ವಿಸ್ತರಣೆಯಾಯ್ತು ಸಂಪುಟ, ಧೋನಿ ಫಾರ್ಮ್‌ಗೆ ಹಕ್ಕಿ ಜ್ವರ ಸಂಕಷ್ಟ; ಜ.14ರ ಟಾಪ್ 10 ಸುದ್ದಿ!

By Suvarna NewsFirst Published Jan 14, 2021, 4:52 PM IST
Highlights

ಸಂಕ್ರಾಂತಿಗೆ ಕರ್ನಾಟಕ ಸಂಪುಟ ವಿಸ್ತರಣೆಯಾಗಿದ್ದಾರೆ. 7 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೂ ಸಿಎಂಗೆ ತಲೆನೋವು ತಪ್ಪಿಲ್ಲ.  ದೇಶದಲ್ಲಿ ಪೆಟ್ರೋಲ್ ಮತ್ತೆ ದುಬಾರಿಯಾಗಿದೆ. ಇನ್ನು ಧೋನಿಯ ಕಡಕ್‌ನಾಥ್ ಕೋಳಿ ಫಾರ್ಮ್‌ಗೆ ಹಕ್ಕಿ ಜ್ವರ ಚಿಂತೆ ಆವರಿಸಿದೆ.   ರಶ್ಮಿಕಾ ಮಂದಣ್ಣ ಬಾಲಿವುಡ್ ಸಾಂಗ್ ರಿಲೀಸ್, ಅಗ್ಗದ ದರದಲ್ಲಿ ಎಲೆಕ್ಟ್ರಿಕ್ ಕಾರು ಸೇರಿದಂತೆ ಜನವರಿ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸಂಕ್ರಾಂತಿಗೆ ಕೊನೆಗೂ ಸಂಪುಟ ಬಂತು.. ಇನ್ನು ಮುಂದೆ ಯಾವ ಕ್ರಾಂತಿ ಕಾದಿದೆ?...

ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಇಂದು (ಬುಧವಾರ) ಮೂರನೇ ಬಾರಿಗೆ ವಿಸ್ತರಣೆಯಾಗಿದ್ದು, ಏಳು ಜನರು ಪ್ರಮಾಣವಚನ ಸ್ವೀಕರಿಸಿದರು.

ಅವರನ್ ಬಿಟ್.... ಇವರನ್ ಬಿಟ್... ಕ್ಯಾಬಿನೆಟ್: ಬಿಎಸ್‌ವೈಗೀಗ ಹೊಸ ತಲೆನೋವು!...

ಬಿ. ಎಸ್. ಯಡಿಯೂರಪ್ಪ ಸಪ್ತ ಸಾರಥಿಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಇಲ್ಲಿ ಟ್ವಿಸ್ಟ್ ಏನು ಗೊತ್ತಾ? ಮಂತ್ರಿಗಿರಿ ಸಿಗುತ್ತೆ ಅಂತ ಅಂದುಕೊಂಡಿದ್ದರೆ ಬಿಗ್ ಶಾಕ್ ಕೊಟ್ಟು ಆಕಾಂಕ್ಷಿಗಳಲ್ಲದವರಿಗೆ ಮಂತ್ರಿಪಟ್ಟ ಕೊಟ್ಟಿದ್ದಾರೆ. ಇಲ್ಲಿ ಒಬ್ಬರು ಸಿಎಂರನ್ನು ಬೈದು ಕೆಟ್ಟರೆ, ಮತ್ತೊಬ್ಬರು ಹೊಗಳಿ ಕೆಟ್ಟಿದ್ದರೆ, ಮತ್ತೊಬ್ಬರು ಹೊಗಳಿ ಕೆಟ್ಟಿದ್ದಾರೆ. ಗೆದ್ದು ಸೋತವರರು ಒಂದೆಡೆಯಾದರೆ, ಸೋತು ಗೆದ್ದರು ಮತ್ತೊಂದು ಕಡೆ.

ವಾಹನ ಚಾಲಕರಿಗೆ ಬಿಗ್ ಶಾಕ್: ಮೇ ಬಳಿಕ ಪೆಟ್ರೋಲ್‌ ಲೀ.ಗೆ 14.79 ರು. ಹೆಚ್ಚಳ!...

ಏರುಗತಿಯಲ್ಲೇ ಸಾಗುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಬುಧವಾರ ಮತ್ತೊಂದು ದಾಖಲೆ ಸ್ಥಾಪಿಸಿವೆ. ತೈಲ ಕಂಪನಿಗಳು ಬುಧವಾರ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಲೀ.ಗೆ ಕ್ರಮವಾಗಿ 26 ಮತ್ತು 27 ಪೈಸೆಯಷ್ಟುಏರಿಸಿವೆ. ಇದರೊಂದಿಗೆ 2020ರ ಮೇ ತಿಂಗಳ ಬಳಿಕ ಪೆಟ್ರೋಲ್‌ ದರ ಒಟ್ಟಾರೆ 14.79 ರು. ಮತ್ತು ಡೀಸೆಲ್‌ ದರ 12.34 ರು.ನಷ್ಟುಹೆಚ್ಚಳವಾದಂತಾಗಿದೆ.

ಧೋನಿಗೆ ಕಳಿಸಬೇಕಿದ್ದ 2500 ಕಡಕ್‌ನಾಥ್‌ ಕೋಳಿಗಳಿಗೆ ಹಕ್ಕಿಜ್ವರ, ಹತ್ಯೆ!...

ಮಧ್ಯಪ್ರದೇಶದ ಝಬುವಾದಲ್ಲಿ ಎಚ್‌5ಎನ್‌1 ಸೋಂಕಿನಿಂದ 2,500 ಕಡಕ್‌ನಾಥ್‌ ಕೋಳಿಗಳು ಮೃತಪಟ್ಟಿವೆ.

ಬಾಲಿವುಡ್‌ನಲ್ಲಿ ರಶ್ಮಿಕಾ ಮೊದಲ ಸಾಂಗ್..! ಹೀಗಿದೆ ಲುಕ್...

ಬಾಲಿವುಡ್ ರ್ಯಾಪರ್ ಬಾದ್‌ಶಾ ಜೊತೆ ವಿಡಿಯೋ ಸಾಂಗ್‌ನಲ್ಲಿ ನಟಿಸಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ ರಶ್ಮಿಕಾ..! ಸಾಂಗ್‌ನಲ್ಲಿ ಹೇಗಿರಲಿದೆ ಕಿರಿಕ್ ಚೆಲುವೆಯ ಲುಕ್..? ಇಲ್ನೋಡಿ ಫೋಟೋಸ್

ಸಂಕ್ರಾಂತಿ ಆಚರಣೆ ಮಧ್ಯೆ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ!...

ದೇಶಾದ್ಯಂತ ಇಂದು ಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿರುವ ಜನರಿಗೆ ಮತ್ತೊಂದು ಖುಷಿ ಸುದ್ದಿ ಬಂದೆಗರಿದೆ.

ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!...

ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ, ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆಯ ಕಾರು ನೀಡುತ್ತಿದೆ. ದೇಶದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ suv ಕಾರು ಕೂಡ ಟಾಟಾ ನೆಕ್ಸಾನ್. ಇದೀಗ ಎಲೆಕ್ಟ್ರಿಕ್ ಕಾರು ಪ್ರೀಯರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ. ಅಗ್ಗದ ದರದಲ್ಲಿ ಟಾಟಾ 200 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

ಶೃಂಗೇರಿ ಶಾರಾದಾಂಬೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಭೇಟಿ !...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ದಿಢೀರ್ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬ್ರಿಟನ್‌ನಲ್ಲಿ ಒಂದೇ ದಿನ 1564 ಮಂದಿ ಕೊರೋನಾಗೆ ಬಲಿ, ಬಯಲಾಯ್ತು ಶಾಕಿಂಗ್ ವಿಚಾರ!...

 ಬ್ರಿಟನ್‌ನಲ್ಲಿ ಕೊರೋನಾ ವೈರಸ್ ಮಹಾಮಾರಿ ಕ್ಷೀಣಿಸುವ ಲಕ್ಷಣ ಕಾಣುತ್ತಿಲ್ಲ. ಬುಧವಾರ ಕೊರೋನಾ ವೈರಸ್‌ನ 1564 ರೋಗಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿ ಒಟ್ಟು 84,767 ಮಂದಿ ಮೃತಪಟ್ಟಂತಾಗಿದೆ.

ಬ್ಲ್ಯಾಕ್ ಮೇಲ್, ಸಿಡಿ.. ಸೈನಿಕ ಮಾಧ್ಯಮಗಳಿಗೆ ನೀಡಿದ ಸಂದೇಶ!...

ನಾನು ಸದ್ಯಕ್ಕೆ ಮಾಧ್ಯಮಕ್ಕೆ ಮಾತಾಡಲ್ಲ ಎಂದ ಸಿಪಿ ಯೋಗೇಶ್ವರ್/ ರೇಣುಕಾಚಾರ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಿಪಿ ಯೋಗೇಶ್ವರ್ ನಕಾರ/ ಇನ್ನೂ ಹದಿನೈದು ಇಪ್ಪತ್ತು ವರ್ಷ ಇರ್ತೀನಿ/ ನಿಧಾನಕ್ಕೆ ಮಾತಾಡ್ತೀನಿ, ಈಗಲೇ ಏನೂ ಹೇಳಲ್ಲ ಅಂದ ಯೋಗೇಶ್ವರ್
 

click me!