ನಿಗಮ ಹಗರಣ - ಬಿ ನಾಗೇಂದ್ರ ಪರ ನಿಂತ ಬಳ್ಳಾರಿ ವಾಲ್ಮೀಕಿ ಸಂಘಟನೆ ಜಿಲ್ಲಾ ಮುಖಂಡ! ಬಿಜೆಪಿ ನಾಯಕರಿಗೆ ಹಾಕಿದ ಸವಾಲೇನು?

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರ ಮೇಲಿನ ಆರೋಪಗಳನ್ನು ಅವರ ಬೆಂಬಲಿಗರು ತಳ್ಳಿಹಾಕಿದ್ದಾರೆ. ಬಿಜೆಪಿ ನಾಯಕರು ವಿನಾಕಾರಣ ಟೀಕೆ ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read Full Story

12:50 PM (IST) Aug 12

Vande Bharat Express - ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್‌ನ್ಯೂಸ್

ಹಾಸನ: ಮಂಗಳೂರು ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ಬಹುದಿನ ಕನಸು ನನಸಾಗಿದೆ. ಇಂದು ಬೆಳ್ಳಂಬೆಳಗ್ಗೆ ಸಕಲೇಶ್ವರಪುರಕ್ಕೆ ಆಗಮಿಸಿದ್ದ ವಂದೇ ಭಾರತ್ ರೈಲಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

Read Full Story

12:19 PM (IST) Aug 12

ಆರ್‌ಸಿಬಿ, ಆಸೀಸ್ ಮಾಜಿ ಆಲ್ರೌಂಡರ್‌ಗೆ ಖುಲಾಯಿಸಿದ ಅದೃಷ್ಟ; 39ನೇ ವಯಸ್ಸಿಗೆ ಒಲಿದ ಇನ್ನೊಂದು ದೇಶದ ಕ್ಯಾಪ್ಟನ್ ಪಟ್ಟ!

ಆಸ್ಟ್ರೇಲಿಯಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಲ್‌ರೌಂಡರ್ ಮೊಯ್ಸಿಸ್ ಹೆನ್ರಿಕೇಸ್, ಇದೀಗ ಪೋರ್ಚುಗಲ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, 39ನೇ ವಯಸ್ಸಿನಲ್ಲಿ ಅವರು ಮುಂಬರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.
Read Full Story

12:02 PM (IST) Aug 12

ಪರಪ್ಪನ ಅಗ್ರಹಾರ - ಸತ್ಯ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ, ಬ್ಯಾರಕ್‌ ನಲ್ಲಿ ಸಿಕ್ಕ ಮೊಬೈಲ್‌ನಲ್ಲಿ ಏನೇನಿತ್ತು ಗೊತ್ತಾ?

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್, ಪೆನ್‌ಡ್ರೈವ್ ಪತ್ತೆಯಾಗಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಇನ್ನೊಬ್ಬ ಕೈದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜೈಲಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
Read Full Story

11:45 AM (IST) Aug 12

ಬೆಂಗಳೂರು ಮೆಟ್ರೋ ಹತ್ತಿದ ರಾಕಿ ಭಾಯ್ 'ಟಾಕ್ಸಿಕ್' - ಭಾರತೀಯ ಚಿತ್ರರಂಗದಲ್ಲೇ ಹೊಸ ಗಿಮಿಕ್ ಮಾಡಿದ ಯಶ್!

ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿನ 'ನಮ್ಮ ಮೆಟ್ರೋ' ರೈಲನ್ನು ಬಳಸಿಕೊಳ್ಳಲಾಗಿದೆ. ಮೆಟ್ರೋ ಬೋಗಿಗಳ ಮೇಲೆ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ವಿಭಿನ್ನ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದ್ದು, ಈ ಸಿನಿಮಾ ಆಗಸ್ಟ್ 26 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

Read Full Story

11:10 AM (IST) Aug 12

Cabinet Expansion - ಕೊನೆಗೂ ಹಠ ಸಾಧಿಸಿ ಗೆದ್ದ ಮುನಿಯಪ್ಪ, ಮಣಿದ ಕಾಂಗ್ರೆಸ್ ಹೈಕಮಾಂಡ್; ಆಹಾರ ಖಾತೆ ಬದಲು!

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನೀಡಿದ್ದ ಆಹಾರ ಇಲಾಖೆಯನ್ನು ಮತ್ತೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಕೆಎಚ್ ಮುನಿಯಪ್ಪ ಅವರು, ಸಮಾಜ ಕಲ್ಯಾಣ ಇಲಾಖೆಗೆ ಪಟ್ಟುಹಿಡಿದು ಹೈಕಮಾಂಡ್ ಭೇಟಿಯನ್ನು ಮಾಡಿದ್ದರು. ಸದ್ಯ ಮುನಿಯಪ್ಪ ಅವರ ಬೇಡಿಕೆಗೆ ಮಣಿದ ಹೈಕಮಾಂಡ್ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಿದೆ.

Read Full Story

10:48 AM (IST) Aug 12

ಕೊಪ್ಪಳ ನೆಲದಲ್ಲಿ ಅಡಗಿದ್ದ ವಿಜಯನಗರ, ಕೆಳದಿ ಅರಸರ ಕಾಲದ ಅಪರೂಪದ ಲಿಂಗಮುದ್ರೆ ಕಲ್ಲು ಪತ್ತೆ, ಏನಿದರ ವಿಶೇಷತೆ?

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ದೇವಲಾಪುರದಲ್ಲಿ, ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಅಪರೂಪದ 'ಲಿಂಗಮುದ್ರೆ ಕಲ್ಲು' ಪತ್ತೆಯಾಗಿದೆ. ಭೂಮಿಯ ಗಡಿ ಗುರುತಿಸಲು ಬಳಸುತ್ತಿದ್ದ ಈ ಕಲ್ಲಿನ ಶೋಧನೆಯು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.
Read Full Story

10:39 AM (IST) Aug 12

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಂಪುಟದ ಖಾತೆ ಹಂಚಿಕೆ ಪ್ರಕಟ - ಇಲ್ಲಿದೆ ಸಚಿವರ ಪೂರ್ಣ ಪಟ್ಟಿ

ಹಲವು ದಿನಗಳ ಕುತೂಹಲಕ್ಕೆ ತೆರೆ ಎಳೆದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಚಲುವರಾಯಸ್ವಾಮಿಗೆ ಕೃಷಿ, ಮಧು ಬಂಗಾರಪ್ಪಗೆ ಶಿಕ್ಷಣ ಸೇರಿದಂತೆ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಯಾರಿಗೆ ವಹಿಸಲಾಗಿದೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ. ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
Read Full Story

10:28 AM (IST) Aug 12

ಐವರು ಮಕ್ಕಳ ಸಮ್ಮುಖದಲ್ಲಿ ಜಾರ್ಜಿನಾರನ್ನು ಮದುವೆಯಾದ ಕ್ರಿಸ್ಟಿಯಾನೋ ರೊನಾಲ್ಡೊ ರೊನಾಲ್ಡೊ!

ಪೋರ್ಚುಗಲ್ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ಪೋರ್ಚುಗಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Read Full Story

More Trending News