ಉದ್ಧವ್‌ ಠಾಕ್ರೆಗೆ 'ಹೊರಗಡೆ ಕಾಯ್ತಾ ಇರು..' ಎಂದ ಶರದ್‌ ಪವಾರ್,‌ ವೈರಲ್‌ ವಿಡಿಯೋ ಹಂಚಿಕೊಂಡ ಬಿಜೆಪಿ!

By Santosh Naik  |  First Published May 6, 2024, 4:07 PM IST

ಶಿವಸೇನೆಯ ಶ್ರೇಷ್ಠ ನಾಯಕ ಬಾಳಾ ಠಾಕ್ರೆ ಅವರ ಪುತ್ರ ಉದ್ಧವ್‌ ಠಾಕ್ರೆಗೆ ಅವಮಾನ ಎನ್ನುವಂತೆ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.


ಮುಂಬೈ (ಮೇ.6): ಸೋಶಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ ಹಾಗೂ ಫೇಸ್‌ಬುಕ್‌ನಲ್ಲಿ ಮೇ 3 ರಿಂದ ಒಂದು ವಿಡಿಯೋ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದೆ. ಇದರಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎಸ್‌ಪಿ) ಚೀಫ್‌ ಶರದ್‌ ಪವಾರ್‌, ಶಿವಸೇನಾ (ಯುಬಿಟಿ) ಚೀಫ್‌ ಉದ್ಧವ್‌ ಠಾಕ್ರೆ ಅವರಿಗೆ ಹೊರಗಡೆ ಕಾಯ್ತಾ ಇರಿ ಎಂದು ಹೇಳಿದ್ದಾರೆ. ಶರದ್‌ ಪವಾರ್‌ ಅವರ ಮನವಿಯನ್ನು ಪುರಸ್ಕರಿಸಿರುವ ಉದ್ದವ್‌ ಠಾಕ್ರೆ, ಸರಿ ಹಾಗಾದರೆ, ನಾನು ಹೊರಗಡೆಯೇ ಇದ್ದೇನೆ ಎಂದು ಕೈಜೋಡಿಸಿ ಹೇಳಿರುವುವುದು ವಿಡಿಯೋದಲ್ಲಿ ದಾಖಲಾಗಿದೆ. ಮೇಲ್ನೋಟಕ್ಕೆ ಇವರಿಬ್ಬರ ಮಾತುಕತೆ ಸಾಮಾನ್ಯವಾಗಿದ್ದರೂ, ಬಿಜೆಪಿ ಈ ಕ್ಲಿಪ್‌ಅನ್ನು ಹಂಚಿಕೊಳ್ಳುವ ಮೂಲಕ ಶರದ್‌ ಪವಾರ್‌ ಅಂವರ ಇಂಗಿತ ಇಲ್ಲಿ ಹಗೆತನ ಮಾತ್ರ ಎಂದು ಅರ್ಥ ನೀಡಿದೆ. ಇದನ್ನು ದೇಶದ ಹಲವಾರು ಬಲಪಂಥೀಯ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ಗಳು ಕೂಡ ಪೋಸ್ಟ್‌ ಮಾಡಿದ್ದಲ್ಲದೆ, ವ್ಯಾಪಕವಾಗಿ ಇದನ್ನು ಹಂಚಿಕೊಂಡಿದೆ. ಇದು ಉದ್ಧವ್‌ ಠಾಕ್ರೆ ಅವರಿಗೆ ಮಾಡಿರುವ ಅವಮಾನ ಎಂದು ಹೇಳಿದೆ.

ತಾವು ಬೇರೆ ಕಾರ್ಯದಲ್ಲಿ ನಿರತರಾಗಿರುವ ಕಾರಣ ಶರದ್‌ ಪವಾರ್‌ ಅವರು ಉದ್ಧವ್‌ ಠಾಕ್ರೆ ಅವರಿಗೆ ನಯವಾಗಿಯೇ ಹೊರಹೋಗುವಂತೆ ತಿಳಿಸಿದ್ದಾರೆ' ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಜಿತೇನ್ ಗಜಾರಿಯಾ ಟ್ವೀಟ್‌ ಮಾಡಿದ್ದಾರೆ. "ಉದ್ಧವ್ ಠಾಕ್ರೆ ಅವರನ್ನು ಶರದ್ ಪವಾರ್ ಅವರು ಹೀಗೆ ನಡೆಸಿಕೊಳ್ಳುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೆಂಥಾ ಕುಸಿತ...ಶರದ್‌ ಪವಾರ್‌ ಅತ್ಯಂತ ನಯವಾಗಿಯೇ ಉದ್ಧವ್‌ ಠಾಕ್ರೆಗೆ ಹೊರಗೆ ಕಾಯ್ತಾ ಇರು....! ಎಂದು ಹೇಳಿದ್ದಾರೆ ಎಂದು ಇನ್ನೊಂದು ಹ್ಯಾಂಡಲ್‌ನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದೆ.

ಹಾಗಾದರೆ ವಿಡಿಯೋದಲ್ಲಿ ಇರೋದೇನು: ಬಲಪಂಥೀಯ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು ಇದು ಉದ್ಧವ್‌ ಠಾಕ್ರೆಗೆ ಮಾಡಿರುವ ಅವಮಾನ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಆದರೆ, ಈ ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿದರೆ, ಶರದ್‌ ಪವಾರ್, ಉದ್ಧವ್‌ ಠಾಕ್ರೆಗೆ ಯಾವುದೋ ಒಂದು ಸೂಕ್ತ ಸ್ಥಳದಲ್ಲಿ ಕೆಲ ಕಾಲ ಇರುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಉದ್ಧವ್‌ ಠಾಕ್ರೆ, ನಾನು ಅಲ್ಲಿಯೇ ಇರುತ್ತೇನೆ ಎಂದು ನಯವಾಗಿಯೇ ಕೈಜೋಡಿಸಿ ಹೇಳಿದ್ದಾರೆ.

ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಅತ್ತಿಗೆ ನಾದಿನಿಯರ ಸಮರ: ಅಜಿತ್ ಪತ್ನಿ, ಶರದ್ ಪವಾರ್ ಪುತ್ರಿ ಕಣದಲ್ಲಿ

Tap to resize

Latest Videos

ಲೋಕಸಭೆ ಚುನಾವಣೆ 2024 ನಡೆಯುತ್ತಿರುವಾಗ ಈ ವೀಡಿಯೊ ವೈರಲ್ ಆಗಿರುವುದು ಆಘಾತಕಾರಿ ಸಂಗತಿಯೇನಲ್ಲ. ಮುಂಬೈನಲ್ಲಿ ಮೇ 20 ರಂದು ಐದನೇ ಹಂತದ ಮತದಾನ ನಡೆಯಲಿದ್ದು, ಬಿಸಿಲಿನ ತಾಪ ಮಾತ್ರವಲ್ಲದೆ, ಇಡೀ ಮಹಾರಾಷ್ಟ್ರದಲ್ಲಿ ರಾಜಕೀಯ ತಾಪಮಾನ ಕೂಡ ಏರಿದೆ. ಮಹಾ ವಿಕಾಸ್ ಅಘಾಡಿಯು ಶರದ್ ಪವಾರ್ ಬಣ ಎನ್‌ಸಿಪಿ ಮತ್ತು ಉದ್ಧವ್ ನೇತೃತ್ವದ ಯುಬಿಟಿ ಸೇನೆಯನ್ನು ಕಾಂಗ್ರೆಸ್‌ ಹೊಂದಿದ್ದರೆ,  ಈ ಚುನಾವಣೆಯಲ್ಲಿ ಇಡೀ ಅಘಾಡಿಯನ್ನು ಸೋಲಿಸಲು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹೊಂದಿರುವ ಮಹಾಯುತಿ ಸಜ್ಜಾಗಿದೆ.

ಖರ್ಗೆ ಕೋಟೆ ಕೆಡವಿದಂತೆ, ಶರದ್ ಕೋಟೆ ಛಿದ್ರಗೊಳಿಸಲು ಬಿಜೆಪಿ ರಣತಂತ್ರ; ಬಾರಾಮತಿಯಲ್ಲಿ ಪವಾರ್ ವರ್ಸಸ್ ಪವಾರ್ ಫೈಟ್!

What a fall....!!

Sharad Pawar politely told Uddhav Thackeray to Wait outside....!! pic.twitter.com/hBdGJaihqq

— Sandeep Kumar Yadav (@Sandy92_SKY)
click me!