ಉಪ ಚುನಾವಣೆಗೆ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಚುನಾವಣಾ ಪ್ರಚಾರಕ್ಕೆ ಹೊಸ ರೂಲ್ಸ್ ಜಾರಿಗೆ ತಂದಿದೆ. ಅತ್ತ ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳಿಗೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವೀಸಾ ಶಾಕ್ ನೀಡಿದ್ದಾರೆ. ಚಿನ್ನ ಕಳ್ಳ ಸಾಗಣೆ ಪ್ರಕರಣ ಇದೀಗ ಕೇರಳ ಸಿಎಂ ಪಿಣರಾಯಿಗೆ ಉರುಳಾಗುತ್ತಿದೆ. ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ಬಾಲ್ಕನಿಯಲ್ಲಿ ನಟಿ ಐಂದ್ರಿಕಾ ಫಿಟ್ನೆಸ್ ಸರ್ಕಸ್ ಸೇರಿದಂತೆ ಅಕ್ಟೋಬರ್ 8ರ ಟಾಪ್ 10 ಸುದ್ದಿ ವಿವರ.
ಬೈ ಎಲೆಕ್ಷನ್: ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್ ಕೊಟ್ಟ ಚುನಾವಣಾ ಆಯೋಗ...
undefined
ಕರ್ನಾಟಕದಲ್ಲಿ ಬೆಂಗಳೂರಿನ ಆರ್.ಆರ್.ನಗರ ಮತ್ತು ತುಮಕೂರಿನ ಶಿರಾ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದ್ರೆ, ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್ ಕೊಟ್ಟಿದೆ.
ಭಾರತೀಯ ಟೆಕ್ಕಿಗಳಿಗೆ ಟ್ರಂಪ್ ಎಚ್-1ಬಿ ಶಾಕ್!...
ಮೆರಿಕದಲ್ಲಿನ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭ್ಯವಾಗಲಿದ್ದು, ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸುವ ಕನಸು ಕಾಣುತ್ತಿರುವ ಭಾರತದ ಸಾವಿರಾರು ಐಟಿ ಉದ್ಯೋಗಿಗಳು ಎಚ್-1 ಬಿ ವೀಸಾ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ.
ಚಿನ್ನ ಕಳ್ಳ ಸಾಗಣೆ ಕೇಸ್: ಕೇರಳ ಸಿಎಂ ಪಿಣರಾಯಿಗೆ ಉರುಳು?...
ಯುಎಇ ರಾಯಭಾರ ಕಚೇರಿಯ ಬ್ಯಾಗ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಉರುಳಾಗುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಸೇರಿದಂತೆ ಮೂವರ ವಿರುದ್ಧ ಬುಧವಾರ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿದಾಖಲಿಸಿದೆ.
IPL ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ರನ್, ಆದ್ರೂ ಈ ವರ್ಷ ಒಂದೂ ಪಂದ್ಯವಾಡಿಲ್ಲ!...
ಆತ ಟೀಂ ಇಂಡಿಯಾದ ಉಪ ನಾಯಕ. ದಶಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾನೆ. ಅಲ್ಲದೇ ಒಂದು ಐಪಿಎಲ್ ತಂಡದ ನಾಯಕನಾಗಿದ್ದರು ಹೌದು. ಇವಿಷ್ಟೇ ಅಲ್ಲದೇ ಕಲರ್‌ಫುಲ್ ಟೂರ್ನಿಯಲ್ಲಿ ಯಶಸ್ವೀ ಬ್ಯಾಟ್ಸ್‌ಮನ್. ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟೀಂನಲ್ಲಿದ್ದಾರೆ. ಹೀಗಿದ್ದರೂ ಈವರೆಗೆ ಒಂದೇ ಒಂದು ಪಂದ್ಯವನ್ನಾಡಿಲ್ಲ. ಮುಂದೆ ಆಡೋದೂ ಕೂಡಾ ಡೌಟ್.
ಶಾಕಿಂಗ್; 'ಬಿಗ್‌ಬಾಸ್‌ನಲ್ಲಿದ್ದ ಎಲ್ಲರ ನೆಚ್ಚಿನ ಈ ನಟಿಯೂ ಡ್ರಗ್ಸ್ ದಾಸಿ'...
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೆ ಸ್ಫೋಟಕ ಮಾಹಿತಿ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬಾಲ್ಕನಿಯಲ್ಲಿ ಐಂದ್ರಿತಾ ರೇ ಸರ್ಕಸ್; ಇದು ನಾರ್ಮಲ್, ಬ್ಯಾಗ್ರೌಂಡ್ ನೋಡಿ!...
ಫಿಟ್ನೆಸ್ ಫ್ರೀಕ್ ಆಗಿರುವ ಐಂದ್ರಿತಾ ರೇ ವಿಭಿನ್ನ ಸಾಹಸಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಬಾಲ್ಕನಿಯಲ್ಲಿ ಸೆರೆ ಹಿಡಿದ ಈ ಫೋಟೋ ನೋಡಿ....
ಚೈಲ್ಡ್ ಪೋರ್ನೊಗ್ರಫಿ ದೊಡ್ಡ ಜಾಲ ಬಯಲು.. ಡಾರ್ಕ್ ವೆಬ್ ಎಂದರೇನು?...
ಕೇರಳ ಪೊಲೀಸರು ಚೈಲ್ಡ್ ಪೋರ್ನೋಗ್ರಫಿಯ ದೊಡ್ಡ ದಂಧೆಯನ್ನು ಪತ್ತೆ ಮಾಡಿದ್ದಾರೆ. ಮಕ್ಕಳನ್ನು ಅಶ್ಲೀಲ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ 41 ಜನರನ್ನು ಬಂಧಿಸಲಾಗಿದೆ.
ಹಾವೇಣಿ ಆಟವಾಡುತ್ತಿದೆ ಚಿನ್ನದ ದರ: ಇಲ್ಲಿದೆ ಅ.08ರ ಗೋಲ್ಡ್ ರೇಟ್!...
ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.
ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!...
ಆಂಬುಲೆನ್ಸ್ ನಲ್ಲಿ ಹೆರಿಗೆಯಾಯಿತು, ಬಸ್ ನಲ್ಲಿ ಹೆರಿಗೆಯಾಯಿತು ಎಂಬ ಸುದ್ದಿಯನ್ನು ಹಲವು ಸಾರಿ ಕೇಳಿದ್ದೇವೆ. ಆದರೆ ಇಲ್ಲಿ ವಿಮಾನದಲ್ಲಿ ಹೆರಿಗೆಯಾಗಿದೆ ಇಂಡಿಗೋ ವಿಮಾನದಲ್ಲೆ ಗಂಡುಮಗುವಿಗೆ ಜನ್ಮ ಸಿಕ್ಕಿದೆ.
ನಮೆಗೆಲ್ಲಾ ನೀಡಿದ ಪ್ರಕೃತಿಗೆ ಸಣ್ಣ ಕೃತಜ್ಞತೆ: ಟಾಟಾ ನೆಕ್ಸಾನ್ EV ಪರಿಸರ ಉಳಿಸಿ ಅಭಿಯಾನ!...
ಪರಿಸರ ಮನುಷ್ಯನಿಗೆ ಎಲ್ಲವನ್ನ ನೀಡಿದೆ. ಶುದ್ಧ ಗಾಳಿ, ನೀರು, ಇರಲು ಭೂಮಿ ಸೇರಿದಂತೆ ಪ್ರತಿಯೊಂದನ್ನು ನಾವು ಪರಿಸರದಿಂದ ಪಡೆದಿದ್ದೇವೆ. ಇದೀಗ ಪರಿಸರ ಮಾಲಿನ್ಯ ತಗ್ಗಿಸಲು, ಜಾಗತಿಕ ತಾಪಮಾನ ನಿಯಂತ್ರಿಸಲು ನಮ್ಮ ಕೈಲಾದ ಕೊಡುಗೆ ನೀಡಬೇಕಿದೆ. ಇದಕ್ಕಾಗಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೊಚ್ಚ ಹೊಸ ಪ್ರಚಾರ ಜಾಹೀರಾತು ಬಿಡುಗಡೆ ಮಾಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.