Asianet Suvarna News Asianet Suvarna News

ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!

ಚೀನಾ ವಿರುದ್ಧ ಭಾರತದ ಮತ್ತೊಂದು ದಾಳಿ| ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!| ಈ ಹಿಂದೆ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿದ್ದ ಭಾರತ

India second digital strike on China 47 more Chinese mobile apps banned
Author
Bangalore, First Published Jul 27, 2020, 1:51 PM IST

ನವದೆಹಲಿ(ಜು.27): ಜೂನ್ ಅಂತ್ಯದಲ್ಲಿ ಟಿಕ್‌ಟಾಕ್, ಹೆಲೋ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿ ಚೀನಾಗೆ  ಶಾಕ್ ಕೊಟ್ಟಿದ್ದ ಭಾರತ ಸರ್ಕಾರ ಮತ್ತೆ 47 ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಬಳಕೆದಾರರ ಮಾಹಿತಿ ಗೌಪ್ಯತೆ ಕಾಪಾಡದ 250ಕ್ಕೂ ಅಧಿಕ ಆ್ಯಪ್‌ಗಳ ಮೇಲೆ ಕಣ್ಣಿರಿಸಿದೆ.

"

ಹೌದು ಬ್ಯಾನ್ ಮಾಡಲಾದ 47 ಆ್ಯಪ್‌ಗಳು ಈ ಹಿಂದೆ ಬ್ಯಾನ್ ಮಾಡಲಾದ ಆ್ಯಪ್‌ಗಳನ್ನು ಹೋಲುತ್ತಿದ್ದವೆನ್ನಲಾಗಿದೆ. ಇನ್ನು ಭಾರತ ತಾನು ಬ್ಯಾನ್ ಮಾಡಿದ್ದ ಚೀನಾ ಮೂಲದ 59 ಆ್ಯಪ್‌ ತಯಾರಕರಿಗೆ ನಿಷೇಧವನ್ನು ಸರಿಯಾಗಿ ಪಾಲಿಸಿ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಎರಡನೇ ಡಿಜಿಟಲ್ ಸ್ಟ್ರೈಕ್ ನಡೆದಿದೆ ಎಂಬುವುದು ಉಲ್ಲೇಖನೀಯ. ಅಲ್ಲದೇ ಭಾರತ ಈ ಎಚ್ಚರಿಕೆ ಜೊತೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸ್ಪಷ್ಟಪಡಿಸಿತ್ತು.

ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

250 ಆ್ಯಪ್‌ಗಳ ಪರಿಶೀಲನೆ

ಭಾರತ ಆಲಿಬಾಬಾ ಕಂಪನಿಗೆ ಸಂಬಂಧಿಸಿದ ಆ್ಯಪ್ ಸೇರಿದಂತೆ ಇನ್ನೂ 250 ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಇವು  ಯಾವುದಾದರೂ ನಿಯಮ ಉಲ್ಲಂಘಿಸುತ್ತಿವೆಯಾ ಎಂಬುವುದನ್ನು ಪರಿಶೀಲಿಸುತ್ತಿದೆ. ಈ ಪಟ್ಟಿಯಲ್ಲಿ ಪಬ್‌ ಜೀ ಸೇರಿ ಕೆಲ ಗೇಮ್ ಆ್ಯಪ್‌ಗಳೂ ಇವೆ ಎನ್ನಲಾಗಿದೆ.

59 ಚೀನೀ ಆ್ಯಪ್‌ ನಿಷೇಧ; ಭಾರತೀಯ ಎಂಜಿನೀಯರ್‌ಗಳು ತಯಾರಿಸ್ತಾರಾ ಹೊಸ ಆ್ಯಪ್‌?

ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ನಡೆದಿದ್ದ ಸಂಘರ್ಷದ ಬೆನ್ನಲ್ಲೇ, ಕಳೆದ ತಿಂಗಳು ಅಂದರೆ ಜೂನ್ 29ರಂದು ಭಾರತ ಟಿಕ್‌ಟಾಕ್ ಸೇರಿ ಒಟ್ಟು 59 ಆ್ಯಪ್ ಬ್ಯಾನ್ ಮಾಡಿತ್ತು. ಇದು ಚೀನಾಗೆ ಆರ್ಥಿಕವಾಗಿ ಭಾರೀ ಹೊಡೆತ ನೀಡಿತ್ತು ಎಂಬುವುದು ಉಲ್ಲೇಖನೀಯ. 

Follow Us:
Download App:
  • android
  • ios