ಈ ವರ್ಷ ನಡೆಯುತ್ತೆ ಐಪಿಎಲ್, ಎಲ್ಲಿದ್ದಾರೆ ನಟಿ ಪಾರುಲ್? ಜೂ.5ರ ಟಾಪ್ 10 ಸುದ್ದಿ!

By Suvarna NewsFirst Published Jun 5, 2020, 4:46 PM IST
Highlights

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕೊರೋನಾ ವೈರಸ್ ಕಾರಣ ನಿರಾಸೆಗೊಂಡಿದ್ದ ಐಪಿಎಲ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. ಕೊರೋನಾ ವೈರಸ್ ಕಣ್ಣಿನಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದೆ ಅನ್ನೋ ಆಘಾತಕಾರಿ ವರದಿ ಹೊರಬಿದ್ದಿದೆ. ಯೋಗಿ ಆದಿತ್ಯನಾಥ್‌ಗೆ ಡೈನಾಮಿಕ್ ಪಟ್ಟ ನೀಡಿದ ಮೋದಿ, ಪ್ಯಾರ್ಗೆ ಆಗ್ಬುಟೈತೆ ನಟಿ ಪಾರುಲ್ ಯಾದವ್ ಸೇರಿದಂತೆ ಜೂನ್ 5ರ ಟಾಪ್ 10 ಸುದ್ದಿ ಇಲ್ಲಿವೆ.
 

ಜನ್ಮದಿನದ ವೇಳೆ ಯೋಗಿಗೆ ಡೈನಾಮಿಕ್ ಪಟ್ಟ ನೀಡಿದ ಮೋದಿ...

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಯೋಗಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಕರ್ನಾಟಕ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಘೋಷಣೆ...

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದ್ದು, ಇದಕ್ಕೆ ಎಐಸಿಸಿ,  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ. 

ಹುಷಾರ್.. ಕಣ್ಣೀರಿನಿಂದಲೂ ಕೊರೋನಾ ವೈರಸ್‌ ಬರುತ್ತೆ..!...

ಜಾಗತಿಕ ಪಿಡುಗಾದ ಕೊರೋನಾ ವೈರಸ್ ಕಣ್ಣೀರಿನಿಂದಲೂ ಮತ್ತೊಬ್ಬರಿಗೆ ಹರಡಬಹುದು ಎನ್ನುವ ಅಘಾತಕಾರಿ ಮಾಹಿತಿಯನ್ನು ಅಮೆರಿಕ ನೇತ್ರ ತಜ್ಞರು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಐಪಿಎಲ್ ನಡೆಯುತ್ತಾ? ಸಿಹಿ ಸುದ್ದಿ ನೀಡಿದ ಬಿಸಿಸಿಐ

ಐಪಿಎಲ್ ಯಾವಗ ಎಂದು ಚಾತಕ ಪಕ್ಷಿಯಂತೆ ಕಾದುಕುಳಿತ ಅಭಿಮಾನಿಗಳಿಗೆ ಬಿಸಿಸಿಐನಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಏನದು ಸಿಹಿ ಸುದ್ದಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

'ವಾಸ್ತು ಪ್ರಕಾರ ಪಾರುಲ್ ಯಾದವ್‌ಗೆ 'ಪ್ಯಾರ್ಗೆ ಆಗ್ಬುಟೈತೆ'; ಯಾರು ಆ ಹುಡುಗ?...

ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್‌ ಮುಂಬೈನವರಾದರೂ ಕನ್ನಡ ಭಾಷೆಯನ್ನು ಕನ್ನಡಿಗರು ಮೆಚ್ಚುವಂತೆ ಮಾತನಾಡುತ್ತಾರೆ. ಇತ್ತೀಚಿಗೆ ಟಿಕ್‌ಟಾಕ್‌ನಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ಪಾರುಲ್ ಎಷ್ಟು ಬ್ಯೂಟಿಫುಲ್‌ ನೀವೆ ನೋಡಿ....

'ಸಿದ್ದರಾಮಯ್ಯ ಮೋಸ ಮಾಡಿದ್ದಕ್ಕೆ ನಾವು ಕಾಂಗ್ರೆಸ್‌ ಬಿಟ್ಟಿದ್ದು'...

ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಇರುವಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹ ಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ ಆರೋಪಿಸಲಾಗುತ್ತಿದೆ. ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

39 ಲಕ್ಷ ಕೋಟಿ ರುಪಾಯಿ ಸಾಲಕ್ಕೆ 6 ತಿಂಗಳ EMI ವಿನಾಯಿತಿ...

6 ತಿಂಗಳ ಐಎಂಐ ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ಮನ್ನಾ ಮಾಡಿದಲ್ಲಿ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟವಾಗುತ್ತದೆ. ಇದು ದೇಶದ ಜಿಡಿಪಿಯ ಶೇ.1ರಷ್ಟಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರಿಗರಿಗೆ ಟಾಟಾ ಮೋಟಾರ್ಸ್ ಭರ್ಜರಿ ಆಫರ್, ಕಾರು ಖರೀದಿ ಈಗ ಸುಲಭ!...

5 ಸಾವಿರ ರೂಗೆ ಟಾಟಾ ಟಿಯಾಗೋ ಖರೀದಿ, ಸೆಡಾನ್, ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿ ಕಾರಗಳ ಮೇಲೆ 100 ರಷ್ಟು ಸಾಲ, 8 ವರ್ಷಗಳ ದಿರ್ಘಾವದಿ ಸಾಲ, ಕೊರೋನಾ ವಾರಿಯಾರ್ಸ್‌ಗೆ ಡಿಸ್ಕೌಂಡ್ ಸೇರಿದಂತೆ ಬೆಂಗಳೂರಿನಲ್ಲಿ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಹಲವು ಆಫರ್ ನೀಡಿದೆ.

ಲಾಕ್‌ಡೌನ್‌ ವೇಳೆ ಕೊರೋನಾ ಸೆಕ್ಸ್‌ಗೆ ಭಾರಿ ಬೇಡಿಕೆ!...

ಲಾಕ್‌ಡೌನ್ ಸಂದರ್ಭದಲ್ಲಿ ದೊಡ್ಡ ಹೊಡೆತ ಅನುಭವಿಸಿದ ಎಲ್ಲ ಇಂಡಸ್ಟ್ರಿಗಳ ಹಾಗೇ ಪೋರ್ನ್‌ ಇಂಡಸ್ಟ್ರಿಗೂ ಆಗಿದೆ. ಈ ನಡುವೆಯೂ ಕೊರೋನಾ ವೈರಸ್‌ ಅನ್ನುವ ಥೀಮಿನಲ್ಲಿ ವಿಡಿಯೋಗಳು, ಆಡಿಯೋಗಳು ಸಾಕಷ್ಟು ಸೇಲಾಗಿವೆ.

click me!