ಬೆಂಗಳೂರು(ನ.12): ಕರ್ನಾಟಕ ಪೊಲೀಸ್ ಇಲಾಖೆಗೆ ಹೀರೋ ಗ್ಲಾಮರ್ ಬೈಕ್ ಸೇರಿಕೊಂಡಿದೆ. ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆ ಬಳಿಕ ಇದೀಗ ಹೀರೋ ಗ್ಲಾಮರ್ ಬೈಕ್ ಪೊಲೀಸ್ ಇಲಾಖೆ ತಲುಪಿದೆ. 751 ಹೀರೋ ಗ್ಲಾಮರ್ ಬೈಕ್‌ಗಳನ್ನು ಕರ್ನಾಟಕ ಪೊಲೀಸ್ ಇಲಾಖೆ ಖರೀದಿಸಿದೆ. ನೂತನ ಬೈಕ್‌ಗಳ ರ್ಯಾಲಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.

ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್

ಹೀರೋ ಗ್ಲಾಮರ್ ಇತ್ತೀಚೆಗೆ BS-VI ವರ್ಶನ್ ಬೈಕ್ ಬಿಡುಗಡೆ ಮಾಡಿದೆ. ಇದು 125ಸಿಸಿ ಎಂಜಿನ್ ಹೊಂದಿದೆ. i3S ಟೆಕ್ನಾಲಜಿ ಹಾಗೂ Xಸೆನ್ಸ್ ಪ್ರೊಗ್ರಾಂ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಮೈಲೇಜ್ ಕೂಡ ಉತ್ತಮವಾಗಿದೆ. 10.73 BHP ಪವರ್( @ 7500 RPM)ಹಾಗೂ  10.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

240mm ಡೀಸ್ಕ್ ಬ್ರೇಕ್ ಹಾಗೂ 180mm ಗ್ರೌಂಡ್ ಕ್ಲೀಯೆರನ್ಸ್ ಹೊಂದಿದೆ. ಇದನ್ನು ರೈಡರ್ ನ್ಯಾವಿಗೇಶನ್ ಫೀಚರ್ಸ್ ಕೂಡ ಹೊಂದಿದೆ. ಕರ್ನಾಟಕ ಪೊಲೀಸಿ ಇಲಾಖೆ ಬಳಿಕ ಭಾರತೀಯ ಮೂಲದ ಬಜಾಜ್ ಪಲ್ಸರ್ ಹಾಗೂ ಟಿವಿಎಸ್ ಅಪಾಚೆ ಬೈಕ್ ಈಗಾಗಲೇ ಖರೀದಿಸಿದೆ. ಇದೀಗ ಮತ್ತೊಂದು ಭಾರತದ ಬ್ರ್ಯಾಂಡ್ ಹೀರೋ ಪೊಲೀಸ್ ಇಲಾಖೆಗೆ ಸೇರಿಕೊಂಡಿದೆ.