Asianet Suvarna News Asianet Suvarna News

ಕೊರೋನಾ ಔಷಧಿ ಸಂಶೋಧಿಸುತ್ತಿರುವ ಆಕ್ಸ್‌ಫರ್ಡ್‌ನಿಂದ ಸಿಹಿ ಸುದ್ದಿ; ಇಂದು ಘೋಷಣೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದೀಗ ಕೊರೋನಾ ನಿಯಂತ್ರಿಸಲು ಒಂದೇ ಪರಿಹಾರ ಅಂದರೆ ಅದು ಲಸಿಕೆ. ಹಲವು ಕಂಪನಿಗಳು ಕೊರೋನಾ ಔಷದ ಸಂಶೋಧನೆ, ಪ್ರಯೋಗ ನಡೆಸುತ್ತಿದೆ. ಇದರ ಬೆನ್ನಲ್ಲೇ  ಕೊರೋನಾ ಔಷಧ ಸಂಶೋಧನೆ ನಡೆಸುತ್ತಿರುವ ಆಕ್ಸಫರ್ಡ್ ಸಿಹಿ ಸುದ್ದಿ ನೀಡಿದೆ.

Positive news on initial trials of the Oxford COVID 19 vaccine could be announced today
Author
Bengaluru, First Published Jul 16, 2020, 2:36 PM IST | Last Updated Jul 16, 2020, 2:36 PM IST

ಅಮೆರಿಕ(ಜು.16):  ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ, ಶುಚಿತ್ವ ಸೇರಿದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೊರೋನಾ ವೈರಸ್ ಹರಡುವಿಕೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಹಲವು ನಗರ, ಜಿಲ್ಲೆಗಳು ಲಾಕ್‌ಡೌನ್ ಆಗಿವೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅತ್ತ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೈಚೆಲ್ಲಿ ಕೂತಿದೆ. ಇದರ ನಡುವೆ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಂಶೋಧನೆ ನಡೆಸುತ್ತಿರುವ ಕೊರೋನಾ ಔಷಧ ಜನರ ಆತಂಕ ದೂರ ಮಾಡುವ ಸೂಚನೆ ನೀಡಿದೆ.

ಭಾರತದಿಂದ ಮತ್ತೊಂದು ಕೊರೋನಾ ಲಸಿಕೆ ಸಿದ್ಧ; DCGIನಿಂದ ಸಿಕ್ತು ಗ್ರೀನ್ ಸಿಗ್ನಲ್!

ಆಕ್ಸ್‌ಫರ್ಡ್, ಆಸ್ಟಾಜೆಂಕಾ ಕೋವಿಡ್ 19 ಔಷದ ಇದೀಗ ಅಂತಿಮ ಹಂತದ ಪ್ರಯೋಗದಲ್ಲಿದೆ. ಈಗಾಗಲೇ 2 ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಈ ಲಸಿಕೆ ಕೊರೋನಾ ವೈರಸ್ ಸೋಂಕಿತರ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಯುಸ್ ಬಯೋಟೆಕ್, ಅಸ್ಟಾಜೆಂಕಾ ಪೊಲಿಟಿಕಲ್ ಎಡಿಟರ್ ರಾಬರ್ಟ್ ಪೆಟ್ಸನ್, ವಿಶ್ವಕ್ಕೆ ಸುಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ. ಗುರುವಾರ(ಜು.16) ಕೊರೋನಾ ಲಸಿಕೆ ಕುರಿತು ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ.

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!

ಆಕ್ಸ್‌ಫರ್ಡ್ ಯುನಿವರ್ಸಿಟಿಯ ಜೆನ್ನರ್ ಸಂಸ್ಥೆ ಕೊರೋನಾ ಔಷಧಿ ಆಸ್ಟ್ರಾಜೆಂಕಾ ಲೈಸೆನ್ಸ್ ಹೊಂದಿದೆ. ಈಗಾಗಲೇ ಈ ಔಷದ 3ನೇ ಹಂತದ ಪ್ರಯೋಗದಲ್ಲಿದೆ. ಆಕ್ಸ್‌ಫರ್ಡ್ ಕೊರೋನಾ ಔಷದ ಮಾರುಕಟ್ಟೆ ಬಿಡುಗಡೆ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಯೋಗದ ಹಂತದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿದೆ ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಜೆನ್ನರ್ ವಕ್ತಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Latest Videos
Follow Us:
Download App:
  • android
  • ios