Asianet Suvarna News Asianet Suvarna News

ಹಾಟ್ ಸಾಂಗ್‌ಗೆ ಡ್ಯಾನ್ಸ್ ಮಾಡಿ ಆನ್‌ಲೈನಲ್ಲೇ ಚಿನ್ನದ ಹುಡುಗನ ಅಪ್ಪಿಕೊಂಡ RJ

  • ಚಿನ್ನದ ಹುಡುಗನ ಸಂದರ್ಶನದಲ್ಲಿ ಆರ್‌ಜೆ ಮಾಡಿದ ಅಚಾತುರ್ಯ
  • ಸಂದರ್ಶನದ ಮಧ್ಯೆಯೇ ಹಾಟ್ ಸಾಂಗ್‌ಗೆ ಡ್ಯಾನ್ಸ್
  • ನನ್ನದು ದೂರದಿಂದಲೇ ನಮಸ್ತೆ ಎಂದ ಚಿನ್ನದ ಹುಡುಗ 
RJ Malishka dances for Neeraj offers jaadu ki jhappi during interview criticized dpl
Author
Bangalore, First Published Aug 20, 2021, 4:29 PM IST

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗಿನಿಂದ, ಪ್ರತಿಯೊಬ್ಬ ಭಾರತೀಯನೂ ಅವರ ಅಭಿಮಾನಿಯಾಗಿದ್ದಾರೆ. ಭಾರತದಾದ್ಯಂತ ಜನರು ಸಾಮಾಜಿಕ ಮಾಧ್ಯಮದಲ್ಲಿ ನೀರಜ್‌ ಅವರನ್ನು ಬಹಳಷ್ಟು ಜನ ಶ್ಲಾಘಿಸಿದ್ದಾರೆ. ಆದರೂ ನೀರಜ್ ಸಂದರ್ಶನ ತುಣುಕೊಂದು ಈಗಾ ಭಾರೀ ಟೀಕೆಯಾಗಿದೆ.

ಗುರುವಾರ (ಆಗಸ್ಟ್ 19), ರೇಡಿಯೋ ಜಾಕಿ ಮಾಲಿಷ್ಕಾ ಮೆಂಡೊನ್ಸಾ ರೆಡ್ ಎಫ್‌ಎಂ ಅವರು ವೀಡಿಯೋ ಸಂದರ್ಶನದಲ್ಲಿ ಚೋಪ್ರಾ ಮುಂದೆ ನೃತ್ಯ ಮಾಡುತ್ತಿರುವ ಆಕೆಯ ಮತ್ತು ರೇಡಿಯೋ ಸ್ಟೇಷನ್ ಸಿಬ್ಬಂದಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ನೀರಜ್‌ಗೆ ಸಿನಿಮಾ ಆಫರ್: ಚಿನ್ನದ ಹುಡುಗ ಕೊಟ್ಟ ಆನ್ಸರ್ ಇದು

ಸಂದರ್ಶನದಲ್ಲಿ, ಮೆಂಡೊನ್ಸಾ ಮತ್ತು ಆಕೆಯ ಸಹೋದ್ಯೋಗಿಗಳು 'ಉಡೆ ಜಬ್ ಜಬ್ ಜುಲ್ಫೀನ್ ತೆರಿ' ಹಾಡಿಗೆ ನೃತ್ಯ ಮಾಡುತ್ತಿರುವಾಗ ನೀರಜ್ ವಿಚಿತ್ರವಾದ ನಗು ಚೆಲ್ಲಿದ್ದಾರೆ. ನಾವು ನಿಮ್ಮನ್ನು ಹೆಚ್ಚು ಚುಡಾಯಿಸಿಲ್ಲ ಸಲ್ವಾ? ಎಂದು ಪ್ರಶ್ನಿಸಿದ್ದಾರೆ ಆರ್‌ಜೆ. ವೀಡಿಯೊವನ್ನು ಹಂಚಿಕೊಳ್ಳುತ್ತಾ ರೇಡಿಯೋ ಜಾಕಿ ಟ್ವಿಟರ್‌ನಲ್ಲಿ ನಾವ್ಯಾರಿಗಾಗಿ ಡ್ಯಾನ್ಸ್ ಮಾಡುತ್ತಿದ್ದೇವೆ ಎಂದು ಸ್ವಲ್ಪ ನೋಡಿ ಎಂದು ಕ್ಯಾಪ್ಶನ್‌ನಲ್ಲಿ ಸಸ್ಪೆನ್ಸ್ ಕೊಟ್ಟಿದ್ದಾರೆ.

ಇಡೀ ರಾಷ್ಟ್ರದ ಪರವಾಗಿ ಚೋಪ್ರಾ ಅವರಿಗೆ 'ವರ್ಚುವಲ್ ಡ್ಯಾನ್ಸ್' ಕೊಟ್ಟಾಗ ಎಡವಟ್ಟು ಮತ್ತಷ್ಟು ಹೆಚ್ಚಾಗಿದೆ. ಅಸಮಾಧಾನಗೊಂಡ ಚೋಪ್ರಾ 'ನಮಸ್ತೆ' ಸನ್ನೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹೀಗೆ ದೂರದಿಂದಲೇ ನಮಸ್ತೆ ಎಂದಿದ್ದಾರೆ ನೀರಜ್. ಚೋಪ್ರಾ ಹೇಗೆ ಭಾವಿಸುತ್ತಾರೆ ಎಂಬುದನ್ನು ಊಹಿಸಬಹುದಾದರೂ, ಟ್ವಿಟ್ಟರ್ ಜನ ಇದನ್ನು ಟೀಕಿಸಿದ್ದಾರೆ. ಸಂದರ್ಶನವನ್ನು ವಿಚಿತ್ರವಾಗಿ, ಭಯಂಕರವಾಗಿ ಮಾಡಿ ಕ್ರೀಡಾಪಟುವಿಗೆ ಅವಮಾನಿಸುತ್ತಿದ್ದಾರೆ ಎಂದಿದ್ದಾರೆ ನೆಟ್ಟಿಗರು.

Follow Us:
Download App:
  • android
  • ios