ನವದೆಹಲಿ, (ಅ.08) ಕೊರೋನಾ ಭೀತಿ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಮಿತಿಗೊಳಿಸಿ ಆದೇಶ ಹೊರಡಿಸಿದೆ.

ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶವಿತ್ತು. ಆದರೆ ಈ ಸಂಖ್ಯೆಯಲ್ಲಿ ಬದಲಾವಣೆ ಮಾಡಿ 30 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ. 

ಎಲೆಕ್ಷನ್‌ಗಾಗಿ ಮಾರ್ಗಸೂಚಿಗಳನ್ನ ಪ್ರಕಟಿಸಿದ ಚುನಾವಣೆ ಆಯೋಗ

ಅದೇ ರೀತಿಯಲ್ಲಿ ನೊಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದ 20 ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು 15ಕ್ಕೆ ಇಳಿಸಿದೆ. 

ರಾಜ್ಯದಲ್ಲಿ ಪ್ರಸ್ತುತ ಘೋಷಣೆಯಾಗಿರುವ ವಿಧಾನಸಭಾ ಉಪ ಚುನಾವಣೆಗಳಿಗೆ ಈ ಪರಿಷ್ಕøತ ಆದೇಶ ಅನ್ವಯವಾಗಲಿದ್ದು, ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರ ಸಭೆಗಳ ಕುರಿತು ಮುಖ್ಯ ಚುನಾವಣಾಕಾರಿಗಳಿಂದ ಅನುಮತಿ ಪಡೆಯಲು ಚುನಾವಣೆ ಅಸೂಚನೆಯ ದಿನಾಂಕದಿಂದ ಇದ್ದ ಒಂದು ವಾರದ ಗಡುವನ್ನು 10 ದಿನಗಳಿಗೆ ವಿಸ್ತರಿಸಲಾಗಿದೆ.

ಸ್ಟಾರ್ ಪ್ರಚಾರಕರ ಸಭೆಗಳಿಗೆ ಕನಿಷ್ಠ 48 ಗಂಟೆಗಳ ಮುಂಚೆ ಅನುಮತಿಗಾಗಿ ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.