ಸ್ಯಾಂಡಲ್‌ವುಡ್‌ ಲವ್ಲಿ ಕಪಲ್ ದಿಗಂತ್ ಮತ್ತು ಐಂದ್ರಿತಾ ರೈ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಚಿತ್ರೀಕರಣವಿಲ್ಲದ ಬಿಡುವಿನ ಸಮಯದಲ್ಲಿ ವ್ಯಾಯಾಮ, ಜಿಮ್ ಹಾಗೂ ಸೈಕಲಿಂಗ್ ಮಾಡುತ್ತಾ ಸಮಯ ಕಳೆಯುತ್ತಾರೆ. ಇವರಿಬ್ಬರ ಫಿಟ್ನೆಸ್‌ಗೆ ಮಾರುಹೋದ ಜನರು ಟಿಪ್ಸ್ ಕೇಳುತ್ತಲೇ ಇರುತ್ತಾರೆ. ಆದರೀಗೆ ಐಂದ್ರಿತಾ ಶೇರ್ ಮಾಡಿರುವ ಹೊಸ ಪ್ರಯತ್ನವನ್ನು ಪ್ರಯೋಗಿಸುವ ಮುನ್ನ ಎಚ್ಚರವಿರಲಿ.

ಸಿಸಿಬಿ ವಿಚಾರಣೆಯಲ್ಲಿ ಏನೆಲ್ಲಾ ಮಾಹಿತಿ ನೀಡಿದ್ದಾರೆ ಆ್ಯಂಡಿ-ದಿಗ್ಗಿ?

ಇನ್‌ಸ್ಟಾ ಪೋಸ್ಟ್‌:
ವಯನಾಡಿನಲ್ಲಿರುವ Morickap ರೆಸಾರ್ಟ್‌ನಲ್ಲಿ ಸೆರೆ ಹಿಡಿದ ಫೋಟೋವನ್ನು  ಐಂದ್ರಿತಾ ಅಪ್ಲೋಡ್ ಮಾಡಿದ್ದಾರೆ. ಬಾಲ್ಕನಿಯ ರೈಲಿಂಗ್‌ ಮೇಲೆ ಸ್ಟ್ರೆಚಿಂಗ್‌ ವರ್ಕೌಟ್ ಮಾಡಿದ್ದಾರೆ ಅವರು.  'ಇದು ನಾರ್ಮಲ್ ಸ್ಟ್ರೇಂಜ್‌ ವರ್ಕೌಟ್. ಆದರೆ ಬ್ಯಾಗ್ರೌಂಡ್‌ನಲ್ಲಿರುವ ಅದ್ಭುತವಾದ ಸೀನರಿ ನೋಡಿ. ಸ್ವಿಜರ್‌ಲ್ಯಾಂಡ್‌ ಆಫ್‌ ಕೇರಳ' ಎಂದು ಬರೆದುಕೊಂಡಿದ್ದಾರೆ.

 

ಕೆಲವು ದಿನಗಳ ಹಿಂದೆ ಡ್ರಗ್ಸ್ ಮಾಫಿಯಾದಲ್ಲಿ ಆ್ಯಂಡಿ -ದಿಗ್ಗಿ ಹೆಸರು ಹೇಳಿ ಬಂದಿದ್ದು. ವಿಚಾರಣೆಯಲ್ಲಿ ಭಾಗಿಯಾಗಿದ್ದ ಜೋಡಿ ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಎರಡನೇ ಬಾರಿ ವಿಚಾರಣೆಯಲ್ಲಿ ಇಬ್ಬರ  ಪೋನನ್ನೂ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ದಿಗಂತ್ ಕಣ್ಣಿಗೆ ಆದ ಗಾಯದಿಂದ ಶೇ.80 ದೃಷ್ಟಿ ಕಳೆದುಕೊಂಡಿದ್ದರಂತೆ. ಆ ಸಮಯದಲ್ಲಿ ನೋವನ್ನು ಮರೆಯುವುದಕ್ಕೆ ಡ್ರಗ್ಸ್ ಸೇವಿಸುತ್ತಿದ್ದೆ, ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆಂದೂ ಹೇಳಲಾಗುತ್ತಿದೆ. 

ಸ್ಯಾಂಡಲ್‍ವುಡ್‍ ಕ್ಯೂಟ್ ಕಪಲ್ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್: ಇದು ಯಾವ ಸ್ಥಳ ಹೇಳಿ..?

ಒಟ್ಟಿನಲ್ಲಿ ಮಲೆನಾಡ ಹುಡುಗ, ಬೆಂಗಾಲಿ ಬೆಡಗಿ ತಮ್ಮದೇ ವಿಶಿಷ್ಟ ರೀತಿಯಲ್ಲಿ ಜೀವನ ಸಾಗಿಸುತ್ತಿರುವುದು ಸುಳ್ಳಲ್ಲ. ಒಂದು ಸಾರಿ ಮಲೆನಾಡಿನ ಯಾವುದೋ ನೀರಿನ ಝರಿ ಕೆಳಗೆ ಕೂತು ತೆಗೆದುಕೊಂಡು ಫೋಟೋ ಶೇರ್ ಮಾಡಿಕೊಂಡರೆ, ಮತ್ತೊಮ್ಮೆ ದೇಶದ ಇನ್ನೊಂದು ಮೂಲೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟಿವ್ ಆಗಿರುವ ಈ ಜೋಡಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.