ಅಸ್ಸಾಂ ಗಡಿ ಮತ್ತೆ ಉದ್ವಿಗ್ನ, RCBಗೆ ಕಾಡಿದ 5 ವಿಘ್ನ; ನ.7ರ ಟಾಪ್ 10 ಸುದ್ದಿ!

By Suvarna News  |  First Published Nov 7, 2020, 4:50 PM IST

ದೀಪಾವಳಿ ಪಟಾಕಿ ನಿಷೇಧಕ್ಕೆ ವ್ಯಾಪಾರಿಗಳು ಆಕ್ಷೇಪ್ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.  ಅಸ್ಸಾಂ ಮತ್ತು ಮಿಜೋರಂ ನಡುವಿನ ಗಡಿವಿವಾದ ಮತ್ತಷ್ಟುಉದ್ವಿಗ್ನಗೊಂಡಿದೆ. ಚುನಾವಣೆ ಅಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಟ್ರಂಪ್‌ಗೆ ಮುಖಭಂಗವಾಗಿದೆ. ಒಂದು ವರ್ಷಗಳ ಬಳಿಕ ಶೈನ್ ಶೆಟ್ಟಿ ಕೈರಿಸಿದ ಬಿಗ‌್‌ಬಾಸ್ ಬಹುಮಾನ, ದೀಪಾವಳಿಗೆ ಹಸಿರು ಪಟಾಕಿ ಸೇರಿದಂತೆ ನವೆಂಬರ್ 7ರ ಟಾಪ್ 10 ಸುದ್ದಿ ಇಲ್ಲಿವೆ.
 


ಪಟಾಕಿ ನಿಷೇಧ: ವ್ಯಾಪಾರಿಗಳಿಂದ ಆಕ್ಷೇಪ, ತಜ್ಞರಿಂದ ಸ್ವಾಗತ, ಅಂಗಡಿಗಳಿಗೆ ಲಗ್ಗೆಯಿಟ್ಟ ಜನ...

Latest Videos

undefined

 ವಾಯುಮಾಲಿನ್ಯ ತಡೆಗಟ್ಟಲು, ಕೋವಿಡ್ ಸೋಂಕಿತರ ಆರೋಗ್ಯ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಹಸಿರು ಪಟಾಕಿಗೆ ಮಾತ್ರ ಬಳಸಿ ಎಂದು ಸಿಎಂ ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಗಸೂಚಿ ಹೊರಬರಬೇಕಷ್ಟೇ. ಸರ್ಕಾರದ ಈ ನಿರ್ಧಾರಕ್ಕೆ ಪರ- ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ: ಅರೆಸೇನೆ ನಿಯೋಜನೆ!...

ಅಸ್ಸಾಂ ಮತ್ತು ಮಿಜೋರಂ ನಡುವಿನ ಗಡಿವಿವಾದ ಮತ್ತಷ್ಟುಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಸ್ಥಳಕ್ಕೆ ಹೆಚ್ಚುವರಿ ಅರೆಸೇನಾ ಪಡೆ ನಿಯೋಜಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದೆ.

ಚುನಾವಣೆ ಅಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಟ್ರಂಪ್‌ಗೆ ಮುಖಭಂಗ: ಶ್ವೇತ ಭವನದತ್ತ ಬೈಡೆನ್!...

ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಕೋರ್ಟ್‌ ಮೆಟ್ಟಿಲೇರಿದ್ದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರಿಗೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಿಶಿಗನ್‌ ಹಾಗೂ ಜಾರ್ಜಿಯಾದಲ್ಲಿ ಟ್ರಂಪ್‌ ಬೆಂಬಲಿಗರು ಸಲ್ಲಿಸಿದ್ದ ಅರ್ಜಿಗಳು ಅಲ್ಲಿನ ನ್ಯಾಯಾಲಯಗಳು ತಿರಸ್ಕರಿಸಿವೆ.

ಇಲ್ಲಿವೆ ನೋಡಿ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಲು ಕಾರಣವಾದ 5 ಅಂಶಗಳು..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ್ ಅಂತ್ಯವಾಗಿದೆ.

ಬಿಗ್ ಬಾಸ್‌ ಮುಗಿದು ಒಂದು ವರ್ಷದ ನಂತರ ಕಾರು ಪಡೆದ ಶೈನ್‌ ಶೆಟ್ಟಿ!...

ಕೊನೆಗೂ ಶೈನ್‌ ಶೆಟ್ಟಿಗೆ ಕೈ ಸೇರಿದ ಟಾಟಾ ಆಲ್ಟ್ರೋಜ್ ಕಾರು. ವಿಶೇಷವಾದ ರೀತಿಯಲ್ಲಿ ವಿಡಿಯೋ ಶೇರ್ ಮಾಡಿಕೊಂಡ ನಟ.

ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ: 50 ಕೋಟಿ ವ್ಯಾಪಾರ ನಿರೀಕ್ಷೆ...

ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ರಾಜ್ಯದಲ್ಲಿ 50 ಕೋಟಿ ವ್ಯಾಪಾರವಾಗುವ ನಿರೀಕ್ಷೆ ಹೊಂದಲಾಗಿದೆ.

ದಂಡ ಹಾಕಲು ಬಂದ ಪೊಲೀಸ್‌ನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಚಾಲಕ!...

ಕೊರೋನಾ ವೈರಸ್ ಕಾರಣ ಮಾಸ್ಕ್ ಕಡ್ಡಾಯವಾಗಿದೆ. ಹಲವರು ಮಾಸ್ಕ್ ಧರಿಸದೆ ದಂಡ ತೆತ್ತಿದ್ದಾರೆ. ವಿಶೇಷವಾಗಿ ವಾಹನ ಚಾಲಕರು, ಪ್ರಯಾಣಿಕರು ಮಾಸ್ಕ್ ಹಾಕದೆ ದಂಡಕ್ಕೆ ಗುರಿಯಾಗಿದ್ದಾರೆ. ಇಲ್ಲೊಬ್ಬ ಕಾರು ಚಾಲಕ, ಮಾಸ್ಕ್ ಧರಿಸದ ಕಾರಣ ದಂಡ ಹಾಕಲು ಬಂದ ಪೊಲೀಸನ್ನು 1 ಕಿಮೀ ಕಾರಿನಲ್ಲಿ ಎಳೆದೊಯ್ದ ಘಟನೆ ನಡೆದಿದೆ.

ಟ್ರಕ್‌ನಲ್ಲಿ ಊರೆಲ್ಲಾ ಸುತ್ತಿದ ನಿರುದ್ಯೋಗಿ: ಟಾಪ್ ಕಂಪನಿಯಿಂದ ಸಿಕ್ತು ಬಂಪರ್ ಜಾಬ್ ಆಫರ್...

ಕೊರೋನಾದಿಂದ ಬಹಳಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಇಲ್ಲೊಬ್ಬ ಕೆಲಸ ಹುಡುಕೋದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದ. ಆದರೆ ಆತನ ಕ್ರಿಯೇಟಿವ್ ಐಡಿಯಾ ಆತನನ್ನು ಎಲ್ಲಿಗೆ ತಲುಪಿಸಿದೆ ನೋಡಿ..! ಕಂಪನಿಯೇ ಆತನ ಬಳಿ ಬಂದು ಕೆಲಸ ನೀಡುವಷ್ಟರಮಟ್ಟಿಗೆ ಆತ ಮಾಡಿದ್ದೇನು ನೋಡಿ

ನೈಟ್‌ಕ್ಲಬ್ ಹೊರಗೆ ಯಂಗ್ ರ‍್ಯಾಪರ್‌ಗೆ ಗುಂಡು: ಕಿಂಗ್ ವಾನ್‌ ಸಾವು...

ಕಿಂಗ್ ವಾನ್ ಮತ್ತು ಸ್ವಲ್ಪ ಯುವಕರು ಓಪಿಯಂ ನೈಟ್‌ಕ್ಲಬ್‌ನಿಂದ ಹೊರಗೆ ಬಂದು ಮೊನೆಕೋ ಹುಕ್ಕಾ ಲಾಂಜ್‌ಗೆ ಹೋಗುವವರಿದ್ದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಂಗ್ ರ‍್ಯಾಪರ್ ಕೊಲ್ಲಲ್ಪಟ್ಟಿದ್ದಾನೆ

ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!...

ಲಾಕ್‌ಡೌನ್ ನೆಪದಲ್ಲಿ ಊರು ಸೇರಿದ್ದ ಮೂರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನ ಜೊತೆ ಬೆತ್ತಲಾಗಿದ್ದಾಳೆ. ಬಳಿಕ ಮಸಣ ಸೇರಿದ್ದಾಳೆ.
 

click me!