ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ಸಮಯದಲ್ಲಿ ಉತ್ತಮ ಲಾಭ ಗಳಿಸಬಹುದು. 20ನೇ ವಯಸ್ಸಿನಿಂದಲೇ ಹೂಡಿಕೆ ಆರಂಭಿಸಿದರೆ ಲಕ್ಷ ಲಕ್ಷ ಸಂಪಾದಿಸುವ ಸಾಧ್ಯತೆ ಇದೆ. ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮಾಡುವ ಮೊತ್ತ ಮತ್ತು ನಿರೀಕ್ಷಿತ ರಿಟರ್ನ್ ಬಗ್ಗೆ ತಿಳಿಯಿರಿ.
ಉಳಿತಾಯ ಮಾಡಿ, ಮುಂದೊಂದು ದಿನ ಉಳಿತಾಯ ಕೈ ಹಿಡಿಯತ್ತೆ ಅಂತ ಹಿರಿಯರು ಹೇಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ತಾರುಣ್ಯದಲ್ಲಿ ಅಂಥಾ ಕಿವಿಮಾತು ಇಷ್ಟವಾಗುವುದಿಲ್ಲ. ವಯಸ್ಸಾಗುತ್ತಾ, ಜವಾಬ್ದಾರಿಗಳು ಹೆಗಲ ಮೇಲೇರುತ್ತಾ ಹೋದ ಹಾಗೆ ಅಯ್ಯೋ, ಹಿರಿಯರ ಮಾತು ಕೇಳಬೇಕು ಅನ್ನಿಸುತ್ತದೆ. ಹಾಗಾಗಿ ತಡವಾಗುವ ಮೊದಲು ಈಗಲೇ ಎಚ್ಚೆತ್ತುಕೊಳ್ಳುವುದು ಲೇಸು.
ಈಗೀಗ ಖರ್ಚು ಎಷ್ಟು ಹೆಚ್ಚಾಗಿದೆ ಎಂದರೆ ಎಷ್ಟು ಹಣವಿದ್ದರೂ ಸಾಲದು ಅನ್ನುವಂತಾಗಿದೆ. ಅದರಲ್ಲೂ ನಿವೃತ್ತಿ ಸಮಯಕ್ಕೆ ತಕ್ಕಂತೆ ಪ್ಲಾನ್ ಮಾಡುವುದು ಅನಿವಾರ್ಯವಾಗಿದೆ. ಹಾಗಾಗಿ ದುಡಿಮೆ ಶುರುಮಾಡಿರುವವರು ಮ್ಯೂಚುವಲ್ ಫಂಡ್ ಎಸ್‌ಐಪಿಯಲ್ಲಿ ದುಡ್ಡು ಹೂಡುವುದು ಒಂದು ಒಳ್ಳೆಯ ಐಡಿಯಾ.
ಎಸ್‌ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಅಂತ ಅರ್ಥ. ಈ ಯೋಜನೆಯ ಪ್ರಕಾರ ನೀವು ಆಯ್ಕೆ ಮಾಡಿದ ಯಾವುದಾದರೂ ಉತ್ತಮ ಮ್ಯೂಚುವಲ್ ಫಂಡ್ ಮೇಲೆ ಪ್ರತೀ ತಿಂಗಳು ಇಂತಿಷ್ಟು ಅಂತ ಹಣ ಹೂಡುತ್ತಾ ಹೋಗುವುದು. ನೀವು ಹೀಗೆ ಹೂಡಿಕೆ ಮಾಡಲು ಒಂದು ಒಳ್ಳೆಯ ಮ್ಯೂಚುವಲ್ ಫಂಡ್ ಆರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ನಂತರ ದೀರ್ಘಕಾಲ ಅಲ್ಲಿ ಹಣ ಹೂಡುತ್ತಾ ಹೋದರೆ ನಿವೃತ್ತಿ ಟೈಮಲ್ಲಿ ಒಂದೊಳ್ಳೆ ಅಮೌಂಟ್ ಕೈಗೆ ಸಿಗುತ್ತದೆ.
20ನೇ ವಯಸ್ಸಲ್ಲಿ ರೂ.1000 ಎಸ್‌ಐಪಿಯಲ್ಲಿ ಹೂಡಿದರೆ...
20ನೇ ವಯಸ್ಸಲ್ಲಿ ರೂ.1000 ಅನ್ನು ಎಸ್‌ಐಪಿಯಲ್ಲಿ ಹೂಡಿಕೆ ಮಾಡುತ್ತೀರಿ ಅಂತಿಟ್ಟುಕೊಳ್ಳಿ. ನಿಮಗೆ ನಿಮ್ಮ ಹೂಡಿಕೆಗೆ ವಾರ್ಷಿಕವಾಗಿ ಶೇ.12 ರಿಟರ್ನ್ ಸಿಗುತ್ತದೆ ಅಂತ ಅಂದುಕೊಳ್ಳಿ. ನಿಮ್ಮ 60ನೇ ವಯಸ್ಸಲ್ಲಿ ನಿಮಗೆ ಒಟ್ಟಾಗಿ ರೂ.1.19 ಕೋಟಿಯಷ್ಟು ಮೊತ್ತ ನಿಮ್ಮ ಕೈಗೆ ಬರುವ ಸಾಧ್ಯತೆ ಇರುತ್ತದೆ. ಅದೇ ನೀವು ಪ್ರತೀ ವರ್ಷ ಶೇ.10ರಷ್ಟು ಹೂಡಿಕೆಯನ್ನು ಜಾಸ್ತಿ ಮಾಡುತ್ತಾ ಹೋದರೆ ನಿವೃತ್ತಿ ಟೈಮಲ್ಲಿ ದುಪ್ಪಟ್ಟು ಲಾಭ ಅಂದರೆ ರೂ.3.5 ಕೋಟಿಯಷ್ಟು ಗಳಿಸಬಹುದಾಗಿದೆ.
30ನೇ ವಯಸ್ಸಲ್ಲಿ ರೂ.3000 ಎಸ್‌ಐಪಿಯಲ್ಲಿ ಹೂಡಿದರೆ...
ಡಿಗ್ರಿ ಮುಗಿಸಿ ಕೆಲಸ ಹಿಡಿದು ಮನೆ ಜವಾಬ್ದಾರಿಗಳೆಲ್ಲಾ ಮುಗಿಸುವಾಗ ಕೆಲವರಿಗೆ 30 ವರ್ಷ ಆಗಬಹುದು. ತೊಂದರೆ ಇಲ್ಲ. ನಿಮ್ಮ 30ನೇ ವಯಸ್ಸಲ್ಲಿ ರೂ.3000 ಅನ್ನು ಎಸ್‌ಐಪಿಯಲ್ಲಿ ಹೂಡುತ್ತೀರಿ ಅಂತಿಟ್ಟುಕೊಳ್ಳಿ. ಶೇ.12 ಗಳಿಕೆ ಇರುತ್ತದೆ ಅಂತಿಟ್ಟುಕೊಂಡರೆ 60ನೇ ವಯಸ್ಸಲ್ಲಿ ನಿಮ್ಮ ಕೈಗೆ ಒಟ್ಟು ರೂ. 1.05 ಕೋಟಿ ದೊರೆಯಬಹುದು. ಅದೇ ಪ್ರತೀ ವರ್ಷ ಹೂಡಿಕೆಯನ್ನು ಶೇ.10ರಷ್ಟು ಜಾಸ್ತಿ ಮಾಡಿಕೊಂಡರೆ ನಿಮ್ಮ ನಿವೃತ್ತಿ ಸಮಯದಲ್ಲಿ ಒಟ್ಟು ರೂ.2.65 ಕೋಟಿ ಸಿಗಬಹುದು.
40ನೇ ವಯಸ್ಸಲ್ಲಿ ರೂ.4000 ಎಸ್‌ಐಪಿಯಲ್ಲಿ ಹೂಡಿದರೆ...
ಹೂಡಿಕೆಗೆ ತಡ ಎಂಬುದಿಲ್ಲ. ನಿಮ್ಮ 40ನೇ ವಯಸ್ಸಲ್ಲಿ ರೂ.4000 ಎಸ್‌ಐಪಿಗೆ ಹಾಕಿದರೆ, ವಾರ್ಷಿಕ ರಿಟರ್ನ್ ಶೇ.12 ಇದ್ದರೆ ನೀವು 60ನೇ ವಯಸ್ಸಲ್ಲಿ ಒಟ್ಟು ರೂ.40 ಲಕ್ಷ ಹಣ ಪಡೆಯಬಹುದು. ಅದೇ ಪ್ರತೀ ವರ್ಷ ಶೇ.10 ಹೂಡಿಕೆ ಜಾಸ್ತಿ ಮಾಡುತ್ತಾ ಹೋದರೆ ರೂ.80 ಲಕ್ಷ ಕೈಗೆ ಪಡೆಯಬಹುದು.
ಕೈಗಳಿಗಲ್ಲ, ಇದು ಕೈಬೆರಳಿಗೆ ಧರಿಸುವ ವಾಚ್; ಕ್ಯಾಸಿಯೋ ರಿಂಗ್ ವಾಚ್ ಡಿಸೆಂಬರ್‌ನಲ್ಲಿ ರಿಲೀಸ್!
ಇವಿಷ್ಟು ಲೆಕ್ಕಾಚಾರ. ಇದಕ್ಕಾಗಿ ಹುಷಾರಾಗಿ, ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಎಸ್‌ಐಪಿಯಲ್ಲಿ ಹೂಡಿಕೆ ಮಾಡಬೇಕು. ಆಸಕ್ತರು ಈಗಾಗಲೇ ಎಸ್ಐಪಿ ವಿಚಾರದಲ್ಲಿ ಪಳಗಿರುವವರ ಮಾರ್ಗದರ್ಶನದಲ್ಲಿ ಮುಂದುವರಿಯಿರಿ.
ಬೆವರು, ಮೂತ್ರ ಸಂಸ್ಕರಿಸಿದ ನೀರಿನಿಂದ ಮಾಡಿದ ಸೂಪ್ ಕುಡಿದು ದಿನ ಕಳೆಯುತ್ತಿರುವ ಸುನೀತಾ ವಿಲಿಯಮ್ಸ್!