ಮಣಿಪುರದಲ್ಲಿ ಮಹಿಳೆಯರಿಗೆ ಆದ ಅನ್ಯಾಯದ ಬಗ್ಗೆ ಏನೂ ಕ್ರಮ ತಗೊಂಡಿದ್ದೀರಿ: ಶಾಗೆ ರಾಮಲಿಂಗಾರೆಡ್ಡಿ ತಿರುಗೇಟು

By Girish Goudar  |  First Published Apr 30, 2024, 4:38 PM IST

ಗೃಹ ಮಂತ್ರಿ ಆಗಿರುವ ನೀವು ಮಣಿಪುರದಲ್ಲಿ ಮಹಿಳೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ಏನೂ ಕ್ರಮ ತಗೊಂಡಿದ್ದೀರಾ?. ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿದ್ರೂ ಕೂಡಾ ಕೇಂದ್ರ ಸರ್ಕಾರ ನೋಡ್ತಿಲ್ಲ. ಹೆಚ್ಚು ಬಿಜೆಪಿ ಸರ್ಕಾರಗಳೇ ಇರುವ ರಾಜ್ಯಗಳಲ್ಲಿ ದೌರ್ಜನ್ಯ ಆಗ್ತಿದೆ. ಅಂತಹ ರಾಜ್ಯಗಳಲ್ಲಿ ಗಮನ ಹರಿಸಿ. ಇತ್ತ ನಮ್ಮ ರಾಜ್ಯದಲ್ಲಿ ಕಾನೂ ಸುವ್ಯವಸ್ಥೆ ಚೆನ್ನಾಗಿಯೇ ಇದೆ ಎಂದು ಅಮಿತ್ ಶಾಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ


ಬಾಗಲಕೋಟೆ(ಏ.30):  ನಮ್ಮ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಯಾವಾಗಲೂ ಚೆನ್ನಾಗಿರುತ್ತದೆ. ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರಲಿಲ್ಲ. ಆಗಲ್ಲ ಬಿಜೆಪಿ ಕಾರ್ಯಕರ್ತರೇ ನೈತಿಕ ಪೊಲೀಸಗಿರಿ ಮಾಡ್ತಿದ್ರು.. ದಕ್ಷಿಣ ಕರ್ನಾಟಕದಲ್ಲಿ ಪೊಲೀಸರನ್ನು ಕೂಡ ಕೇಸರಿಮಯ ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಸರಿಯಾಗಿದೆ. 6.5 ಕೋಟಿ ಜನರಿಗೆ ರಕ್ಷಣೆ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ಜಿಲ್ಲೆಯ ಬೆನಕಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಗೃಹ ಮಂತ್ರಿ ಆಗಿರುವ ನೀವು ಮಣಿಪುರದಲ್ಲಿ ಮಹಿಳೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ಏನೂ ಕ್ರಮ ತಗೊಂಡಿದ್ದೀರಾ?. ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿದ್ರೂ ಕೂಡಾ ಕೇಂದ್ರ ಸರ್ಕಾರ ನೋಡ್ತಿಲ್ಲ. ಹೆಚ್ಚು ಬಿಜೆಪಿ ಸರ್ಕಾರಗಳೇ ಇರುವ ರಾಜ್ಯಗಳಲ್ಲಿ ದೌರ್ಜನ್ಯ ಆಗ್ತಿದೆ. ಅಂತಹ ರಾಜ್ಯಗಳಲ್ಲಿ ಗಮನ ಹರಿಸಿ. ಇತ್ತ ನಮ್ಮ ರಾಜ್ಯದಲ್ಲಿ ಕಾನೂ ಸುವ್ಯವಸ್ಥೆ ಚೆನ್ನಾಗಿಯೇ ಇದೆ ಎಂದು ಅಮಿತ್ ಶಾಗೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. 

Tap to resize

Latest Videos

undefined

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ನಾನೂ ನೋಡಿದ್ದೇನೆ, ತಾಯಿ ವಯಸ್ಸಿನವರೊಂದಿಗೆ ಅಸಹ್ಯ ನೋಡೋಕಾಗ್ಲಿಲ್ಲ; ಡಿ.ಕೆ. ಸುರೇಶ್

ಪೆನ್ ಡ್ರೈವ್ ವಿಡಿಯೋ ಹರಿದಾಡ್ತಿರೋದರ ಹಿಂದೆ ಮಹಾನಾಯಕನ ಕೈವಾಡ ಇದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ ಅವರು, ಅವುಗಳನ್ನು ಯಾರು ರೆಕಾರ್ಡ್ ಮಾಡಿಕೊಳ್ತಾರೆ?. ಯಾರೋ ಮಹಾನಾಯಕ ಹೋಗಿ ಮಾಡೋಕಾಗುತ್ತಾ ಅದನ್ನ?. ಎಲ್ಲವೂ ಸ್ವಯಂಕೃತ ಅಪರಾಧಗಳಿವು. ಯಾರೇ ತಪ್ಪು ಮಾಡಿದ್ರೂ ತಪ್ಪೇ. ಎಸ್ಐಟಿ ಮಾಡಿದ್ದೀವಿ ತನಿಖೆ ಆಗ್ತಿದೆ. ತಪ್ಪಾಗಿದ್ರೆ ಶಿಕ್ಷೆ ಆಗಲಿ, ತಪ್ಪಿಲ್ಲ ಅದ್ರೆ ಬಿಡುಗಡೆ ಆಗಲಿ ಎಂದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಪೆನ್ ಡ್ರೈವ್‌ ಇರಲಿಲ್ಲ ಅಂದಿದ್ರೆ ಸಮಸ್ಯೇನೆ ಇರ್ತಿರಲಿಲ್ವಲ್ಲ? 

ಪೆನ್ ಡ್ರೈವ್ ಯಾಕ ಮಾಡಿಕೊಂಡ್ರು, ಪೆನ್ ಡ್ರೈವ್‌ ಇರಲಿಲ್ಲ ಅಂದಿದ್ರೆ ಸಮಸ್ಯೇನೆ ಇರ್ತಿರಲಿಲ್ವಲ್ಲ?. ಅಧಿಕಾರದಲ್ಲಿ ಇರುವವರು ಯಾವತ್ತೂ ಹುಷಾರಾಗಿರಬೇಕು. ಯಾವುದೇ ತಪ್ಪಿಗೂ ಸಿಗಾಕೋಬಾರದು. ಕಾಂಗ್ರೆಸ್ ಸಂಸದನ ಮೇಲೆ ಈ ರೀತಿ ಆಪಾದನೆ ಬಂದಿದ್ರೆ ಬಿಜೆಪಿಗರು ಇದೇ ರೀತಿ ಸುಮ್ನಿರ್ತಿದ್ರಾ?. ಏನಾದರೂ ಸಣ್ಣಪುಟ್ಟ ಘಟನೆ ಆದ್ರೆ ಹೋಗಿ ಗಲಾಟೆ ಮಾಡ್ತಾರೆ. ಕಾಂಗ್ರೆಸ್ ಸಂಸದರು ಅಥವಾ ವಿಪಕ್ಷದ ಸಂಸದರು ಈ ರೀತಿ ಮಾಡಿದಿದ್ರೆ. ಬಿಜೆಪಿಗರು ಏನು ಮಾಡ್ತಾಯಿದ್ರು?. ಇದು ಪ್ರಧಾನಿ ಗಮನಕ್ಕೆ, ಗೃಹ ಮಂತ್ರಿ ಗಮನಕ್ಕೂ ಬಂದಿರುತ್ತದೆ. ವಿಪಕ್ಷಗಳು ತಪ್ಪು ಮಾಡದೇ ಇದ್ರು ತಪ್ಪುಗಳನ್ನು ವಿಪಕ್ಷಗಳ ಮೇಲೆ ಹಾಕಿ ಅಪಪ್ರಚಾರ ಮಾಡ್ತಾರೆ. ಸ್ವಪಕ್ಷಿಯರು, ಏನೇ ತಪ್ಪು ಮಾಡಿದ್ರು ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ. ಎನ್ಐಎ ಇದೆ, ಸಿಬಿಐ ಇದೆ ಅವರೇ ಪ್ರಜ್ವಲ್ ಕೇಸ್ ತಗೊಳ್ಳಲಿ ಎಂದು ರಾಮಲಿಂಗರೆಡ್ಡಿ ಸವಾಲ್ ಹಾಕಿದ್ದಾರೆ. 

click me!