ವಾಷಿಂಗ್ಟನ್(ನ.07)‌: ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಕೋರ್ಟ್‌ ಮೆಟ್ಟಿಲೇರಿದ್ದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರಿಗೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಿಶಿಗನ್‌ ಹಾಗೂ ಜಾರ್ಜಿಯಾದಲ್ಲಿ ಟ್ರಂಪ್‌ ಬೆಂಬಲಿಗರು ಸಲ್ಲಿಸಿದ್ದ ಅರ್ಜಿಗಳು ಅಲ್ಲಿನ ನ್ಯಾಯಾಲಯಗಳು ತಿರಸ್ಕರಿಸಿವೆ.

ಹಳೆಯ ಆಪ್ತ ಮಿತ್ರ ಬೈಡೆನ್ ಮುನ್ನಡೆ: ಪಾಕಿಸ್ತಾನಕ್ಕೆ ಸಂತಸ!

ಮಿಶಿಗನ್‌ನಲ್ಲಿ ಅಂಚೆ ಮತಗಳ ಎಣಿಕೆ ನಿಲ್ಲಿಸಬೇಕು ಎಂದೂ, ಜಾರ್ಜಿಯಾದಲ್ಲಿ ಅಸಿಂಧು ಮತಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ಎರಡೂ ವಾದಗಳನ್ನು ಕೋರ್ಟ್‌ ತಳ್ಳಿ ಹಾಕಿದೆ. ಅಲ್ಲದೇ ಮಿಶಿಗನ್‌ನಲ್ಲಿ ಅಲ್ಲಿನ ಕಾರ್ಯದರ್ಶಿ ಎಣಿಕೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನುವ ವಾದವೂ ಬಿದ್ದು ಹೋಗಿದ್ದು, ಟ್ರಂಪ್‌ ಬೆಂಬಲಿಗರಿಗೆ ಭಾರೀ ಮುಖಭಂಗವಾಗಿದೆ.

ಸುಳ್ಳು ಆರೋಪ ಮಾಡಿದ್ದಕ್ಕೆ ಟ್ರಂಪ್‌ ಭಾಷಣ ಪ್ರಸಾರ ಅರ್ಧಕ್ಕೇ ನಿಲ್ಲಿಸಿದ ವಾಹಿನಿಗಳು!

ಗುರುವಾರ ಶ್ವೇತ ಭವನದಲ್ಲಿ ಮಾತನಾಡಿದ ಟ್ರಂಪ್‌, ‘ಇಡೀ ಅಧ್ಯಕ್ಷೀಯ ಚುನಾವಣೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮವೆಸಗಲಾಗುತ್ತಿದೆ. ತಮಗೆ ಬಂದಿರುವ ಮತಗಳನ್ನು ಕದಿಯಲಾಗುತ್ತಿದೆ. ಇದರಲ್ಲಿ ಸಿರಿವಂತರು, ಮಾಧ್ಯಮಗಳು ಕೈಜೋಡಿಸಿವೆ. ಹೀಗಾಗಿ ನಾವು ಕಾನೂನಿನ ಮೊರೆ ಹೋಗುತ್ತೇವೆ’ ಎಂದು ಟ್ರಂಪ್‌ ಹೇಳುತ್ತಿದ್ದಂತೆ ಎಬಿಸಿ, ಸಿಬಿಎಸ್‌ ಮತ್ತು ಎನ್‌ಬಿಸಿ ವಾಹಿನಿಗಳು ನೇರ ಪ್ರಸಾರವನ್ನು ಸ್ಥಗಿತಗೊಳಿಸಿದವು.

ಸುಳ್ಳು ಆರೋಪ: ಟ್ರಂಪ್‌ ಭಾಷಣ ಪ್ರಸಾರ ಅರ್ಧಕ್ಕೇ ನಿಲ್ಲಿಸಿದ ಅಮೆರಿಕ ಮಾಧ್ಯಮ!

ಟ್ರಂಪ್‌ ಹೇಳಿಕೆಯಿಂದ ತುಸು ಸಿಟ್ಟಾದ ಎಂಎಸ್‌ಎನ್‌ಬಿಸಿ ವಾಹಿನಿ ಮೊದಲು ನೇರ ಪ್ರಸಾರವನ್ನು ಸ್ಥಗಿತಗೊಳಿಸಿತು. ಆದರೆ ಫಾಕ್ಸ್‌ ನ್ಯೂಸ್‌ ಮತ್ತು ಸಿಎನ್‌ಎನ್‌ ವಾಹಿನಿಗಳು ಮಾತ್ರ ಟ್ರಂಪ್‌ ಅವರ ಪೂರ್ಣ ಮಾತುಗಳನ್ನು ಪ್ರಸಾರ ಮಾಡಿದವು.