ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣವನ್ನು ನೋಡಿದರೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಇತ್ತೊ ಏನೋ..? ಆದರೆ, ಗಿನ್ನೆಸ್ ರೆಕಾರ್ಡ್ ಅಂತೂ ಆಗುತ್ತೆ ಎನಿಸುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಟೀಕೆ ಮಾಡಿದ್ದಾರೆ.
ವಿಜಯಪುರ (ಏ.30): ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣವನ್ನು ನೋಡಿದರೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಇತ್ತೊ ಏನೋ..? ಆದರೆ, ಗಿನ್ನೆಸ್ ರೆಕಾರ್ಡ್ ಅಂತೂ ಆಗುತ್ತೆ ಎನಿಸುತ್ತದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಟೀಕೆ ಮಾಡಿದ್ದಾರೆ.
ವಿಜಯಪುರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಕುರಿತು ಮಾತನಾಡಿದ ಅವರು, ಇದು ದೇಶದಲ್ಲಿಯೆ ಗಿನ್ನಿಸ್ ದಾಖಲೆಯಾಗುತ್ತೆ ಏನೋ. ಇಂಥದ್ದನ್ನ ಹಿಂದೆಂದೂ ಕಂಡಿಲ್ಲ. ಇದು ಗಿನ್ನಿಸ್ ದಾಖಲೆಯಾಗುತ್ತೆ ಎನ್ನುವ ಭಾವನೆ ನಮ್ಮದಾಗಿದೆ. ಸಂಸದ ಪ್ರಜ್ವಲ್ ರೇವಣ್ಣಗೆ ಶ್ರೀ ಕೃಷ್ಣ ರೆಕಾರ್ಡ್ ಮುರಿಯಬೇಕು ಅನ್ನೋದು ಮನಸ್ಸಿನಲ್ಲಿ ಇತ್ತೊ ಏನೋ? ಶ್ರೀ ಕೃಷ್ಣನ ಮೇಲಿನ ಭಕ್ತಿ ಭಾವಕ್ಕೆ ಹೆಣ್ಣು ಮಕ್ಕಳು ಪರವಶವಾಗುತ್ತಿದ್ದರು. ಈ ರೀತಿಯ ಘಟನೆ ಆಗಿರಲಿಲ್ಲ. ಈಗ ಎಲ್ಲ ರೆಕಾರ್ಡ್ ಮುರಿಯಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ: ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕುರಿತು ಮೊದಿ ಉತ್ತರ ಕೊಡಬೇಕು. ಬಾಯಿಯೋ ಔರ್ ಬೆಹೆನೋ ಉತ್ತರ ಕೊಡಿ. 'ಐಸಾ ಹಮಾರಾ ಪ್ರಜ್ವಲ್ ರೇವಣ್ಣಾನೆ ಕಿಯಾ ಹೈ ಫೆಹ್ಲಾ ಮಾಲುಮ್ತಾ ಫೀರ್ ಬಿ ಹಮ್ ಟಿಕೇಟ್ ದೆಂಗೆ' ಎಂದು ಹೇಳಿದರು. ಅಮಿತ್ ಶಾ ಅವರಿಗೆ ಈ ವಿಚಾರ ಗೊತ್ತಿದ್ರೆ ಟಿಕೇಟ್ ಯಾಕೆ ಕೊಟ್ಟರು. ಟಿಕೆಟ್ ಕೊಟ್ಟದ್ದು ಯಾಕೆ ಅಮಿತ್ ಶಾ ಉತ್ತರಿಸಬೇಕು. ಮಾಡುವವರು ಅವರು, ಕ್ರಮ ನಾವು ಕೈಗೊಳ್ಳಬೇಕಾ? ಎಸ್ ಐ ಟಿ ರಚನೆ ಮಾಡಿದ್ದಿವಿ ಎಲ್ಲಾ ಹೊರಗೆ ಬರುತ್ತದೆ. ವಿಡಿಯೋ ಹೊರಗಡೆ ಬಂದ ಕೂಡಲೇ ಎಸ್ ಐ ಟಿ ರಚನೆ ಮಾಡಿದ್ದಿವಿ. ಕಾಂಗ್ರೆಸ್ ನ ಪಾತ್ರ ಇದರಲ್ಲಿ ಯಾವುದು ಇಲ್ಲ. ಅವರು ಮಾಡಿದ ಕೃತ್ಯ ಹೊರಗಡೆ ಬಂದಿದೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಡ್ರೈವರ್ ಕಾರ್ತಿಕ್ ಸ್ಪೋಟಕ ಮಾಹಿತಿ
ಪ್ರಜ್ವಲ್ ಪೆನ್‌ಡ್ರೈವ್ ಹಿಂದೆ ಡಿಕೆಶಿ ಕೈವಾಡ ಆರೋಪ ವಿಚಾರದ ಬಗ್ಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ವಿಡಿಯೋ ರೆಕಾರ್ಡ್ ಮಾಡೋಕೆ ಹೇಳಿದ್ರಾ? ಮಾಡೋದು ನೀವು.. ನಿಮಗೆ ಮಾಡೋಕೆ ಹೇಳಿತ್ತಾ? ಡಿ.ಕೆ. ಶಿವಕುಮಾರ್ ಮಾಡು ಅಂದ್ರೆ ಮಾಡ್ತೀರಾ? ಒಂದೆರೆಡು ಹೆಣ್ಮಕ್ಕಳಲ್ಲ, ಸಾವಿರಾರು ಹೆಣ್ಣು ಮಕ್ಕಳಿದ್ದಾರೆ. ನಾವು ಮಾಡು ಅಂದ್ರೆ ಮಾಡ್ತೀರಾ? ಸುಮ್ಮನೆ ಆರೋಪ ಹೊ