ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಮ್ಗೂ ಖುಷಿ ಪಡುವ ವಿಚಾರವಲ್ಲ; ಕೃಷಿ ಸಚಿವ ಚಲುವರಾಯಸ್ವಾಮಿ!

By Sathish Kumar KH  |  First Published May 6, 2024, 3:59 PM IST

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಂಧನ ನಮ್ಗೂ ಖುಷಿ ಪಡುವ ವಿಚಾರವಲ್ಲ. ಇದರಿಂದ ನಮಗೂ ಬೇಸರವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.


ಬೆಂಗಳೂರು (ಮೇ 06): ರಾಜ್ಯವೇ ತಲೆ ತಗ್ಗಿಸುವಂತಹ ಘಟನೆಗೆ ಸಾಕ್ಷಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಆಗಿರುವ ವಿಚಾರ ಹಾಗೂ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಬಂಧನವಾಗಿರುವ ವಿಚಾರ ಮಗಗೂ ಖುಷಿ ಪಡುವ ವಿಚಾರವಲ್ಲ. ಇದರಿಂದಾಗಿ ಬನಮಗೂ ಬೇಸರವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾಜಿ ಸಚಿವ ರೇವಣ್ಣ ಬಂಧನದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣ ಕುರಿತಂತೆ ರಾಜ್ಯ ಮಹಿಳಾ ಆಯೋಗ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಲು ವಿಶೆಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಎಸ್‌ಐಟಿ ರಚನೆಗೆ ಜೆಡಿಎಸ್ ಮೈತ್ರಿ ಪಕ್ಷವಾದ ಬಿಜೆಪಿ ನಾಯಕರೇ ಸ್ವತಃ ಸ್ವಾಗತ ಮಾಡಿದ್ದಾರೆ. ಇದನ್ನ ನಾವು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆ ಕೇಸ್ ಅನ್ನ ಮುಂದುವರೆಸಲಾಗುತ್ತಿದೆ ಎಂದು ಹೇಳಿದರು.

Tap to resize

Latest Videos

ರಾಜ್ಯದಲ್ಲಿ ಬಿಸಿಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!

ನಿನ್ನೆ ಮಾಜಿ ಸಚಿವ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಕಸ್ಟಡಿಗೆ ತಗೆದುಕೊಂಡಿದ್ದಾರೆ. ಪ್ರಜ್ವಲ್ ಇವತ್ತು ಅಥಾವ ನಾಳೆ ಬರುವ ಸಾಧ್ಯತೆ ಇದೆ ಎಂದು ಅವರ ಮುಖಂಡರು ಹೇಳಿದ್ದಾರೆ. ಈ ಪ್ರಕರಣದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಬಗ್ಗೆ ಎಸ್‌ಐಟಿ ಗಮನ ಹರಿಸುತ್ತದೆ. ಹೀಗಾಗಿ, ಕೇಸಿನ ಬಗ್ಗೆ ನಾನು ಹೆಚ್ಚು ಪ್ರಸ್ತಾಪ ಮಾಡೋದಿಲ್ಲ ಎಂದು ತಿಳಿಸಿದರು.

ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸಲ್ಲಿ ರೇವಣ್ಣ ಬಂಧನವಾದರೂ ಇದು ರಾಜಕೀಯ ಷಡ್ಯಂತ್ರ ಎಂದು ರೇವಣ್ಣ ಹೇಳಿಕೆ ನೀಡಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಇದಕ್ಕಿಂತ ಬಹಶಃ ಒಪನ್ ಆಗಿ ವಿಚಾರಣೆ ಮಾಡುತ್ತಿರುವ ಪ್ರಕರಣ ಬೇರೊಂದಿಲ್ಲ. ಇದರಲ್ಲಿ ರಾಜಕಾರಣ ಬೆರಸದೇ ಕಾನೂನು ಬದ್ದವನಾಗಿ ಮಾಡುವಂತದ್ದು ಎಲ್ಲರಿಗೂ ಕಂಡುಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲೀ ಅಥವಾ ನಾವಾಗಲೀ ರಾಜಕೀಯ ಬೆರಸುವುದಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಈ ಅಶ್ಲೀಲ ಪ್ರಕರಣವು ಕೋರ್ಟ್ ಮತ್ತು ತನಿಖೆ ಸಂಸ್ಥೆ ಇವರೆಡರ ಮಧ್ಯೆ ನಡೆಯುತ್ತಿದೆ ಎಂದರು.

ಮತ್ತೆ ಕೈ ಕೊಟ್ಟ ಪೂರ್ವ ಮುಂಗಾರು: ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಲ‌ ಕುಸಿತ

ಸಂತ್ರಸ್ತ ಮಹಿಳೆಗೆ ಕೆ.ಆರ್. ನಗರ ಶಾಸಕರೇ ದೂರು ನೀಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಆ ಮಹಿಳೆ ದೂರು ಕೊಡುವುದಕ್ಕೆ ಬಂದಿರೋದು ಸತ್ಯ ಅಲ್ವೇನ್ರಿ. ಇದರಲ್ಲಿ ರಾಜಕೀಯ ಖಂಡಿತ ಇಲ್ಲ, ಅದ್ರ ಅವಶ್ಯಕತೆಯೂ ನಮ್ಗೆ ಇಲ್ಲ. ಅವರನ್ನ ಬಂಧಿಸಿದಾಗ ಮಾಜಿ ಪ್ರಧಾನಿಗಳ ಮಗ ಹಾಗಾಗಿ ಅವರಿಗೆ ಸಹಜವಾಗಿ ನೋವಾಗಿರುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನು ಎದುರಿಸಲೇಬೇಕು. ನಾವಲ್ಲ ಅವರ ಮನರಯವರೇ ಮುಖ್ಯಮಂತ್ರಿಯಾದರೂ ಇದನ್ನ ಎದುರಿಸಲೇಬೇಕು. ಇದರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡೋದಕ್ಕಿಂತ ಕಾನೂನು ಗಮನಿಸೋಣ. ನಮ್ಗೂ ಇದು ಖುಷಿ ಪಡುವ ವಿಚಾರವಲ್ಲ, ನಮ್ಗೂ ಬೇಸರವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

click me!