ನ್ಯೂಯಾರ್ಕ್(ಜು.16)  ಬಾಂಗ್ಲಾದೇಶಿ ಮೂಲದ ಟೆಕ್ನಾಲಜಿ  ನವಉದ್ಯಮಿ ಒಬ್ಬರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.   ಗೋಕಾಡಾ ಬೈಕ್ ರೈಡ್ ಆಪ್ ಅಭುವೃದ್ಧಿ ಪಡಿಸಿದ ವ್ಯಕ್ತಿಯ ಕೊಲೆಯಾಗಿದೆ.

ನವ ಉದ್ಯಮಿ ಫಹೀಮ್ ಸಾಲೇಹ್ (33)  ರುಂಡ-ಮುಂಡ ಬೇರೆಯಾದ ಸ್ಥಿತಿಯಲ್ಲಿ ದೊರೆತಿದ್ದಾರೆ. ನ್ಯೂಯಾರ್ಕ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಶವ ಪತ್ತೆಯಾಗಿದೆ.  ತಲೆ ಮತ್ತು ಕೈಗಳನ್ನು ಹತ್ಯೆ ಮಾಡಿ ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ತುಂಬಿಸಿ ಇಡಲಾಗಿತ್ತು.

ಹೊಸದಾಗಿ ಮದುವೆಯಾಗಿದ್ದವಳ ಕೊಂದು ತಾನು ಗುಂಡಿಕ್ಕಿಕೊಂಡ

ಸಾಹೇಲ್ ಸಹೋದರಿ ಮೊದಲಿಗೆ ಶವ ನೋಡಿದ್ದಾರೆ.  ಪೊಲೀಸರು ಅಪಾರ್ಟ್ ಮೆಂಟ್ ಭೇಟಿ ಕೊಟ್ಟವರ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ರುಂಡ ಮುಂಡ ಬೇರೆಯಾದ ಶರೀರ ನಮಗೆ ಸಿಕ್ಕಿದೆ. ಕೊಲೆಗೆ ಇಲ್ಲಿಯವರೆಗೆ  ಯಾವುದೇ ಸ್ಪಷ್ಟ ಕಾರಣ ತಿಳಿದು  ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಸಾಲೇಹ್ ಕೋಟು ಧರಿಸಿದ ವ್ಯಕ್ತಿಯೊಬ್ಬನ ಜತೆ ತೆರಳುತ್ತಿರುವ ದೃಶ್ಯ ಕೊನೆಯಾದಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.