ಪ್ರಧಾನಿ ಮೋದಿ ಕರ್ನಾಟಕದ ಮೇಲೆ ‌ದ್ವೇಷ ಸಾಧಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Published : May 01, 2024, 11:28 PM IST
ಪ್ರಧಾನಿ ಮೋದಿ ಕರ್ನಾಟಕದ ಮೇಲೆ ‌ದ್ವೇಷ ಸಾಧಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಸಾರಾಂಶ

ನರೇಂದ್ರ ‌ಮೋದಿಗೆ ಸತ್ಯ ಹೇಳಿದ್ದೇ ಗೊತ್ತಿಲ್ಲ. ಭಾರತದ ಇತಿಹಾಸದಲ್ಲೇ ‌ಅತೀ ಹೆಚ್ಚು ಸುಳ್ಳು ಹೇಳುವ ಪ್ರಧಾನಮಂತ್ರಿ ‌ಮೋದಿ ಅವರಾಗಿದ್ದಾರೆ. ಇಂತವರನ್ನ ನಂಬಿಕೊಂಡು ‌ಓಟು ಹಾಕುತ್ತೀರಾ?. ರಾಜ್ಯದ 25 ಸಂಸದರು  ಇದ್ರೂ ಕರ್ನಾಟಕಕ್ಕೆ ‌ಆದ ಅನ್ಯಾಯದ ‌ಬಗ್ಗೆ ಮಾತನಾಡಲಿಲ್ಲ. ಮೋದಿ ಕರ್ನಾಟಕದ ಮೇಲೆ ‌ದ್ವೇಷ ಸಾಧಿಸುತ್ತಿದ್ದಾರೆ ಎಂದ ಆರೋಪಿಸಿದ ಸಿಎಂ ಸಿದ್ದರಾಮಯ್ಯ 

ರಾಯಚೂರು(ಮೇ.01): ಪ್ರಧಾನಿ ನರೇಂದ್ರ ಮೋದಿ ಅಬರು ಹತಾಶರಾಗಿ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಕರ್ನಾಟಕದ ಖಜಾನೆ ‌ಖಾಲಿಯಾಗಿ ಬಿಟ್ಟಿದೆ. ಕರ್ನಾಟಕದಲ್ಲಿ ‌ನೌಕರಿಗೆ ಕೊಡಲು ದುಡ್ಡು ಇಲ್ಲ. ಮೋದಿಯವರೇ ನಿಮ್ಮ ಬಳಿ ದುಡ್ಡು ಜಾಸ್ತಿ ಇದ್ರೆ, 30ಲಕ್ಷ ಉದ್ಯೋಗ ಖಾಲಿ ಇದ್ರು, ಯಾಕೆ ಹುದ್ದೆಗಳು ತುಂಬಿಲ್ಲ. ನಾವು ಸಂಬಳ ಕೊಡಲು ದುಡ್ಡಿಲ್ಲ ಅಂದ್ರೆ 8 ತಿಂಗಳಲ್ಲಿ ಜನರಿಗೆ ‌ಕೊಟ್ಟ ಐದು ಗ್ಯಾರಂಟಿಗಳನ್ನ ಜಾರಿಗೆ ಮಾಡಲು ಸಾಧ್ಯವಾಯ್ತಾ?. ಯಾವಾದ್ರೂ ಸರ್ಕಾರಿ ನೌಕರರು ಸಂಬಳ ಕೊಟ್ಟಿಲ್ಲವೆಂದು ಹೇಳಿದ್ದಾರಾ? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಇಂದು(ಬುಧವಾರ) ಯಾದಗಿರಿಯಲ್ಲಿ ನಡೆದ ‌ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆ ಕೊಟ್ಟ ಮೇಲೆಯೂ ಯಾವುದೇ ಅಭಿವೃದ್ಧಿ ಕೆಲಸ ನಿಲ್ಲಿಸಿಲ್ಲ. ಮೋದಿ ಹೇಳಿದ್ರು ಗ್ಯಾರಂಟಿ ‌ಜಾರಿ ಮಾಡಲು ಆಗಲ್ಲ. ಗ್ಯಾರಂಟಿ ‌ಜಾರಿ ಮಾಡಿದ್ರೆ ಖಜಾನೆ ‌ಖಾಲಿ ಆಗಿ ಹೋಗುತ್ತೆ ಎಂದ್ರು. ನಾವು ಎಲ್ಲವೂ ಲೆಕ್ಕ ಹಾಕಿಯೇ ಗ್ಯಾರಂಟಿ ಭರವಸೆ ಕೊಟ್ಟಿದ್ದು. ವರ್ಷಕ್ಕೆ 50 ಸಾವಿರ ಕೋಟಿ ಗ್ಯಾರಂಟಿಗೆ ಖರ್ಚು ಆಗುತ್ತೆ. ನಾವು ಗ್ಯಾರಂಟಿಗಾಗಿ 52 ಸಾವಿರ ಕೋಟಿ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. 

ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೊಲ್ಲೇನು? ನಾಲಗೆ ಹರಿಬಿಟ್ಟ ಶಾಸಕ ರಾಜು ಕಾಗೆ

10 ವರ್ಷದ ಸಾಧನೆ ಬಗ್ಗೆ ಜನರ ಮುಂದೆ ಮೋದಿಯವರು ಇಡಬೇಕಾಗಿತ್ತು. ಆದ್ರೆ ಮೋದಿಯವರು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಬಿಡಬೇಕು. ನರೇಂದ್ರ ‌ಮೋದಿಯವರ ಅಂತ್ಯಕಾಲ ಇದು. 15 ಲಕ್ಷ ಅಕೌಂಟ್ ಗೆ ಹಾಕುತ್ತೇವೆ ಅಂದ್ರು ಹಾಕಿದ್ರಾ?. 2 ಕೋಟಿ ಉದ್ಯೋಗ ಕೊಟ್ಟರಾ, ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಆಯ್ತಾ?. ಅಚ್ಚೇ ದಿನ್ ಆಯೇಗಾ ಅಂದ್ರು...ಆಯ್ತಾ?. 10 ವರ್ಷದಲ್ಲಿ ಮೋದಿಯವರು ಏನ್ ಹೇಳಿದ್ರು ಅದನ್ನ ಹೇಳಲಿ. ನಾನು ಟೀಕೆ ಮಾಡುವುದನ್ನೇ ಬಿಟ್ಟು ಬಿಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲ್‌ ಹಾಕಿದ್ದಾರೆ. 

ದೇಶದ ಒಗ್ಗಟ್ಟಿಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದ್ರು. ಬಿಜೆಪಿಯವರು ‌ಇತ್ತೀಚಿಗೆ ಒಂದು ಸುಳ್ಳು ಹೇಳಿದ್ದಾರೆ. ಹಿಂದೂಳಿದವರಿಗೆ ನೀಡುವ ಮೀಸಲಾತಿ ಕಿತ್ತು ಕಾಂಗ್ರೆಸ್ ‌ಮುಸ್ಲಿಂರಿಗೆ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ‌ಎಂದು ಮೀಸಲಾತಿ ‌ಪರವಾಗಿ ಇಲ್ಲ. ಬಿಜೆಪಿಯವರು ಎಲ್ಲಾ ಕಾಲದಲ್ಲಿಯೂ ಮೀಸಲಾತಿ ವಿರೋಧ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ನರೇಂದ್ರ ‌ಮೋದಿಗೆ ಸತ್ಯ ಹೇಳಿದ್ದೇ ಗೊತ್ತಿಲ್ಲ. ಭಾರತದ ಇತಿಹಾಸದಲ್ಲೇ ‌ಅತೀ ಹೆಚ್ಚು ಸುಳ್ಳು ಹೇಳುವ ಪ್ರಧಾನಮಂತ್ರಿ ‌ಮೋದಿ ಅವರಾಗಿದ್ದಾರೆ. ಇಂತವರನ್ನ ನಂಬಿಕೊಂಡು ‌ಓಟು ಹಾಕುತ್ತೀರಾ?. ರಾಜ್ಯದ 25 ಸಂಸದರು  ಇದ್ರೂ ಕರ್ನಾಟಕಕ್ಕೆ ‌ಆದ ಅನ್ಯಾಯದ ‌ಬಗ್ಗೆ ಮಾತನಾಡಲಿಲ್ಲ. ಮೋದಿ ಕರ್ನಾಟಕದ ಮೇಲೆ ‌ದ್ವೇಷ ಸಾಧಿಸುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ