ಲಕ್ನೋ(ಜೂ. 05)  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಯೋಗಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ನಿಮ್ಮ ಆಡಳಿತದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯ ಹೊಸ ಪಥದಲ್ಲಿ ಸಾಗುತ್ತಿದೆ ಎಂದು ಮೋದಿ ಕೊಂಡಾಡಿದ್ದಾರೆ. ಪ್ರಜೆಗಳು ನಮ್ಮ ಆಡಳಿತದಲ್ಲಿ ಶಾಂತಿ ನೆಮ್ಮದಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರನಾಯಕ ಪಟ್ಟ; ಮೋದಿಗೆ ಶೇ. 66 , ರಾಹುಲ್ ಗೆ ಎಷ್ಟು?

ಟ್ವೀಟ್ ಮೂಲಕ ಶುಭಾಶಯ ಹೇಳಿರುವ ಮೋದಿ ಯೋಗಿ ಅವರನ್ನು ಡೈನಾಮಿಕ್ ನಾಯಕ ಎಂದು ಬಣ್ಣಿಸಿದ್ದಾರೆ. ನಿಮಗೆ ಇ-ನ್ನು ಹೆಚ್ಚಿನ ಆರೋಗ್ಯ ಸುದೀರ್ಘ ಜೀವನ ಸಿಗಲಿ ಎಂದು ಪ್ರಧಾನಿ ಹಾರೈಸಿದ್ದಾರೆ.ಯೋಗಿ ಆದಿತ್ಯನಾಥ್ ಜೂನ್ 5, 1972  ರಂದು ಜನಿಸಿದರು.  ಯೋಗಿ ಅವರಗೆ ಶುಕ್ರವಾರ 48ನೇ ಜನ್ಮದಿನ ಸಂಭ್ರಮ.

ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಸಹ ಆರಂಭವಾಗಿದೆ. ಯೋಗಿ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ.  ಯೋಗಿ ಅವರಿಗೆ ಪ್ರಧಾನಿ ಮಾತ್ರವಲ್ಲದೇ ಅನೇಕ ನಾಯಕರು ಶುಭ ಹಾರೈಸಿದ್ದಾರೆ.