ಚೀನಾ ಮೇಲೆ 2ನೇ ಡಿಜಿಟಲ್ ಸ್ಟ್ರೈಕ್, ನಟಿ ಉತ್ತರಕ್ಕೆ ಬೆಚ್ಚಿ ಬಿದ್ದ ಶಾರುಖ್; ಜು.27ರ ಟಾಪ್ 10 ಸುದ್ದಿ!

By Suvarna NewsFirst Published Jul 27, 2020, 5:04 PM IST
Highlights

ಚೀನಾ ಮೇಲೆ 2ನೇ ಡಿಜಿಟಲ್ ಸ್ಟ್ರೈಕ್ ಮಾಡಿದ ಭಾರತ ಈ ಬಾರಿ 47 ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದುಓಮರ್ ಅಬ್ದುಲ್ಲಾ ಹೇಳಿದ್ದಾರೆ. ಸಕ್ರೀಯ ಕೊರೋನಾ ಪ್ರಕರಣದಲ್ಲಿ ಕರ್ನಾಟಕ 2ನೇ ಸ್ಥಾನಕ್ಕೇರಿದೆ. ರೈತ ಕುಟುಂಬಕ್ಕೆ ಸೂನು ಸೂದು ಟ್ರಾಕ್ಟರ್ ಗಿಫ್ಟ್ ನೀಡಿ ಮತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾರುಖ್ ಖಾನ್‌ಗೆ ಶಾಕ್ ನೀಡಿದ ನಯನತಾರಾ, ಅನುಷ್ಕಾಗೆ ವಿಶೇಷ ಗಿಫ್ಟ್ ಸೇರಿದಂತೆ ಜುಲೈ 27ರ ಟಾಪ್ 10 ಸುದ್ದಿ ಇಲ್ಲಿವೆ.

ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!...

ಜೂನ್ ಅಂತ್ಯದಲ್ಲಿ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿ ಚೀನಾಗೆ  ಶಾಕ್ ಕೊಟ್ಟಿದ್ದ ಭಾರತ ಸರ್ಕಾರ ಮತ್ತೆ 47 ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡದ 250ಕ್ಕೂ ಅಧಿಕ ಆ್ಯಪ್‌ಗಳ ಮೇಲೆ ಕಣ್ಣಿರಿಸಿದೆ.

ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾಗೆ ಹರ್ಯಾಣ ಕೋರ್ಟ್‌ ಸಮನ್ಸ್‌!...

ಚೀನಾದ ಪ್ರಖ್ಯಾತ ‘ಅಲಿಬಾಬಾ’ ಕಂಪನಿ ಹಾಗೂ ಅದರ ಸಂಸ್ಥಾಪಕ ಜಾಕ್‌ ಮಾ ಆವರಿಗೆ ಭಾರತದ ಗುಡಗಾಂವ್‌ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಸಮನ್ಸ್‌ ಜಾರಿ ಮಾಡಿದೆ.

ಸಕ್ರಿಯ ಕೊರೋನಾ: ದೇಶದಲ್ಲೇ ಕರ್ನಾಟಕ ನಂ.2!...

ಕರ್ನಾಟಕ ಒಟ್ಟು ಕೊರೋನಾ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಈಗ ತಮಿಳುನಾಡನ್ನು ಹಿಂದಿಕ್ಕಿದೆ. ಈ ಮೂಲಕ ಸಕ್ರಿಯ ಸೋಂಕಿತರಲ್ಲಿ ಕರ್ನಾಟಕವು 2ನೇ ಸ್ಥಾನಕ್ಕೇರಿದೆ.

ಅನುಷ್ಕಾ ಹುಟ್ಟುಹಬ್ಬ ವಿಶೇಷ ಗಿಫ್ಟ್ ನೀಡಿದ್ದ ಕೊಹ್ಲಿ..!...

ಕ್ವಾರಂಟೈನ್ ಅವಧಿಯ ಬೆಸ್ಟ್ ಕ್ಷಣಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರ ಮಯಾಂಕ್ ಅಗರ್‌ವಾಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಕ್ವಾರಂಟೈನ್ ಅವಧಿಯಲ್ಲೇ ಅನುಷ್ಕಾ ಹುಟ್ಟುಹಬ್ಬವಿದ್ದಿದರಿಂದ ಆಕೆಗಾಗಿ ವಿಶೇಷ ಗಿಫ್ಟ್ ನೀಡಿದ್ದಾಗಿ ಕೊಹ್ಲಿ ಹೇಳಿದ್ದಾರೆ. 

ಹೆಣ್ಣು ಮಕ್ಕಳೆ ಎತ್ತುಗಳು...ರೈತನ ಕುಟುಂಬಕ್ಕೆ ಸೋನು ಸೂದ್ 'ಟ್ರ್ಯಾಕ್ಟರ್'...

ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ್ದಾರೆ.

ಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ್ದರಂತೆ ನಯನತಾರಾ!

ಶಾರುಖ್‌ ಖಾನ್‌ ಬಾಲಿವುಡ್‌ನ ಸೂಪರ್‌ ಸ್ಟಾರ್‌. ಕಿಂಗ್‌ ಖಾನ್‌ ಎಂದೇ ಕರೆಯಲ್ಪಡುವ ಶಾರುಖ್‌ ಜೊತೆ ನಟಿಸಲು ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆ ನಯನತಾರಾ ದಕ್ಷಿಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ಅವರನ್ನು ಲೇಡಿ ಸೂಪರ್‌ಸ್ಟಾರ್‌ ಎಂದೂ ಕರೆಯಲಾಗುತ್ತದೆ. ಆದರೆ ನಯನತಾರ ಒಮ್ಮೆ ಖಾನ್‌ ಜೊತೆ ನಟಿಸಲು ನೋ ಅಂದಿದ್ದರಂತೆ. ಏಕೆ?  

ಆತ್ಮಗಳು ಮಾತಾಡೋದು ನಿಜಾನಾ..?

ಆಗಾಗ ಈ ದೆವ್ವ, ಭೂತ, ಆತ್ಮಗಳ ಬಗ್ಗೆ ಕೆಲವೊಂದು ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲವರು ನಾನು ದೆವ್ವಗಳನ್ನು ನೋಡಿದ್ದೇನೆ, ಅದರ ಜತೆ ಮಾತನಾಡಿದ್ದೇನೆ ಎಂದರೆ ಮತ್ತೆ ಕೆಲವರು ಅದೆಲ್ಲಾ ಸುಳ್ಳು ಎನ್ನುವವರು ಇದ್ದಾರೆ.

'ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ...

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ,  ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ  ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಸೇನಾಪಡೆ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ!...

21ನೇ ಕಾರ್ಗಿಲ್‌ ವಿಜಯ ದಿವಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸೇನಾಪಡೆಯ ಆಸ್ಪತ್ರೆಗೆ 20 ಲಕ್ಷ ರು. ದೇಣಿಗೆ ನೀಡುವ ಮೂಲಕ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.

ಫ್ರಾನ್ಸ್‌ ವಾಯುನೆಲೆಯಿಂದ ಭಾರತದತ್ತ ರಫೇಲ್ ಹಾರಾಟ!

ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲು ಇಂದು ಫ್ರಾನ್ಸ್‌ನಿಂದ ಭಾರತದತ್ತ ಹಾರಾಟ ಆರಂಭಿಸಿವೆ. 5 ರಫೇಲ್ ವಿಮಾನಗಳು 7364 ಕಿಲೋಮೀಟರ್ ದೂರವನ್ನು ಕ್ರಮಿಸಿ, ಬುಧವಾರ ಅಂಬಾಲಾ ವಾಯುನೆಲೆಗೆ ತಲುಪಲಿವೆ. ಇನ್ನು ಭಾರತೀಯ ವಾಯುಪಡೆಯ ಫೈಟರ್ ಪೈಲಟ್‌ಗಳು ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಕರೆತರುತ್ತಿದ್ದಾರೆ ಎಂಬುವುದು ಮತ್ತೊಂದು ಖುಷಿಯ ವಿಚಾರ.

click me!