* 14ನೇ ಆವೃತ್ತಿಯ ಐಪಿಎಲ್ ಭಾಗ 2 ಟೂರ್ನಿಗೆ ಕ್ಷಣಗಣನೆ ಆರಂಭ* ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ*  ಅಸ್ಲೀ ಪಿಕ್ಚರ್ ಅಭೀ ಭಾಕೀ ಹೈ ಎಂದು ಎಚ್ಚರಿಸಿದ ಮಾಹಿ

ದುಬೈ(ಆ.20): ಉದ್ದನೆಯ ಹೇರ್‌ಸ್ಟೈಲ್‌ನಿಂದ ಹಿಡಿದು, ಬಾಲ್ಡ್‌ ಹೆಡ್‌ವರೆಗೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಏನೇ ಮಾಡಿದರೂ ಸೋಷಿಯಲ್‌ ಮೀಡಿಯಾಗಳಲ್ಲಿ ಅದೊಂದು ಟ್ರೆಂಡ್ ಆಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದೀಗ ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

2021ನೇ ಸಾಲಿನ ಐಪಿಎಲ್‌ 2ನಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳುವ ಮುನ್ನ ಧೋನಿ ಕೇಶ ವಿನ್ಯಾಸಕಾರ ಆಲೀಂ ಹಕೀಂ ಬಳಿ ಡಿಫರೆಂಟ್‌ ಹೇರ್‌ಸ್ಟೈಲ್ ಮಾಡಿಸಿಕೊಂಡು ಚಿರಯುವಕನಂತೆ ಕಂಗೊಳಿಸಿದ್ದರು. ಇದೀಗ ಐಪಿಎಲ್‌ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಧೋನಿ ಹೊಸ ಅವತಾರದ ಗೆಟಪ್‌ವೊಂದನ್ನು ಹಂಚಿಕೊಂಡಿದ್ದು, ಅಸ್ಲೀ ಪಿಕ್ಚರ್ ಅಭೀ ಭಾಕೀ ಹೈ ಎಂದು ಟ್ವೀಟ್‌ ಮಾಡಿದೆ. ಧೋನಿಯ ಹೊಸ ಲುಕ್‌ ಅಭಿಮಾನಿಗಳ ಹೃದಯ ಗೆದ್ದಿದೆ.

Scroll to load tweet…

ಐಪಿಎಲ್‌ ಭಾಗ-2 ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವುದರಿಂದ ಜಾಹಿರಾತಿನ ಉದ್ದೇಶದಿಂದ ಧೋನಿ ಈ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. 14ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ನ ಜಾಹಿರಾತೊಂದರಲ್ಲಿ ಧೋನಿ ಮಾಂಕ್‌ ಗೆಟಪ್‌ನಲ್ಲಿ ಮಿಂಚಿದ್ದರು.

IPLಗೂ ಮುನ್ನ ಡ್ಯಾಶಿಂಗ್ ಲುಕ್‌ನಲ್ಲಿ ಕಂಗೊಳಿಸಿದ ಎಂಎಸ್‌ ಧೋನಿ

Scroll to load tweet…

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ ಭಾಗ 2ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 19ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಲ್ಲಾ ತಂಡಗಳಿಗಿಂತ ಮೊದಲೇ ಯುಎಇಗೆ ಬಂದಿಳಿದಿದ್ದು, ಹೋಟೆಲ್‌ ಕ್ವಾರಂಟೈನ್‌ ಮುಗಿಸಿ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ.