ಬೆಂಗಳೂರು( ಜ.  14)  ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿಯ ರೆಬಲ್ ಶಾಸಕರಿಂದ ಅತಿ ಹೆಚ್ಚು ಕೋಪಕ್ಕೆ ಗುರಿಯಾಗಿರುವುದು ನೂತನ ಸಚಿವ ಸಿಪಿ ಯೋಗೇಶ್ವರ.  ಯತ್ನಾಳ್, ರೇಣುಕಾಚಾರ್ಯ, ವಿಶ್ವನಾಥ್ ಯೋಗೇಶ್ವರ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ.

ಈ ಬಗ್ಗೆ ಸೈನಿಕನನ್ನು ಕೇಳಿದರೆ ಅವರು ಜಾಣ್ಮೆ ಪ್ರದರ್ಶನ ಮಾಡಿದ್ದಾರೆ.  ನಾನು ಸದ್ಯಕ್ಕೆ ಮಾಧ್ಯಮಕ್ಕೆ ಮಾತಾಡಲ್ಲ ಎನ್ನುತ್ತಾ ರೇಣುಕಾಚಾರ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಿಪಿ ನಿರಾಕರಿಸಿದರು. ಇನ್ನೂ ಹದಿನೈದು ಇಪ್ಪತ್ತು ವರ್ಷ ಇರ್ತೀನಿ.  ನಿಧಾನ ಕ್ಕೆ ಮಾತಾಡ್ತೀನಿ, ಈಗಲೇ ಏನೂ ಹೇಳಲ್ಲ ಅಂದ ಯೋಗೇಶ್ವರ್ ಎನ್ನುತ್ತ ಮುಂದೆ ಸಾಗಿದರು.

ಸಿಎಂ ವಿರುದ್ಧವೇ ನೋವು ತೋಡಿಕೊಂಡ ರೇಣುಕಾ

ಸೋತವರನ್ನು ಮಂತ್ರಿ ಮಾಡಲಾಗಿದೆ, ಸಿಡಿ ಇಟ್ಟುಕೊಂಡು, ಬ್ಲಾಕ್ ಮೇಲ್ ಮಾಡಿದವರನ್ನು ಮಂತ್ರಿ ಮಾಡಲಾಗಿದೆ ಎಂಬ ಆರೋಪವನ್ನು ನಾಯಕರು ಮಾಡಿದ್ದರು.  ಇದಾವುದೂ ತಮಗೆ ಸಂಬಂಧ ಇಲ್ಲ ಎಂದು ಯೋಗೇಶ್ವರ ಯಾವ ಖಾತೆ ಸಿಗಲಿದೆ ಎಂಬ ಆಸೆಕಣ್ಣಿನಿಂದ ಮುಂದೆ ಸಾಗಿದರು.