ವಿಪಕ್ಷಗಳಿಂದ ಗೂಂಡಾಗಿರಿ: ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

By Kannadaprabha News  |  First Published Nov 26, 2024, 5:58 AM IST

ಇಂತಹ ಬೆರಳೆಣಿಕೆಯಷ್ಟು ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲಿಲ್ಲ ಆದರೆ ದೇಶದ ಜನರು ಅವರ ಕಾರ್ಯಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಶಿಕ್ಷೆ ನೀಡಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ 


ನವದೆಹಲಿ(ನ.26):  '80-90 ಬಾರಿ ಜನರಿಂದ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, 'ಇಂತಹ ಬೆರಳೆಣಿಕೆಯಷ್ಟು ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲಿಲ್ಲ ಆದರೆ ದೇಶದ ಜನರು ಅವರ ಕಾರ್ಯಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಶಿಕ್ಷೆ ನೀಡಿದ್ದಾರೆ' ಎಂದು ಹೇಳಿದರು. 

Tap to resize

Latest Videos

ಯುವಜನತೆಗೆ ಎನ್‌ಸಿಸಿ ಸೇರಲು ಪ್ರಧಾನಿ ಮೋದಿ ಕರೆ ನೀಡಿದ್ಯಾಕೆ? ಇಲ್ಲಿದೆ ಉತ್ತರ

ಈ ಮೂಲಕ ಇತ್ತೀಚಿನ ಮಹಾರಾಷ್ಟ್ರ ಹಾಗೂ ಹರ್ಯಾಣ ಫಲಿತಾಂಶ ಉಲ್ಲೇಖಿಸಿದರು. 'ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯ ಬೇಕು ಆದರೆ, ದುರದೃಷ್ಟವಶಾತ್, ಕೆಲವು ವ್ಯಕ್ತಿ ಗಳು ಕೋಲಾಹಲ ಎಬ್ಬಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿ ಸುತ್ತಿದ್ದಾರೆ' ಎಂದು ಮೋದಿ ಹೇಳಿದರು. 'ಅವರ ತಂತ್ರಗಳು ಅಂತಿಮವಾಗಿ ವಿಫಲವಾ ದರೂ, ಜನರು ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಸಮಯ ಬಂದಾಗ ನ್ಯಾಯವನ್ನು ನೀಡುತ್ತಾರೆ' ಎಂದು ಚಾಟಿ ಬೀಸಿದರು. 

'ಸುಗಮ ಕಲಾಪಕ್ಕೆ ಅವಕಾಶ ನೀಡಿ ಎಂದು ಪ್ರತಿಪಕ್ಷದ ಸಹೋದ್ಯೋಗಿಗಳನ್ನು ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಆದರೆ ಸಾರ್ವಜನಿಕರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ತಮ್ಮ ಸಹೋದ್ಯೋಗಿಗಳ ಮಾತುಗಳನ್ನು ನಿರ್ಲಕ್ಷಿ ಸುತ್ತಾರೆ ಮತ್ತು ಅವರ ಭಾವನೆಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಎಂದರು. 

ಗೌರವಿಸುವುದಿಲ್ಲ' 'ಆದರೆ ಇಂಥ ನಡವಳಿಕೆಗಳು ಹೊಸ ಸಂಸ ದರ ಹಾಗೂ ಉತ್ತಮ ತಾಜಾ ಐಡಿಯಾಗಳನ್ನು ಹೊರಹಾಕುವ ಸಂಸದರ ಹಕ್ಕುಗಳನ್ನು ಕುಗ್ಗಿ ಸುತ್ತದೆ ಎಂಬುದು ಅತ್ಯಂತ ಬೇಸರದ ವಿಷಯ. ಇಂಥವರು ಪ್ರಜಾಪ್ರಭುತ್ವದ ತತ್ವಗಳು ಅಥವಾ ಜನರ ಆಶಯಗಳನ್ನು ಗೌರವಿಸುವುದಿಲ್ಲ.' ಎಂದರು. 

'ಹೊಸ ಸದಸ್ಯರಿಗೆ ಸದನದಲ್ಲಿ ಮಾತನಾಡುವ ಅವಕಾಶವನ್ನು ಆಗಾಗ್ಗೆ ನಿರಾಕರಿಸಲಾಗುತ್ತದೆ. ಇವರು ಮುಂದಿನ ಪೀಳಿಗೆ ಸಂಸದರು. ಇವರ ಹಕ್ಕು ಮೊಟಕು ಸರಿಯಲ್ಲ. ಇದನ್ನು ಜನ ಗಮನಿಸುತ್ತಾರೆ ಹಾಗೂ ಮತ್ತೆ ಪುನರಾಯ್ಕೆಗೆ ನಿರಾಕರಿಸುತ್ತಾರೆ' ಎಂದು ಹೇಳಿದರು.

ಅದಾನಿ ಹಗರಣ ಗದ್ದಲದಿಂದ ಮೊದಲ ದಿನದ ಕಲಾಪ ಬಲಿ

ನವದೆಹಲಿ ಸಂಸತ್ ಚಳಿಗಾಲ ಅಧಿವೇಶನದ ಮೊದಲ ದಿನವೇ ಕೋಲಾಹಲ ಸೃಷ್ಟಿಯಾಗಿದ್ದು, ಅದಾನಿ ಸೌರ ವಿದ್ಯುತ್ ಹಗರಣ ವಿಷಯವು ಕಲಾಪ ಬಲಿ ಪಡೆದಿದೆ. ಅದಾನಿ ಬಗ್ಗೆ ಚರ್ಚೆ ನಡೆಯಲಿ ಎಂಬ ವಿಪಕ್ಷಗಳ ಆಗ್ರಹಕ್ಕೆ ಮನ್ನಣೆ ಸಿಗದ ಕಾರಣ ಕೋಲಾಹಲ ಸೃಷ್ಟಿಯಾಗಿ ದಿನದ ಮಟ್ಟಿಗೆ ಸದನ ಮುಂದೂಡಲಾಯಿತು. 

ಬೆಳಗ್ಗೆ ರಾಜ್ಯ ಸಭೆ ಸಮಾವೇಶಗೊಂಡ ಬಳಿಕ ರೂಲ್ 267ರ ಪ್ರಕಾರ ಎಲ್ಲ ವಿಷಯ ಬದಿಗೊತ್ತಿ, 'ಉದ್ಯಮಿ ಗೌತಮ್ ಅದಾನಿ ಭಾರತದಲ್ಲಿ ತಾವು ಉತ್ಪಾದಿಸಿದ ಸೌರ ವಿದ್ಯುತ್ ಖರೀದಿಸಬೇಕು ಎಂದು ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಅಮೆರಿಕದಲ್ಲಿ ದೋಷಾರೋಪ ದಾಖಲಾಗಿದೆ. ಇಂಥ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ಶ್ರೀರಕ್ಷೆ ನೀಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ಆಗಲಿ ಎಂದು ಆಗ್ರಹಿಸಿದರು. ಆದರೆ ಸಭಾಧ್ಯಕ್ಷರು ಇದಕ್ಕೆ ಒಪ್ಪದ ಕಾರಣ 2 ಅವಧಿಗೆ ಕಲಾಪ ಮುಂದೂಡಿಕೆ ಆಗಿ ದಿನದ ಕೊನೆಗೆ ದಿನದ ಮಟ್ಟಿಗೆ ಸದನದ ಕಲಾಪ ಮುಂದೂಡಿದರು. 

ಲೋಕಸಭೆಯಲ್ಲೂ ಇದೇ ಪುನರಾವರ್ತನೆ ಆಯಿತು. ಇದರ ಜತೆಗೆ ಸಂಭಲ್ ಕೋಮುಗಲಭೆ ಬಗ್ಗೆಯೂ ಚರ್ಚೆಗೆ ಆಗ್ರಹಿಸಿದ ಸದಸ್ಯರು ಘೋಷಣೆ ಕೂಗಿದರು. ಹೀಗಾಗಿ ಕಲಾಪ ಮುಂದೂಡಲಾಯಿತು. ಇನ್ನು ನಾಳೆಯೇ ಕಲಾಪ: ಮಂಗಳವಾರ ಸಂವಿಧಾನ ಸ್ವೀಕೃತಿ ದಿನದ ಕಾರಣ ಸಂಸತ್ತಿನಲ್ಲಿ ಸಂವಿಧಾನ ದಿನಾಚರಣೆ ನಡೆಯಲಿದೆ. ಹೀಗಾಗಿ ನಿಯಮಿತ ಕಲಾಪಗಳು ಇನ್ನು ಬುಧವಾರ ನಡೆಯಲಿವೆ.

ಪ್ರಧಾನಿ ಮೋದಿ 5 ದಿನದ ವಿದೇಶಿ ಪ್ರವಾಸದಲ್ಲಿ 31 ವಿಶ್ವ ನಾಯಕರ ಜೊತೆ ದ್ವಿಪಕ್ಷೀಯ ಸಭೆ

ಸಂವಿಧಾನ ಸ್ವೀಕಾರಕ್ಕೆ ಇಂದು 75ರ ಸಂಭ್ರಮ: ಹಲವು ಕಾರ್ಯಕ್ರಮ

ನವದೆಹಲಿ: 75ನೇ ಸಂವಿಧಾನ ದಿನದ ಪ್ರಯುಕ್ತ ದೆಹಲಿಯ ಸಂವಿಧಾನ ಸದನದ (ಹಳೆಯ ಸಂಸತ್ ಭವನ) ಸೆಂಟ್ರಲ್ ಹಾಲ್‌ನಲ್ಲಿ ಮಂಗಳವಾರ ಸಂವಿಧಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ರಾಷ್ಟಪತಿ ದೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದಾರೆ.

ಸಂವಿಧಾನ ದಿನದ ಸ್ಮರಣಾರ್ಥ ವಿಶೇಷ ನಾಣ್ಯ, ಸ್ಟಾಂಪ್, ಸಂಸ್ಕೃತ ಹಾಗೂ ಮೈಥಿಲಿ ಭಾಷೆಗಳ ಸಂವಿಧಾನವನ್ನು ಬಿಡುಗಡೆಗೊಳಿಸಲಾಗುವುದು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳೊಂದಿಗೆ ಎಲ್ಲಾ ಭಾರತೀಯರು ಸಂವಿಧಾನದ ಪೀಠಿಕೆಯನ್ನು ಓದಲಿದ್ದು, ಇದಕ್ಕಾಗಿ ಎಲ್ಲಾ ಪಂಚಾಯಿತಿಗಳು, ಅಮೃತ ಸರೋವರಗಳಲ್ಲಿ ಸಾಮೂಹಿಕ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತದ ಸಂವಿಧಾನ ಸಭೆಯು 1949ರ ನ.26 ರಂದು ಸಂವಿಧಾನವನ್ನು ಅಂಗೀಕರಿಸಿದ ನೆನಪಾರ್ಥ ಪ್ರತೀ ವರ್ಷ ಈ ದಿನವನ್ನು 'ಸಂವಿದಾನ ದಿನ'ವನ್ನಾಗಿ ಆಚರಿಸಲಾಗುತ್ತದೆ.

click me!