BJP ನಾಯಕನಿಗೆ ಸಚಿವ ಸ್ಥಾನ, ಸೇನೆ ವಾಪಸಿಗೆ ಸಮ್ಮತಿಸಿದ ಚೀನಾ; ನ.12ರ ಟಾಪ್ 10 ಸುದ್ದಿ!

By Suvarna News  |  First Published Nov 12, 2020, 5:20 PM IST

ಪ್ರಧಾನಿ ನರೇಂದ್ರ ಮೋದಿ  JNU ವಿಶ್ವವಿದ್ಯಾನಿಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಗಡಿಯಿಂದ ಸೇನೆ ವಾಪಸಿಗೆ ಚೀನಾ ಸಮ್ಮತಿಸಿದೆ.  ವಿರೋಧದ ನಡುವೆ ಬಿಜೆಪಿಗಾಗಿ ದುಡಿದ ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ ನೀಡಲು ತಯಾರಿ ನಡೆಯುತ್ತಿದೆ. ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ, ನಟಿ ತನುಶ್ರಿ ದಟ್ಟ ಬ್ಯೂಟಿ ಸೀಕ್ರೆಟ್ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಶಿವಮೊಗ್ಗ; ಮಾವನೊಂದಿಗೆ ಮಂಚ ಏರಿದ್ದಳು..  ಕಾಮದಾಟ ಕಣ್ಣಾರೆ ಕಂಡ ಗಂಡ!...

Latest Videos

undefined

ಲವ್ ಮ್ಯಾರೇಜ್ ಮಾಡಿಕೊಂಡು ಮನೆ ಸೇರಿದ್ದ ಆಕೆಗೆ ಮಾವನ ಮೇಲೆ ಸೆಳೆತ.  ಗಂಡನ ಬಿಟ್ಟು ಮಾನನೊಂದಿಗೆ ಕಾಮದಾಟದಲ್ಲಿ ತೊಡಗಿದ್ದಳು . ಲವ್ ಸ್ಟೋರಿ ಕ್ರೈಂ ಸ್ಟೋರಿಯಾಗಿದೆ. ಮಾವನ ಕಾಮದಾಟಕ್ಕೆ ಸೊಸೆ ಪಲ್ಲಂಗ ಏರಿದ್ದಾಳೆ.  ಪತ್ನಿಯ ಸರಿ ಪಡಿಸಲಾಗದೇ , ತಂದೆಯ ಕಾಮಕ್ಕೆ ಬ್ರೇಕ್ ಹಾಕಲಾಗದೇ ಸೊತಿದ್ದ ಮಗ ಕೊನೆಗೆ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ.

3 ವರ್ಷದ ಕಾಯುವಿಕೆ ಅಂತ್ಯ: JNUನಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ!...

ಪ್ರಧಾನಿ ನರೇಂದ್ರ ಮೋದಿ ಇಂದು ಎಡಪಂಥೀಯರ ಕೋಟೆ ಎಂದೇ ಕರೆಸಿಕೊಳ್ಳುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವರ್ಚುವಲೀ ಭಾಗಿಯಾಗಲಿದ್ದಾರೆ. ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜೆಎನ್‌ಯು ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. 

ಗಡಿಯಿಂದ ಸೇನೆ ವಾಪಸಿಗೆ ಚೀನಾ ಸಮ್ಮತಿ, 3 ಹಂತದಲ್ಲಿ ಹಿಂತೆಗೆತಕ್ಕೆ ಉಭಯ ದೇಶಗಳ ನಿರ್ಧಾರ!...

ಕಳೆದ ಮೇ ತಿಂಗಳಿನಿಂದ ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನ ಸ್ಥಿತಿ ಕೊನೆಗೂ ಶಮನಗೊಳ್ಳುವ ಶುಭ ಸುದ್ದಿ ಹೊರಬಿದ್ದಿದೆ. ಒಟ್ಟು 3 ಹಂತದಲ್ಲಿ ವಿವಾದಿತ ಪ್ರದೇಶಗಳಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ. ಮೇಲಾಗಿ ಚೀನಾ, ಕಳೆದ ಮೇ ತಿಂಗಳವರೆಗೂ ತಾನು ಪಹರೆ ಕಾಯುತ್ತಿದ್ದ ಫಿಂಗರ್‌ 8 ಬೆಟ್ಟಗಳ ಸಾಲಿಗೆ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

ಬಿಜೆಪಿಗಾಗಿ ದುಡಿದ ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ : ಸಿಎಂ ಆಪ್ತರಿಂದಲೇ ವಿರೋಧ...

ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಹಿಂದೆಯೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಇದೀಗ ಮತ್ತೊಮ್ಮೆ ಆ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಆಸೀಸ್‌ಗೆ ಹೊರಟ ತಂಡಕ್ಕೆ ಸ್ಪೆಶಲ್ ಪಿಪಿಇ ಕಿಟ್.. ಯಾರೆಲ್ಲ  ಮಿಸ್ಸಿಂಗ್!...

ಐಪಿಎಲ್ ಹಬ್ಬ ಮುಗಿದಿದ್ದು  ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ದುಬೈನಿಂದ ನೇರವಾಗಿ ವಿಮಾನ ಏರಿದ್ದಾರೆ.  ಟೀಮ್ ಇಂಡಿಯಾಕ್ಕೆ ಅಭಿಮಾನಿಗಳು  ಹಾರೈಸಿದ್ದಾರೆ.

ಅಬ್ಬಬ್ಬಾ! 15 ಕೆಜಿ ತೂಕ ಇಳಿಸಿಕೊಂಡ ನಟಿ ತನುಶ್ರೀ ದತ್ತ; ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಾ!...

'ನಾನು ದಪ್ಪ ಇದ್ದಾಗ ಜನರೆಲ್ಲರೂ ನನ್ನನ್ನು ಹೊಗಳುವಂತೆ ಮಾಡಿ, ಬಾಡಿ ಶೇಮಿಂಗ್ ಮಾಡುತ್ತಿದ್ದುರು. ಇದೇ ನನಗೆ ಚಾಲೆಂಜ್ ಆಯಿತು.' ನಟಿ ತನುಶ್ರೀ ದತ್ತಾ 15 ಕೆಜಿ ತೂಕ ಇಳಿಸಿಕೊಳ್ಳಲು ಕಾರಣವೇನು , ಅದು ಹೇಗೆ ಸಾಧ್ಯವಾಯ್ತು.

ಜಾಲತಾಣ, ಒಟಿಟಿಗಳಿಗೆ ಕೇಂದ್ರದ ಮೂಗುದಾರ!...

ಇದುವರೆಗೆ ಸರ್ಕಾರದ ಯಾವುದೇ ನಿಯಂತ್ರಣಕ್ಕೆ ಒಳಪಡದ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ+ಹಾಟ್‌ಸ್ಟಾರ್‌ನಂತಹ ಒಟಿಟಿ ಸೇವೆಗಳು, ಆನ್‌ಲೈನ್‌ ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಇವುಗಳು ಇನ್ನು ಮುಂದೆ ಕೇಂದ್ರ ಸರ್ಕಾರದ ನೀತಿ- ನಿಯಂತ್ರಣಗಳಿಗೆ ಒಳಪಡಲಿವೆ.

ಕರ್ನಾಟಕ ಪೊಲೀಸ್ ಇಲಾಖೆಗೆ ನೂತನ ಹೀರೋ ಗ್ಲಾಮರ್ ಬೈಕ್...

ಕರ್ನಾಟಕ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಪೊಲೀಸ್ ಇಲಾಖೆಗೆ 751 ಹೀರೋ ಗ್ಲಾಮರ್ ಬೈಕ್ ನೀಡಲಾಗಿದೆ.  ಸಿಎಂ ಬಿಎಸ್ ಯಡಿಯೂರಪ್ಪ ಬೈಕ್ ಹಸ್ತಾಂತರಿಸಿದ್ದಾರೆ.

ಕೊರೋನಾ ದೂರ? ರಷ್ಯಾದಿಂದ ಬಂತು ಬಹುದೊಡ್ಡ ಗುಡ್‌ ನ್ಯೂಸ್!...

 ಕೊರೋನಾ ವೈರಸ್‌ಗೆ ರಷ್ಯಾ ಸಿದ್ಧಪಡಿಸಿರುವ ಸ್ಪುಟ್ನಿಕ್‌-5 ಲಸಿಕೆ ಶೇ.92ರಷ್ಟುಪರಿಣಾಮಕಾರಿ ಆಗಿದೆ ಎಂದು ರಷ್ಯಾದ ಗಮಾಲೇಯಾ ರಿಸಚ್‌ರ್‍ ಇನ್ಸ್‌ಸ್ಟಿಟ್ಯೂಟ್‌ ತಿಳಿಸಿದೆ.

ಚಿನ್ನ ಖರೀದಿ ಪ್ಲಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ನ. 12ರ ಗೋಲ್ಡ್ ರೇಟ್!...

ಕೊರೋನಾ ನಡುವೆ ಚಿನ್ನದ ದರ ಏರಿಕೆ ಗ್ರಾಹಕರನ್ನ ಕಂಗಾಲು ಮಾಡಿತ್ತು. ನಿಗಧಿಯಾಗಿದ್ದ ಶುಭ ಕಾರ್ಯದ ಸಂದರ್ಭದಲ್ಲಿ ಬೆಲೆ ಏರಿಕೆ ದೊಡ್ಡ ಪೆಟ್ಟು ನೀಡಿತ್ತು. ಅಚ್ಚರಿ ಎಂಬಂತೆ ಚಿನ್ನದ ಬೇಡಿಕೆ ಭಾರೀ ಕಡಿಮೆ ಇದ್ದರೂ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

click me!