Asianet Suvarna News Asianet Suvarna News

ತಾಲಿಬಾನಿಗಳ ಕೈತಪ್ಪಿದೆ 75000 ಕೋಟಿ!

  • ನಾಗರಿಕ ಸರ್ಕಾರವನ್ನು ಪತನಗೊಳಿಸಿ ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿ ಉಗ್ರರು
  • ತಾಲಿಬಾನಿ ಉಗ್ರರಿಗೆ, ದೇಶದ ಪರಿಪೂರ್ಣ ಸಂಪತ್ತು ಕೈಗೆ ಸಿಗುತ್ತಿಲ್ಲ
Taliban Terrorists cant get 75000 crore Afghanistan money snr
Author
Bengaluru, First Published Aug 20, 2021, 7:33 AM IST
  • Facebook
  • Twitter
  • Whatsapp

ಕಾಬೂಲ್‌ (ಆ.20): ನಾಗರಿಕ ಸರ್ಕಾರವನ್ನು ಪತನಗೊಳಿಸಿ ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿ ಉಗ್ರರಿಗೆ, ದೇಶದ ಪರಿಪೂರ್ಣ ಸಂಪತ್ತು ಕೈಗೆ ಸಿಗುತ್ತಿಲ್ಲ. ಹೌದು. ಅಫ್ಘಾನಿಸ್ತಾನದ ರಿಸರ್ವ್ ಬ್ಯಾಂಕ್‌ ಆಗಿರುವ ‘ದ ಅಫ್ಘಾನಿಸ್ತಾನ್‌ ಬ್ಯಾಂಕ್‌’ (ಡಿಎಬಿ) ಸುಮಾರು 75 ಸಾವಿರ ಕೋಟಿ ರು. ಸಂಪತ್ತು ಹೊಂದಿದ್ದರೂ ಅದು ಉಗ್ರರಿಗೆ ದೊರೆಯುತ್ತಿಲ್ಲ.

ಈ 75 ಸಾವಿರ ಕೋಟಿ ರು. ಭೌತಿಕ ನಗದು ರೂಪದಲ್ಲಿ ಇಲ್ಲ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಧಿ ಹಾಗೂ ಚಿನ್ನದ ರೂಪದಲ್ಲಿ ಅದನ್ನು ಸಂಗ್ರಹಿಸಿಡಲಾಗಿದೆ. ಈ ಎಲ್ಲವನ್ನೂ ಅಫ್ಘಾನಿಸ್ತಾನದಿಂದ ಹೊರಗಿನ ದೇಶಗಳಲ್ಲಿ ಇಡಲಾಗಿದೆ. ಹೀಗಾಗಿ ಅದು ತಾಲಿಬಾನಿಗಳ ಕೈಗೆ ಸಿಗುವುದಿಲ್ಲ ಎಂದು ದೇಶ ತೊರೆದು ಪರಾರಿಯಾಗಿರುವ ಡಿಎಬಿ ಗವರ್ನರ್‌ ಅಜ್ಮಲ್‌ ಅಹಮದಿ ತಿಳಿಸಿದ್ದಾರೆ.

ಕರಾಳ ಮುಖ ತೋರಲು ಆರಂಭಿಸಿದ ತಾಲಿಬಾನಿಗಳು : ನಾಗರಿಕರ ಮೆಲೆ ಗುಂಡಿನ ಮಳೆ

ಆದಾಗ್ಯೂ 3900 ಕೋಟಿ ರು. ಹಣ ಉಗ್ರರ ವಶವಾಗಿದೆ. ಇದರಲ್ಲಿ, ಡಿಎಬಿಯ ಶಾಖೆಗಳಲ್ಲಿ 2700 ಕೋಟಿ ರು. ವಿದೇಶಿ ಕರೆನ್ಸಿ ಇದ್ದು, ಅದನ್ನು ತಾಲಿಬಾನ್‌ ವಶಕ್ಕೆ ತೆಗೆದುಕೊಂಡಿದೆ. ರಾಷ್ಟ್ರಪತಿಗಳ ಅರಮನೆಯಲ್ಲಿ 1200 ಕೋಟಿ ರು. ಮೌಲ್ಯದ ಚಿನ್ನದ ಗಟ್ಟಿಹಾಗೂ ಬೆಳ್ಳಿ ನಾಣ್ಯಗಳು ಇದ್ದು, ಉಗ್ರರ ಕೈವಶವಾಗಿರುವ ಸಾಧ್ಯತೆ ಇದೆ.

ಅಮೆರಿಕದ ಫೆಡರಲ್‌ ಬ್ಯಾಂಕಿನಲ್ಲಿ 52 ಸಾವಿರ ಕೋಟಿ, ಅಮೆರಿಕದ ಬಾಂಡ್‌ಗಳಲ್ಲಿ 23 ಸಾವಿರ ಕೋಟಿ, ಚಿನ್ನ ರೂಪದಲ್ಲಿ 9000 ಕೋಟಿ, ಅಂತಾರಾಷ್ಟ್ರೀಯ ಖಾತೆಗಳಲ್ಲಿ 9600 ಕೋಟಿ, ಬ್ಯಾಂಕ್‌ ಆಫ್‌ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್ಸ್‌ನಲ್ಲಿ 5200 ಕೋಟಿ ರು.ಗಳನ್ನು ಡಿಎಬಿ ಇಟ್ಟಿದೆ. ಅಫ್ಘಾನಿಸ್ತಾನಕ್ಕೆ ನಿಯಮಿತವಾಗಿ ವಾರಗಳ ಅಂತರದಲ್ಲಿ ಅಮೆರಿಕದಿಂದ ನಗದು ಹಣ ಬರುತ್ತಿತ್ತು. ಅಮೆರಿಕ ಸರ್ಕಾರ ವಿಮಾನದಲ್ಲಿ ಅದನ್ನು ಪೂರೈಸುತ್ತಿತ್ತು. ಆದರೆ ತಾಲಿಬಾನಿಗಳ ಆಕ್ರಮಣ ಆರಂಭವಾದ ಬಳಿಕ ಅಲ್ಲಿಂದ ಯಾವುದೇ ಹಣ ಬಂದಿಲ್ಲ. ಅಫ್ಘಾನಿಸ್ತಾನದ ಆರ್ಥಿಕತೆ ಈ ಹಣದ ಮೇಲೆಯೇ ಅವಲಂಬಿತವಾಗಿತ್ತು. ಆದರೆ ಈಗ ಅಫ್ಘಾನಿಸ್ತಾನದಲ್ಲಿ ನಗದು ಹಣವೇ ಇಲ್ಲ ಎಂದು ಅವರು ವಿವರಿಸಿದ್ದಾರೆ.

ಮತ್ತೊಂದೆಡೆ, ತನ್ನ ದೇಶದಲ್ಲಿ ಅಫ್ಘಾನಿಸ್ತಾನ ಇಟ್ಟಿರುವ ಹಣವನ್ನು ತಾಲಿಬಾನ್‌ಗೆ ಸಿಗದಂತೆ ಮಾಡಲು ಅಮೆರಿಕ ಕೊಕ್ಕೆ ಹಾಕಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಕೂಡ ತನ್ನಲ್ಲಿರುವ ಹಣವನ್ನು ತಾಲಿಬಾನಿಗಳಿಗೆ ಕೊಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಉಗ್ರರಿಗೆ ಸಹಸ್ರಾರು ಕೋಟಿ ರು. ಸಿಗುವುದು ತಪ್ಪಿದೆ.

Follow Us:
Download App:
  • android
  • ios