ಅಜ್ಜಿಯನ್ನ ರೇಪ್ ಮಾಡಲು ಹೋಗಿದ್ದ ವಿಕೃತ ಕಾಮುಕ, ಮಾಡಿದ್ದು ಡಬಲ್ ಮರ್ಡರ್!

By Ravi Janekal  |  First Published Nov 25, 2024, 10:31 PM IST

ಅಜ್ಜ ಅಜ್ಜಿ ಡಬರ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ.


ಚಿಕ್ಕಮಗಳೂರು (ನ.25): ಅಜ್ಜ ಅಜ್ಜಿ ಡಬರ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ.

ತೋಟದ ಲೈನ್ ನಲ್ಲಿ ಕೊಲೆ : 

Tap to resize

Latest Videos

ಇದೇ ತಿಂಗಳು 22 ರಂದು ಬೆಳ್ಳಂಬೆಳಗ್ಗೆಡಬಲ್ ಮರ್ಡರ್ ಸುದ್ದಿಯನ್ನು ಕೇಳಿದ ತಕ್ಷಣ ಪೊಲೀಸರಿಗೆ ಶಾಕ್ ಆಗಿತ್ತು. ಏಕೆಂದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಅಭಯಾರಣ್ಯದ ಅಂಚಿನ ಗ್ರಾಮದಿಂದ ಕೊಲೆ ಸುದ್ದಿ ಬಂದಿತ್ತು.ಮುತ್ತೋಡಿ ಅಭಯಾರಣ್ಯ ಕ್ಕೆ ಹೊಂದಿಕೊಂಡಿರೋ ಕೊಳಗಾಮೆ ಗ್ರಾಮದ ತೋಟದ ಲೈನ್ ನಲ್ಲಿ ಕೂಲಿ ಕಾರ್ಮಿಕರಾದ ಬಸಪ್ಪ, ಲಲತಾ ಎನ್ನುವ ವೃದ್ದ ದಂಪತಿಗಳು ಹೆಣವಾಗಿ ಬಿದ್ದಿದ್ದರು.ಈ ವೃದ್ದ ದಂಪತಿಗಳಿಗೆಮಕ್ಕಳು ಇಲ್ಲ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿಯವ್ರು 18 ವರ್ಷದಿಂದ ಇದೇ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ತೋಟದ ಲೈನ್ ನಲ್ಲಿ ಇದ್ದರೂ ಯಾರ ಜೊತೆಯಲ್ಲಿ‌ ಕಿರಿಕ್ ಇಲ್ಲ ಅವ್ರಾಯ್ತು ಅವ್ರದ್ದಷ್ಟೆ ಕೆಲಸ ಅಂತ ಬದುಕು ನಡೆಸುತ್ತಾ ಆರಾಮಯಾಗಿ ಇದ್ದರು. ಮಕ್ಕಳು ಎನ್ನುವ ನೋವು ಇದ್ದರೂ ಕೆಲಸ ಮಾಡುತ್ತಾ ಎಲ್ಲವನ್ನು ಮರೆತು ಜೀವನ ನಡೆಸುತ್ತಿದ್ದರು.ಆದ್ರೆ ಈ ವೃದ್ದ ದಂಪತಿಗಳನ್ನು ಕೊಲೆ ಮಾಡಿರುವುದು ಯಾರು ಎನ್ನುವ ಪ್ರಶ್ನೆ ಪೊಲೀಸರನ್ನು ಕಾಡತೊಡಗಿತ್ತು.

 

ಒಕ್ಕಲಿಗರ ಕಾರ್ಯಕ್ರಮದಲ್ಲಿ ಗ್ಯಾರಂಟಿ ಭಾಷಣ; ನಿರ್ಮಲಾನಂದಶ್ರೀಗಳ ಎದುರೇ ಇಂಧನ ಸಚಿವ ಕೆಜೆ ಜಾರ್ಜ್‌ ಗೆ ಮುಜುಗರ!

ಕಾಮಕ್ರೌರ್ಯಕ್ಕೆ ಬಲಿಯಾದ ದಂಪತಿಗಳು

ಪೊಲೀಸರಿಗೆ ನಿಶಾಂತ್ ಹೆಸರು ಬಂದಾಗ ಅನುಮಾನ ಕಾಡಿದ್ದಂತೂ ನಿಜ..ಈತ ಎರಡು ದಿನ ಇಲ್ಲೆ ಇದ್ದ ಅನ್ನೋ ಮಾಹಿತಿಯೂ ಸಿಕ್ತು.ಅದಲ್ಲದೆ ವೃದ್ದ ದಂಪತಿಗಳಿಗೆ ಹತ್ತಿರದ ಸಂಬಂಧಿ ಎನ್ನುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಯಿತು.

ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಯಾವಾಗ್ಲೂ ಬರ್ತಿದ್ದ ಅಂತಾನೂ ಕೆಲವರು ಪೊಲೀಸರಿಗೆ ಹೇಳಿದ್ರು.ಆರಂಭದಲ್ಲಿ ಪೊಲೀಸರು ಹಣಕಾಸಿಗೆ ಕಿರಿಕ್ ಆಗಿ ಕೊಲೆ ಆಗಿದೆ ಎನ್ನುವ ಅನುಮಾನ ಬಂದಿತ್ತು.ದಂಪತಿಗಳ ಚಿನ್ನ ಅಡಿವಿಟ್ಟು ದುಡ್ಡು ಕೊಟ್ಟಿದ್ರು ಅದನ್ನ ಕೇಳೋಕೆ ಹೋದಾಗ್ಲೇ ಮರ್ಡರ್ ಅಗಿದೆ ಅಂತಾನೂ ಗುಸುಗುಸು ಸುದ್ದಿ ಹರಿಡ್ತು...ಕೊನೆಗೂ ಪೊಲೀಸರು ಅತನನ್ನ ಕರ್ಕೊಂಡು ಬಂದು ವಿಚಾರಣೆ ನಡೆಸಿದ್ದಾರೆ..ಅಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ‌..‌ಆ ಕೊಲೆ ನಡೆದಿದ್ದು ಹಣಕ್ಕಾಗಿ ಅಲ್ಲ‌‌..ಅತ್ಯಾಚಾರಕ್ಕೆ ಯತ್ನಿಸಿದಾಗ ವಿರೋಧ ಪಡಿಸಿದ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಅನ್ನೋದು. 

ಒಕ್ಕಲಿಗ ನಾಯಕತ್ವದಿಂದ ದೇವೇಗೌಡ ನಿರ್ಗಮಿಸಲಿ: ಸಿ.ಪಿ.ಯೋಗೇಶ್ವರ್

ಸೈಕೊ ಟ್ರೀಟ್ ಮೆಂಟ್ ಗೆ ಬೆಚ್ಚಿ ಬಿದ್ದ ಪೊಲೀಸರು  

ಮಾರಕ ಕಾಯಿಲೆಗೆ ತುತ್ತಾಗಿದ್ದ ಎಂದು ಸ್ನೇಹಿತರು ಹೇಳಿದ್ದರಿಂದ ಅದಕ್ಕೆ ಅಜ್ಜಿಯನ್ನು ರೇಪ್ ಮಾಡಲು ಮುಂದಾಗಿದ್ದ ಇವನ ಸೈಕೊ ಟ್ರೀಟ್ ಮೆಂಟ್ ಗೆ ಪೊಲೀಸರಿಗೆ ಬೆಚ್ಚಿ ಬಿದ್ದಿದ್ದಾರೆ.ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿ ಕರೆ ತಂದಿದೆ.ಆರೋಪಿಯು ಬಸಪ್ಪ ಹಾಗೂ ಲಲಿತಮ್ಮ ರವರನ್ನು ಕೊಲೆ ಮಾಡಲು ಬಳಸಿದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.ಕೃತ್ಯ ನಡೆದ ಕೇವಲ 48 ಗಂಟೆ ಒಳಗಾಗಿ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.ಒಟ್ಟಾರೆ ಎರಡು ದಿನ ಇದ್ದ ‌.ಸಂಬಂಧಿ ಬಂದಿದ್ದಾನೆ ಅಂತಾ ಚೆನ್ನಾಗಿ ತಿನ್ಸಿ ಮನೆಯಲ್ಲಿಯೇ ಮಲಗಿಸಿದ್ರೆ ಅದನ್ನ ಕಾಮಕ್ರೌರ್ಯಕ್ಕೆ ಊಟ ಬಡಿಸಿದವರ ಮೇಲೆಯ ಎರಗಿ ವಿರೋಧ ಮಾಡ್ತಿದ್ದಂತೆ ಹತ್ಯೆಗೈದು ಈಗ ಕಂಬಿಹಿಂದೆ ಸೇರಿದ್ದಾನೆ.

click me!