ನವದೆಹಲಿ(ಜು.27): ಕೊರೋನಾ ಲಾಕ್‌ಡೌನ್‌ ವೇಳೆ ಪತ್ನಿ ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ಸ್ವತಃ ನಾನೇ ಕೇಕ್‌ ತಯಾರಿಸಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ನಾನು ತಯಾರಿಸಿದ್ದ ಕೇಕ್‌ ಅನ್ನು ಅನುಷ್ಕಾ ಇಷ್ಟಪಟ್ಟಿದ್ದಳು ಎಂದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. 

ಸಹ ಆಟಗಾರ ಮಯಾಂಕ್ ಅಗರ್‌ವಾಲ್‌ ಅವರೊಂದಿಗೆ ಬಿಸಿಸಿಐ ಟಿವಿಯ ವಿಡಿಯೋ ಸಂವಾದದಲ್ಲಿ ಮಾತನಾಡುವಾಗ ಈ ವಿಷಯವನ್ನು ಕೊಹ್ಲಿ ಹೇಳಿಕೊಂಡಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಥಟ್ ಅಂತ ಹೇಳಿ ಕ್ವಿಝ್ ಕಾರ್ಯಕ್ರಮದಂತೆ ರಾಪಿಡ್ ಪೈರ್‌ನಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ ನಾಯಕ ಕೊಹ್ಲಿಗೆ ಪ್ರಶ್ನಿಸಿದಾಗ ಕಿಂಗ್ ಕೊಹ್ಲಿ ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೆ. ಈ ವೇಳೆ ನಿಮ್ಮ ಕ್ವಾರಂಟೈನ್‌ನ ಬೆಸ್ಟ್ ಸ್ಟೋರಿ ಯಾವುದು ಎಂದು ಕೇಳಿದ್ದಾರೆ.

IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್

ಆಗ ಕೊಹ್ಲಿ ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ಅನುಷ್ಕಾ ಹುಟ್ಟುಹಬ್ಬದಂದು ಕೇಕ್ ತಯಾರು ಮಾಡಿದೆ. ಆಕೆ ಅದನ್ನು ಇಷ್ಟಪಟ್ಟಳು ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ. ಅನುಷ್ಕಾ ಶರ್ಮಾ ಮೇ.1ಕ್ಕೆ ತಮ್ಮ 32ನೇ ವಸಂತಕ್ಕೆ ಕಾಲಿರಿಸಿದ್ದರು. ಈ ವೇಳೆ ಲಾಕ್‌ಡೌನ್ ಇದ್ದಿದ್ದರಿಂದ ಈ ತಾರಾ ಜೋಡಿ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಆಚರಿಸಿದ್ದರು.