ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ಹತ್ಯೆಯಾಗಿದ್ದು ಬಂಧಿತ ಇಸ್ಕಾನ್ ಗುರು ಕೃಷ್ಣ ದಾಸ್ ವಕೀಲರಲ್ಲ!

By Chethan Kumar  |  First Published Nov 26, 2024, 8:58 PM IST

ಬಾಂಗ್ಲಾದೇಶ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಕೀಲರೊಬ್ಬರು ಕೊಲ್ಲಲ್ಪಟ್ಟಿದ್ದಾರೆ.


ಢಾಕಾ(ನ.26) ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಿಂಸಾಚಾರ ವಿರುದ್ಧ ಹಿಂದೂಗಳ ಸಂಘಟಿಸಿ ಪ್ರತಿಭಟಿಸಿದ ಹಿಂದೂ ನಾಯಕ, ಇಸ್ಕಾನ್ ಗುರು ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಾಚಾರಿಯನ್ನು ಬಂಧಿಸಲಾಗಿದೆ. ದೇಶದ್ರೋಹದ ಆರೋಪ ಹೊರಿಸಿರುವ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಸರ್ಕಾರ ಕೃಷ್ಣದಾಸ್ ಬಂಧಿಸಿದೆ. ಕೃಷ್ಣ ದಾಸ್ ಬಂಧನದ ಬೆನ್ನಲ್ಲೇ ಬಿಡುಗಡೆಗಾಗಿ ಭಾರಿ ಪ್ರತಿಭಟನೆ ಆರಂಭಗೊಂಡಿದೆ. ಇಂದು ಕೃಷ್ಣದಾಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಾಗಿದೆ. ಇದರ ಬೆನ್ನಲ್ಲೇ ಕೋರ್ಟ್ ಹೊರಗಡೆ ನಡೆದ ಪ್ರತಿಭಟನೆಯಲ್ಲಿ ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿದೆ. ಇವರು ಕೃಷ್ಣದಾಸ ಪರ ವಾದಿಸುತ್ತಿದ್ದ ವಕೀಲರೆಂದು ಈ ಮೊದಲು ಹೇಳಲಾಗಿತ್ತು. ಆದರೆ, ಅವರಲ್ಲವೆಂದು ಇದೀಗ ಸ್ಪಷ್ಟಪಡಿಸಲಾಗಿದೆ. 

ಮಾಧ್ಯಮ ವರದಿ ಪ್ರಕಾರ, ಬಾಂಗ್ಲಾದೇಶ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಉಗ್ರ ಪ್ರತಿಭಟನೆಯಲ್ಲಿ ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಅವರ ಬಂಧನವನ್ನು ವಿರೋಧಿಸಿ ಬಾಂಗ್ಲಾದೇಶದ ಚಟ್ಟೋಗ್ರಾಮ್ ನ್ಯಾಯಾಲಯದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

Tap to resize

Latest Videos

ಬಾಂಗ್ಲಾದೇಶ ಸಮ್ಮಿಲಿತೋ ಸನಾತನ ಜಾಗರಣ ಜೋಟೆಯ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಜೈಲಿಗೆ ಕರೆದೊಯ್ಯುತ್ತಿದ್ದ ವಾಹನವನ್ನು ಬೆಂಬಲಿಗರು ತಡೆದಾಗ ಸೈಫುಲ್ ಇಸ್ಲಾಂ ಅಲಿಫ್ ಎಂಬ ವಕೀಲರು ಹತ್ಯೆಯಾಗಿದ್ದಾರೆ.ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಜನಸಂದಣಿಯನ್ನು ಚದುರಿಸಲು ಸೌಂಡ್ ಗ್ರೆನೇಡ್‌ಗಳನ್ನು ಬಳಸಿದ್ದಾರೆ. ಈ ಹಿಂಸಾಚಾರದಲ್ಲಿ ಕನಿಷ್ಠ 7 ರಿಂದ 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಂಧಿತ ಇಸ್ಕಾನ್ ಗುರೂಜಿ ಚಿನ್ಮೋಯ್ ಕೃಷ್ಣ ದಾಸ್ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಚಿನ್ಮೋಯ್ ಕೃಷ್ಣ ದಾಸ್ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ ಈ ಗಲಭೆ ತೀವ್ರಗೊಂಡಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

ಹಿಂದೂಗಳ ಮೇಲಿನ ದಾಳಿ ವಿರುದ್ಧ ಪ್ರತಿಭಟಿಸಿದ ಆರೋಪ, ಬಾಂಗ್ಲಾ ಇಸ್ಕಾನ್ ಸ್ವಾಮೀಜಿ ಅರೆಸ್ಟ್!

ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಪ್ರತಿಭಟನಾಕಾರರು ಹಿಂದೂ ನಾಯಕರನ್ನು ಕರೆದೊಯ್ಯುತ್ತಿದ್ದ ಜೈಲು ವಾಹನವನ್ನು ತಡೆದಾಗ ಹಿಂಸಾಚಾರ ನಡೆದಿದೆ ಎಂದಿದೆ. ಸುಮಾರು ಮೂರು ಗಂಟೆಗಳ ಬಿಕ್ಕಟ್ಟಿನ ನಂತರ, ಪೊಲೀಸರು ಅಶ್ರುವಾಯು, ಸೌಂಡ್ ಗ್ರೆನೇಡ್‌ಗಳನ್ನು ಪ್ರತಿಭಟನೆ ಹತ್ತಿಕ್ಕಲಾಗಿದೆ ಎಂದು ವರದಿಯಾಗಿದೆ. 
 

click me!