ಅಂಡಮಾನಲ್ಲಿ 25000 ಕೋಟಿ ಮೌಲ್ಯದ ಡ್ರಗ್ಸ್ ವಶ: ಇಬ್ಬರು ಮ್ಯಾನ್ಮಾರ್ ಪ್ರಜೆಗಳ ಸೆರೆ

By Kannadaprabha News  |  First Published Nov 26, 2024, 7:30 AM IST

ವಶಪಡಿಸಿಕೊಂಡ ಮಾದಕ ವಸ್ತು ವಿನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25000 ಕೋಟಿ ರು.ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕಾವಲು ಪಡೆ ವಶ ಪಡಿಸಿಕೊಂಡ ಬೃಹತ್ ಪ್ರಮಾಣದ ಮಾದಕ ವಸ್ತುವಾಗಿದೆ. 
 


ಪೋರ್ಟ್‌ಬ್ಲ‌ರ್(ನ.26):  ಭಾರತೀಯ ಕರಾವಳಿಯ ಕಾವಲು ಪಡೆಯ ಅಧಿಕಾರಿಗಳು ಅಂಡಮಾನ್ ಮತ್ತು ನಿಕೋ ಬಾ‌ರ್ ದ್ವೀಪದ ಬಳಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 5500 ಕೆಜಿಯಷ್ಟು ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮ್ಯಾನ್ಮಾರ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿದೆ. 

ವಶಪಡಿಸಿಕೊಂಡ ಮಾದಕ ವಸ್ತು ವಿನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25000 ಕೋಟಿ ರು.ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕಾವಲು ಪಡೆ ವಶ ಪಡಿಸಿಕೊಂಡ ಬೃಹತ್ ಪ್ರಮಾಣದ ಮಾದಕ ವಸ್ತುವಾಗಿದೆ. 

Latest Videos

undefined

ಮಾದಕ ವಸ್ತು ಮಾರಾಟ ಜಾಲ ಬುಡ ಸಹಿತ ಕೀಳುತ್ತೇವೆ: ಗೃಹ ಸಚಿವ ಪರಮೇಶ್ವರ್

ನ.23ರಂದು ಕರಾವಳಿ ಕಾವಲು ಪಡೆ ಡೋರ್ನಿಯರ್ ವಿಮಾನ ಗಸ್ತು ತಿರುಗುತ್ತಿದ್ದ ವೇಳೆ ಪೋರ್ಟ್ ಬ್ಲರ್ ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಬ್ಯಾರೆನ್ ದ್ವೀಪದ ಬಳಿ ಮೀನುಗಾರಿಕೆ ಬೋಟ್‌ನ ಅನುಮಾನಾಸ್ಪದ ಚಲನೆ ಕಂಡು ಬಂದಿದೆ. ಈ ಮಾಹಿತಿಯನ್ನು ಸಮೀಪದ ಕರಾವಳಿ ಕಾವಲು ಪಡೆಯ ಕಮಾಂಡ್ ಸೆಂಟರ್ ಗೆ ರವಾನಿಸಲಾಗಿತ್ತು. 

ಕೂಡಲೇ ಬೋಟ್‌ನಲ್ಲಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬೋಟ್ ಅನ್ನು ಅಡ್ಡಗಟ್ಟಿ ಅದನ್ನು ತಪಾಸಣೆ ಮಾಡಿ ದ್ದಾರೆ. ಈ ವೇಳೆ ಅದರಲ್ಲಿ ತಲಾ 2 ಕೇಜಿಯ 3000 ಪ್ಯಾಕೆಟ್‌ಗಳಷ್ಟು ನಿಷೇಧಿತ ಮೆಂಥಾಫೆ ಟಾಮೈನ್ ಡಗ್ಸ್ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್‌ನ ಮೊತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25000 ಕೋಟಿ ರು.ನಷ್ಟಿದೆ. ಇತ್ತೀಚೆಗೆ ಗುಜರಾತ್ ಮತ್ತು ದೆಹಲಿಯಲ್ಲಿ ಕೂಡಾ ಅಂದಾಜು 4300 ಕೋಟಿ ರು. ಮೊತ್ತದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿತ್ತು.

ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಳ: ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ

ಬೆಂಗಳೂರು: ಜಗತ್ತಿನ ಪ್ರಮುಖ ನಗರದಲ್ಲಿ ಒಂದಾದರಾಜಧಾನಿ ಬೆಂಗಳೂರಿಗೆ ಉತ್ತರ ಭಾರತ ಮೂಲದವರು ಉದ್ಯೋಗದ ಕಾರಣಕ್ಕೆ ಭಾರೀ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಇದರ ಜತೆಗೆ ನಗರದಲ್ಲಿ ಜರುಗುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರ ಭಾರತ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಮೂಲಕ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಇವರು ಸಹ ಪ್ರಮುಖ ಕಾರಣರಾಗಿದ್ದಾರೆ. 

ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಪ್ರಕಾರ, ನಗರದ ಕಟ್ಟಡ ನಿರ್ಮಾಣ, ಫುಡ್ ಡೆಲಿವರಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಖಾಸಗಿ ಸೆಕ್ಯೂರಿಟಿ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಉದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತರ ಭಾರತ ಮೂಲದ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ದ್ವೇಷ, ಸ್ವಾರ್ಥ, ದುಶ್ಚಟ, ಮೋಜು-ಮಸ್ತಿ, ಸುಲಭ ಸಂಪಾದನೆಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಬೆಂಗಳೂರು ಅದರಲ್ಲೂ ಕನ್ನಡಿಗರ ಘನತೆಗೆ ಧಕ್ಕೆಯಾಗುತ್ತಿದೆ. 

ಮಾದಕವಸ್ತುವಿನಿಂದಾಗಿ ಕೆರಿಯರ್ ಹಾಳು ಮಾಡಿಕೊಂಡ ಬಾಲಿವುಡ್‌ ಸ್ಟಾರ್‌ಗಳಿವರು

ಬೆಂಗಳೂರು ಮಹಾನಗರ ಐಟಿ-ಬಿಟಿ, ನವೋದ್ಯಮ, ಆಟೋಮೊಬೈಲ್ ಸೇರಿ ಹಲವು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಆದರೆ, ಇಲ್ಲಿನ ಅಪರಾಧ ಚಟುವಟಿಕೆಗಳಿಂದ ಹಲವು ಬಾರಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರದ ಖ್ಯಾತಿಗೆ ಧಕ್ಕೆಯಾಗಿದೆ. ಅದರಲ್ಲೂ ಉತ್ತರ ಭಾರತ ಮೂಲದ ವಲಸಿಗರು ನಡೆಸುವ ದುಷ್ಕೃತ್ಯಗಳು ನಗರದ ಹೆಸರನ್ನು ಹೆಚ್ಚು ಕೆಡಿಸುತ್ತಿವೆ. ಈ ವಲಸಿಗರ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವುದು ಸವಾಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ!: 

ಉತ್ತರ ಭಾರತ ಮೂಲದ ಬಿಹಾರ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಯುವಕರು ನಗರದಲ್ಲಿ ಆನ್‌ಲೈನ್‌ ಫುಡ್ ಡೆಲಿವರಿ ಕೆಲಸಮಾಡಿಕೊಂಡಿದ್ದಾರೆ. ಈ ಪೈಕಿ ಕೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ದುರಾಸೆಯಿಂದ ಡ್ರಗ್ಸ್ ಮಾರಾಟ ದಂಧೆಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಫುಡ್ ಡೆಲಿವರಿ ಬಾಯ್ ಸೋಗಿನಲ್ಲಿ ಗಿರಾಕಿಗಳಿಗೆ ಗಾಂಜಾ, ಎಂಡಿಎಂಎ, ಕೊಕೇನ್ ಸೇರಿ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ. ನಗರದಲ್ಲಿ ಒಂದು ತಿಂಗಳಲ್ಲಿ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ದಾಖಲಾಗುವ ಶೇ.50ರಷ್ಟು ಆರೋಪಿಗಳು ಉತ್ತರ ಭಾರತ ಮೂಲದ ಫುಡ್ ಡೆಲಿವರಿ ಬಾಯ್‌ಗಳೇ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

click me!