ನಮೆಗೆಲ್ಲಾ ನೀಡಿದ ಪ್ರಕೃತಿಗೆ ಸಣ್ಣ ಕೃತಜ್ಞತೆ: ಟಾಟಾ ನೆಕ್ಸಾನ್ EV ಪರಿಸರ ಉಳಿಸಿ ಅಭಿಯಾನ!
ಪರಿಸರ ಮನುಷ್ಯನಿಗೆ ಎಲ್ಲವನ್ನ ನೀಡಿದೆ. ಶುದ್ಧ ಗಾಳಿ, ನೀರು, ಇರಲು ಭೂಮಿ ಸೇರಿದಂತೆ ಪ್ರತಿಯೊಂದನ್ನು ನಾವು ಪರಿಸರದಿಂದ ಪಡೆದಿದ್ದೇವೆ. ಇದೀಗ ಪರಿಸರ ಮಾಲಿನ್ಯ ತಗ್ಗಿಸಲು, ಜಾಗತಿಕ ತಾಪಮಾನ ನಿಯಂತ್ರಿಸಲು ನಮ್ಮ ಕೈಲಾದ ಕೊಡುಗೆ ನೀಡಬೇಕಿದೆ. ಇದಕ್ಕಾಗಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೊಚ್ಚ ಹೊಸ ಪ್ರಚಾರ ಜಾಹೀರಾತು ಬಿಡುಗಡೆ ಮಾಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈ(ಅ.08): ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ, ಅಭಿವೃದ್ಧಿ ಹೆಸರಲ್ಲಿ ಮರ ಹಾಗೂ ಕಾಡುಗಳ ಮಾರಣಹೋಮ ಸೇರಿದಂತೆ ಹಲವು ಕಾರಣಗಳಿಂದ ಪರಿಸರ ಸಮತೋಲನ ಕಳೆದುಕೊಂಡಿದೆ. ದಿನದ ನಿತ್ಯದ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ, ಪ್ರಕೃತಿ ಮೇಲಾಗುವ ಅನಾಹುತವನ್ನು ತಪ್ಪಿಸಬಹುದು. ಇದಕ್ಕಾಗಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೊಸ ಜಾಹೀರಾತು ಬಿಡುಗಡೆ ಮಾಡಿದೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಹೊಸ ಜಾಹೀರಾತು ಇದೀಗ ಭಾರಿ ಸಂಚಲನ ಮೂಡಿಸಿದೆ. ಗಾಂಧಿ ಜಯಂತಿಯಂದು ನೂತನ ಜಾಹೀರಾತು ಬಿಡುಗಡೆಯಾಗಿದ್ದು ಜನರ ಆಲೋಚನೆಯನ್ನೇ ಬದಲಿಸುವಂತಿದೆ. ಮಹಾತ್ಮಾ ಗಾಂಧಿಯ ನೀವು ಬದಲಾದರೆ ನೀವು ಬಯಸುವ ಜಗತ್ತು ಕೂಡ ಬದಲಾವಣೆಯಾಗಲಿದೆ ಅನ್ನೋ ನಾಣ್ಣುಡಿಯನ್ನೇ ಆಧಾರವಾಗಿಟ್ಟುಕೊಂಡು ಜಾಹೀರಾತು ಬಿಡುಗಡೆಯಾಗಿದೆ.
ನಾವು ಪರಿಸರವನ್ನು ನೋಡುವ ಹಾಗೂ ಆರೈಕೆ ಮಾಡುವ ವಿಧಾನದಲ್ಲಿ ಬದಲಾವಣೆ ಮಾಡೋಣ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬಳಕೆಯಿಂದ ಶೂನ್ಯ ವಾಯು ಮಾಲಿನ್ಯ, ಶೂನ್ಯ ಶಬ್ದ ಮಾಲಿನ್ಯ, ಶೂನ್ಯ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಾರಣ ವರ್ಷದಲ್ಲಿ 60 ಗಿಡಗಳನ್ನು ಬೆಳೆಸುವುದಕ್ಕೆ ಸಮವಾಗಿದೆ ಎಂದು ಈ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.
ಪರಿಸರಕ್ಕೆ ಪೂರಕವಾಗಿರುವ ಕಾರಣ ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಉತ್ತನ ನೀಡುತ್ತಿದೆ. ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ. ಗರಿಷ್ಠ ಸುರಕ್ಷತೆ ಹಾಗೂ ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ನೀಡಬಲ್ಲ ಕಾರು ಇದಾಗಿದೆ.