ಬೆಂಗ್ಳೂರಲ್ಲಿ ದಾಟಲಿದೆ 2 ಲಕ್ಷ ಕೇಸ್, ಸೆಪ್ಟೆಂಬರ್‌ನಲ್ಲಿ IPL ಫಿಕ್ಸ್? ಜು.16ರ ಟಾಪ್ 10 ಸುದ್ದಿ!

By Suvarna NewsFirst Published Jul 16, 2020, 4:53 PM IST
Highlights

ಕೊರೋನಾ ವೈರಸ್ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ. ಬೆಂಗಳೂರಲ್ಲಿ ಬರೋಬ್ಬರಿ 2 ಲಕ್ಷ ಕೊರೋನಾ ಕೇಸ್ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.  ಕೊರೋನಾಗೆ ಔಷಧಿ ನೀಡಲು ಭಾರತಕ್ಕೆ ಸಾಧ್ಯ ಎಂದು ಬಿಲ್‌ಗೇಟ್ಸ್ ಹೇಳಿದ್ದಾರೆ. ಕೊರೋನಾಗೆ ತಡೆಗೆ ದಕ್ಷಿಣ ಕನ್ನಡ ಇಂದಿನಿಂದ ಲಾಕ್‌ಡೌನ್ ಆಗಿದೆ. ಸೆಲ್ಫಿ ಹಂಚಿಕೊಂಡ ನಟಿ ರಮ್ಯಾಗೆ ನೆಟ್ಟಿಗರು ಶಾಕ್ ನೀಡಿದ್ದಾರೆ. ಐಪಿಎಲ್ ಟೂರ್ನಿ ಆಯೋಜನೆಗೆ ಮಾಸ್ಟರ್ ಪ್ಲಾನ್, ಸಿವಿಲ್‌ ವಾರ್ಡನ್‌ ಹುದ್ದೆಗೆ 8 ಸಾವಿರ ಅರ್ಜಿ ಸೇರಿದಂತೆ ಜುಲೈ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಜಗತ್ತಿಗೇ ಕೊರೋನಾ ಔಷಧ ನೀಡಲು ಭಾರತದ ಫಾರ್ಮಸಿಗಳಿಂದ ಸಾಧ್ಯ: ಬಿಲ್‌ಗೇಟ್ಸ್...

ಭಾರತದ ಔಷಧ ತಯಾರಿ ಕಂಪನಿಗಳು ತಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿಗೇ ಔಷಧ ತಯಾರಿಸಿಕೊಡಬಲ್ಲವು ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ತಿಳಿಸಿದ್ದಾರೆ.

ಕೊರೋನಾ ಔಷಧಿ ಸಂಶೋಧಿಸುತ್ತಿರುವ ಆಕ್ಸ್‌ಫರ್ಡ್‌ನಿಂದ ಸಿಹಿ ಸುದ್ದಿ; ಇಂದು ಘೋಷಣೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದೀಗ ಕೊರೋನಾ ನಿಯಂತ್ರಿಸಲು ಒಂದೇ ಪರಿಹಾರ ಅಂದರೆ ಅದು ಲಸಿಕೆ. ಹಲವು ಕಂಪನಿಗಳು ಕೊರೋನಾ ಔಷದ ಸಂಶೋಧನೆ, ಪ್ರಯೋಗ ನಡೆಸುತ್ತಿದೆ. ಇದರ ಬೆನ್ನಲ್ಲೇ  ಕೊರೋನಾ ಔಷಧ ಸಂಶೋಧನೆ ನಡೆಸುತ್ತಿರುವ ಆಕ್ಸಫರ್ಡ್ ಸಿಹಿ ಸುದ್ದಿ ನೀಡಿದೆ.

ಪ್ರಖ್ಯಾತ APP ಸಂಸ್ಥಾಪಕನ ದಾರುಣ ಹತ್ಯೆ, ರುಂಡ-ಮುಂಡ ಬೇರೆ ಬೇರೆ!

ಬಾಂಗ್ಲಾದೇಶಿ ಮೂಲದ ಟೆಕ್ನಾಲಜಿ  ನವಉದ್ಯಮಿ ಒಬ್ಬರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.   ಗೋಕಾಡಾ ಬೈಕ್ ರೈಡ್ ಆಪ್ ಅಭುವೃದ್ಧಿ ಪಡಿಸಿದ ವ್ಯಕ್ತಿಯ ಕೊಲೆಯಾಗಿದೆ.

ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಇಂಗ್ಲೆಂಡ್‌ ತಂಡ ಹಿಂದೇಟು ಹಾಕು​ತ್ತಿ​ದೆ. ಇದರ ಜತೆಗೆ ಸೆಪ್ಟೆಂಬರ್‌ನಲ್ಲಿ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿ​ರುವ ಕಾರಣ, 3 ಪಂದ್ಯ​ಗಳ ಏಕ​ದಿನ ಹಾಗೂ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು 2021ರ ಸೆಪ್ಟೆಂಬರ್‌ನಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಗಿದೆ 

ಯಮಕಿಂಕರ ಕೊರೋನಾ: ಬೆಂಗಳೂರಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್‌..!...

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ದಿನೇ ದಿನೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈಗಾಗಲೇ ನಗರದಲ್ಲಿ ಕೋವಿಡ್‌ ಪ್ರಕರಣಗಳು ಎರಡು ಲಕ್ಷ ದಾಟಿವೆ ಎಂದು ತಜ್ಞರ ತಂಡವೊಂದು ಆಘಾತಕಾರಿ ಸುದ್ದಿಯನ್ನ ಹೊರಹಾಕಿದೆ. 

ವಿಚಿತ್ರ ಸೆಲ್ಫಿಗಳನ್ನು ಶೇರ್ ಮಾಡಿಕೊಂಡ ನಟಿ ರಮ್ಯಾ; ನೆಟ್ಟಿಗರು ಶಾಕ್!

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಬೋಲ್ಡ್‌ ಸೆಲ್ಫೀಗಳನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಗಿದ್ದಾರೆ. ಭಿನ್ನ ವಿಭಿನ್ನ ಮುಖ ಭಾವಗಳಲ್ಲಿ, ನವರಸಗಳನ್ನು ತೋರುವಂತಿರುವ ಫೋಟೋಸ್, ರಮ್ಯಾ ಮತ್ತೆ ಚಿತ್ರಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರಾ ಎಂಬ ಅನುಮಾನ ಸೃಷ್ಟಿಸಿದೆ.

ದಕ್ಷಿಣ ಕನ್ನಡ ಇಂದಿನಿಂದ ಲಾಕ್ಡೌನ್‌, 3 ಗಂಟೆ ಮಾತ್ರ ಅಗತ್ಯ ವಸ್ತು ಖರೀದಿಗೆ ವಿನಾಯ್ತಿ

ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಬುಧವಾರ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್‌ ಆರಂಭಗೊಂಡಿದೆ. ಇದು ಜು.23ರ ಬೆಳಗ್ಗೆ 5 ಗಂಟೆ ವರೆಗೆ ಮುಂದುವರಿಯಲಿದೆ. ಆದರೆ ದಿನಂಪ್ರತಿ ಬೆಳಗ್ಗೆ 8ರಿಂದ 11 ಗಂಟೆ ವರೆಗೆ 3 ಗಂಟೆ ಕಾಲ ಅಗತ್ಯ ವಸ್ತು ಖರೀದಿಗೆ ನಾಗರಿಕರಿಗೆ ಲಾಕ್ಡೌನ್‌ನಿಂದ ವಿನಾಯ್ತಿ ನೀಡಲಾಗಿದೆ.

ಜಿಯೋ ಗ್ಲಾಸ್: ತರಗತಿ ನಡೆಸಲು ರಿಲಯನ್ಸ್ ಹೊಸ ಪ್ರಾಡಕ್ಟ್, ಡೆಮೋದಲ್ಲಿ ಆಕಾಶ್, ಇಶಾ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಸಭೆಯಲ್ಲಿ ಪ್ರಮುಖ ವಿಚಾರಗಳನ್ನು ಕಂಪನಿ ತಿಳಿಸಿದೆ. ಅದಲ್ಲದೇ ಈ ಬಾರಿಯ ಸಭೆಯಲ್ಲಿ ಪ್ರಮುಖ ಗಣ್ಯರೂ ಭಾಗಿಯಾಗಿದ್ದರು ಎಂಬುದು ವಿಶೇಷ. ಬಿಲಿಯನೇರ್ ಮುಖೇಶ್ ಅಂಬಾನಿ ಡಿಜಿಟಲ್ ವಿಭಾಗದಲ್ಲಿ 33,737 ಕೋಟಿ ಹೂಡಿಕೆ ಸೇರಿಸಿ ಹಲವು ಡೀಲ್‌ಗಳನ್ನು ಘೋಷಿಸಿದ್ದಾರೆ.

ಲಾಕ್‌ಡೌನ್‌ ವೇಳೆ ಸ್ವಯಂ ಸೇವಕರಾಗಿ ಸೇವೆ: ಸಿವಿಲ್‌ ವಾರ್ಡನ್‌ ಹುದ್ದೆಗೆ 8 ಸಾವಿರ ಅರ್ಜಿಗಳು!

ಲಾಕ್‌ಡೌನ್‌ ವೇಳೆ ಪೊಲೀಸರ ಜತೆ ಕೈ ಜೋಡಿಸುವಂತೆ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರ ಕರೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ ಸಿವಿಲ್‌ ಪೊಲೀಸ್‌ ವಾರ್ಡನ್‌ ಹುದ್ದೆಗೆ ಸುಮಾರು 8 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 10 ಐಡಿಯಾಗಳು!...

ಕೊರೋನಾ ವೈರಸ್‌ ನಮ್ಮನ್ನು ಗೆಲ್ಲುವ ಮುನ್ನ ನಾವೇ ಅದನ್ನು ಎದುರಿಸಲು ಅಣಿಯಾಗಬೇಕು. ಅದಕ್ಕಿರುವ ಸದ್ಯದ ಒಂದು ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಂದಷ್ಟುಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಿದೆ.

click me!