MS ಧೋನಿ ಹೊಸ ಅವತಾರ, ಇಳಿಕೆಯಾಯ್ತು ಚಿನ್ನದ ದರ; ಆ.20ರ ಟಾಪ್ 10 ಸುದ್ದಿ!

By Suvarna NewsFirst Published Aug 20, 2021, 5:58 PM IST
Highlights

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿನ ಬಹು ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎಂ ಎಸ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷನಾಗಿದ್ದಾನೆ. ಚಿನ್ನದ ಬೆಲೆಯಲ್ಲಿ ಭರ್ಜರಿ 3,700 ರೂ ಇಳಿಕೆ, ಕಾರು ನಿಲ್ಲಿಸಿ ಮಹಿಳೆಯ ಸಮಸ್ಯೆ ಆಲಿಸಿದ ಬೊಮ್ಮಾಯಿ ಸೇರಿದಂತೆ ಆಗಸ್ಟ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸತತ ದಾಳಿ ಬಳಿಕ ಅದೇ ಗತವೈಭವದಲ್ಲಿರುವ ಸೋಮನಾಥ ದೇವಾಲಯ ನಮ್ಮ ಸ್ಪೂರ್ತಿ; ಪ್ರಧಾನಿ ಮೋದಿ!

ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿನ ಬಹು ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ನೆರವೇರಿಸಿದ್ದಾರೆ. ಈ ವೇಳೆ ಸೋಮನಾಥ ದೇವಾಲಯದ ಮೇಲೆ ನಡೆದ ಸತತ ದಾಳಿ ಬಳಿಕವೂ ದೇವಾಲಯ ಅದೇ ಗತವೈಭವದಲ್ಲಿ ಎದ್ದು ನಿಂತಿದೆ. ಇದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ; ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷ!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯಕ್ಕೆ ಜನ ನಲುಗಿ ಹೋಗಿದ್ದಾರೆ. ವಿಶ್ವೇ ಆಫ್ಗಾನ್ ಜನತೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದೆ. ಆದರೆ ತಾಲಿಬಾನ್ ಉಗ್ರರು ಮಾತ್ರ ರುಂಡು ಚೆಂಡಾಡುವನ್ನು ನಿಲ್ಲಿಸಿಲ್ಲ. ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿಯಾಗುತ್ತಿದೆ. ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 10 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಯುವ ಇದೀಗ ಆಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಜೊತೆ ಪ್ರತ್ಯಕ್ಷವಾಗಿದ್ದಾನೆ.

IPL 2021 ಅಸ್ಲೀ ಪಿಕ್ಚರ್ ಅಭೀ ಭಾಕೀ ಹೈ: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಎಂ ಎಸ್ ಧೋನಿ..!

ಉದ್ದನೆಯ ಹೇರ್‌ಸ್ಟೈಲ್‌ನಿಂದ ಹಿಡಿದು, ಬಾಲ್ಡ್‌ ಹೆಡ್‌ವರೆಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಏನೇ ಮಾಡಿದರೂ ಸೋಷಿಯಲ್‌ ಮೀಡಿಯಾಗಳಲ್ಲಿ ಅದೊಂದು ಟ್ರೆಂಡ್ ಆಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದೀಗ ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಗುಡ್‌ ನ್ಯೂಸ್: ಕೆಜಿಎಫ್ 2 ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ ಜೀ ಸಂಸ್ಥೆ

ಭಾರತೀಯ ಸಿನಿ ರಸಿಕರು ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರತಂಡ ಕೆಲವೇ ದಿನಗಳಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಹೇಳಿದ್ದರೂ, ಇನ್ನೂ ಯಾವ ಸುಳಿವನ್ನೂ ನೀಡಿಲ್ಲ. ಇಂದು ವರಮಹಾಲಕ್ಷ್ಮೀ ಹಬ್ಬದ ದಿನ ಏನಾದರೂ ಅನೌನ್ಸ್ ಮಾಡುತ್ತಾರೆ ಎಂದು ಕಾಯುತ್ತಿದ್ದರು. ಅಷ್ಟರಲ್ಲಿಯೇ ಜೀ ಸಂಸ್ಥೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದೆ. 

ಚಿನ್ನದ ಬೆಲೆಯಲ್ಲಿ ಭರ್ಜರಿ 3,700 ರೂ ಇಳಿಕೆ, ಇಂದಿನ ಬೆಲೆ ಹೇಗಿದೆ ?

ಇತ್ತೀಚೆಗಷ್ಟೇ ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗೋ ಬಗ್ಗೆ ಸೂಚನೆ ಸಿಕ್ಕಿದ್ದು, ಇದಕ್ಕೆ ವಿರುದ್ಧವಾಗಿ ಈಗ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

ಐ ಲವ್ ಯು ತಾಲಿಬಾನ್: ಫೇಸ್‌ಬುಕ್‌ನಲ್ಲಿ ಉಗ್ರರ ಪರ ಪೋಸ್ಟ್‌ ಮಾಡಿದ ಜಮಖಂಡಿ ಯುವಕ

ತಾಲಿಬಾನ್‌ ಉಗ್ರರಿಂದ ಆಫ್ಘಾನಿಸ್ತಾನದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಯುವಕನೊಬ್ಬ ಐ ಲವ್ ಯು ತಾಲಿಬಾನ್ ಅಂತ ಪೋಸ್ಟ್ ಮಾಡುವ ತಾಲಿಬಾನ್‌ ಪ್ರೇಮ ಮೆರೆದ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಗರದಲ್ಲಿ ಘಟನೆ ನಡೆದಿದೆ.

ಉಗ್ರರ ರಣಕೇಕೆ: ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿದ ಆಫ್ಘನ್‌ ಜನ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ದರ್ಪ ಹೆಚ್ಚಾಗುತ್ತಿದೆ. ರಾಷ್ಟ್ರಧ್ವಜ V/S  ತಾಲಿಬಾಲಿ ಧ್ವಜ ಸಂಘರ್ಷ ಆರಂಭವಾಗಿದೆ. ಅಫ್ಘಾನಿಗಳ ಮೇಲೆ ತಾಲಿಬಾನಿಗಳು ದಾಳಿ ಮಾಡುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್‌ ಕ್ರೌರ್ಯ ಶುರುವಾಗಿದೆ. ಹೀಗಾಗಿ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಪ್ರಜೆಗಳಿಂದ ಧ್ವಜ ಕಿತ್ತುಕೊಂಡು ಕಪಾಳಮೋಕ್ಷ ಮಾಡುತ್ತಿದ್ದಾರೆ ಉಗ್ರರು. ಆಫ್ಘಾನಿಸ್ತಾನದ ಧ್ವಜವನ್ನ ಹಾಕೋದಕ್ಕೆ ಉಗ್ರರು ಬಿಡುತ್ತಿಲ್ಲ. 

ತಾಲಿಬಾನಿಗಳ ಕೈತಪ್ಪಿದೆ 75000 ಕೋಟಿ!

ನಾಗರಿಕ ಸರ್ಕಾರವನ್ನು ಪತನಗೊಳಿಸಿ ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿ ಉಗ್ರರಿಗೆ, ದೇಶದ ಪರಿಪೂರ್ಣ ಸಂಪತ್ತು ಕೈಗೆ ಸಿಗುತ್ತಿಲ್ಲ. ಹೌದು. ಅಫ್ಘಾನಿಸ್ತಾನದ ರಿಸರ್ವ್ ಬ್ಯಾಂಕ್‌ ಆಗಿರುವ ‘ದ ಅಫ್ಘಾನಿಸ್ತಾನ್‌ ಬ್ಯಾಂಕ್‌’ (ಡಿಎಬಿ) ಸುಮಾರು 75 ಸಾವಿರ ಕೋಟಿ ರು. ಸಂಪತ್ತು ಹೊಂದಿದ್ದರೂ ಅದು ಉಗ್ರರಿಗೆ ದೊರೆಯುತ್ತಿಲ್ಲ.

ಹಾಟ್ ಸಾಂಗ್‌ಗೆ ಡ್ಯಾನ್ಸ್ ಮಾಡಿ ಆನ್‌ಲೈನಲ್ಲೇ ಚಿನ್ನದ ಹುಡುಗನ ಅಪ್ಪಿಕೊಂಡ RJ

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗಿನಿಂದ, ಪ್ರತಿಯೊಬ್ಬ ಭಾರತೀಯನೂ ಅವರ ಅಭಿಮಾನಿಯಾಗಿದ್ದಾರೆ. ಭಾರತದಾದ್ಯಂತ ಜನರು ಸಾಮಾಜಿಕ ಮಾಧ್ಯಮದಲ್ಲಿ ನೀರಜ್‌ ಅವರನ್ನು ಬಹಳಷ್ಟು ಜನ ಶ್ಲಾಘಿಸಿದ್ದಾರೆ. ಆದರೂ ನೀರಜ್ ಸಂದರ್ಶನ ತುಣುಕೊಂದು ಈಗಾ ಭಾರೀ ಟೀಕೆಯಾಗಿದೆ.

ಕಾರು ನಿಲ್ಲಿಸಿ ಮಹಿಳೆಯ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಮುಖ್ಯಮಂತ್ರಿಗಳು ತನ್ನ ಮನವಿ ಸ್ವೀಕರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಹಿಳೆಯೊಬ್ಬಳನ್ನು ನೋಡಿದ ಬಸವರಾಜ ಬೊಮ್ಮಾಯಿ, ಕಾರು ನಿಲ್ಲಿಸಿ ಸಮಸ್ಯೆ ಆಲಿಸಿದ ಪ್ರಸಂಗ ಗುರುವಾರ ನಡೆಯಿತು. 
 

click me!