Google outage ವಿಶ್ವದಾದ್ಯಂತ ಗೂಗಲ್‌ ಡೌನ್‌, ಯೂಸರ್‌ಗಳ ಪರದಾಟ

By Santosh Naik  |  First Published May 1, 2024, 11:32 PM IST


ಡೌನ್‌ಡೆಕ್ಟರ್ ಪ್ರಕಾರ, ಯುಕೆಯಲ್ಲಿ 300 ಕ್ಕೂ ಹೆಚ್ಚು ಬಳಕೆದಾರರು ಗೂಗಲ್‌ ಅನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದೆ.
 


ನವದೆಹಲಿ (ಮೇ.1): ವಿಶ್ವದಾದ್ಯಂತ ಗೂಗಲ್‌ ಡೌನ್‌ ಆಗಿರುವ ಕಾರಣ ಸರ್ಚ್‌ ಇಂಜಿನ್‌ ಕೆಲಸ ಮಾಡುತ್ತಿಲ್ಲ ಎಂದು ಗೂಗಲ್‌ ಬಳಕೆದಾರರು ವರದಿ ಮಾಡಿದ್ದಾರೆ. ಯೂಸರ್‌ಗಳು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಗ್ಲೋಬಲ್‌ ಔಟೇಜ್‌ಅನ್ನು ಟ್ರ್ಯಾಕ್ ಮಾಡುವ ಡೌನ್‌ಡೆಕ್ಟರ್ ಪ್ರಕಾರ ಗೂಗಲ್‌ ಸರ್ಚ್‌  ಸೇರಿದಂತೆ ಗೂಗಲ್‌ ಸೇವೆಯಲ್ಲಿ ಯೂಸರ್‌ಗಳು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. Downdetector ಪ್ರಕಾರ, ಇಂಗ್ಲೆಂಡ್‌ನಲ್ಲಿ 300ಕ್ಕೂ ಅಧಿಕ ಯೂಸರ್‌ಗಳು ಗೂಗಲ್‌ಸೇವೆ ಬಳಸುವ ವೇಳೆ ಸಮಸ್ಯೆಗಳನ್ನು ಎದುರಿಸಿದ್ದರೆ, ಅಮೆರಿಕದಲ್ಲಿ 1400ಕ್ಕೂ ಅಧಿಕ ಮಂದಿ ಗೂಗಲ್‌ ಸೇವೆ ಬಳಸುವಾಗ ಸಮಸ್ಯೆ ಕಂಡಿದ್ದಾರೆ. ಅದರಲ್ಲೂ ನ್ಯೂಯಾರ್ಕ್‌, ಡೆನ್ವೆರ್‌, ಕೊಲರಾಡೋ ಹಾಗೂ ಸಿಯಾಟ್ಟಲ್‌ನಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. Google ನ ಇತರ ಸೇವೆಗಳಾದ Gmail, Youtube, Google Maps ಮತ್ತು Google Talk ಬಳಕೆದಾರರಿಗಾಗಿ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತಿದೆ.

ಡೌನ್‌ಡೆಕ್ಟರ್‌ನ ಪ್ರಕಾರ ಅಮೆರಿಕದಲ್ಲಿನ ಸುಮಾರು 100 ಬಳಕೆದಾರರು Google Maps ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಎಕ್ಸ್‌ನಲ್ಲಿ  "ಗೂಗಲ್ ಡೌನ್" ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಗೂಗಲ್‌ ಸೇವೆ ಬಳಸುವಾಗ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.  ಸರ್ಚ್‌ ಎಂಜಿನ್ ಅನ್ನು ಬಳಸಲು ಪ್ರಯತ್ನಿಸುತ್ತಿರುವಾಗ ಕಾಣಿಸಿಕೊಂಡ ದೋಷ ಪುಟದ ಚಿತ್ರವನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಬೆಸ್ಟ್ ವರ್ಕ್ ಪಾರ್ಟ್ನರ್ ಇವರೇ ನೋಡಿ!

Latest Videos

ಸಂದೇಶದಲ್ಲಿ  “502. ಅದು ದೋಷ. ಸರ್ವರ್ ತಾತ್ಕಾಲಿಕ ದೋಷವನ್ನು ಎದುರಿಸಿದೆ ಮತ್ತು ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು 30 ಸೆಕೆಂಡುಗಳಲ್ಲಿ ಮತ್ತೆ ಪ್ರಯತ್ನಿಸಿ. ನಮಗೆ ಗೊತ್ತಿರುವುದು ಇಷ್ಟೇ” ಎಂದು ಬರೆಯಲಾಗಿದೆ.

ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಸುಂದರ್ ಪಿಚೈ, ಈ ಅವಧಿಯಲ್ಲಿ ಒಂದು ಮಾತ್ರ ಬದಲಾಗಿಲ್ಲ ಎಂದ ಸಿಇಒ!

click me!