ಆಂತರಿಕ ಕಚ್ಚಾಟದಿಂದಾಗಿ ಹರ್ಯಾಣ, ಮಹಾರಾಷ್ಟ್ರದಲ್ಲಿ ಸೋತೆವು: ಮಲ್ಲಿಕಾರ್ಜುನ ಖರ್ಗೆ

Published : Nov 30, 2024, 05:30 AM IST
ಆಂತರಿಕ ಕಚ್ಚಾಟದಿಂದಾಗಿ ಹರ್ಯಾಣ, ಮಹಾರಾಷ್ಟ್ರದಲ್ಲಿ ಸೋತೆವು: ಮಲ್ಲಿಕಾರ್ಜುನ ಖರ್ಗೆ

ಸಾರಾಂಶ

ನಮ್ಮ ಪರವಾಗಿರುವ ವಾತಾವರಣ, ನಮಗೆ ಗೆಲುವಿನ ಭರವಸೆ ನೀಡಲ್ಲ. ಅಲೆಯನ್ನು ಫಲಿತಾಂಶವಾಗಿ ಬದಲಿಸುವುದನ್ನು ಕಲಿಯಬೇಕು. ಹಳೆಯ ವಿಧಾನಗಳಿಂದ ಗೆಲುವು ಸಾಧ್ಯವಿಲ್ಲ. ನಿತ್ಯ ರಾಜಕೀಯ ಎದುರಾಳಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕು ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  

ನವದೆಹಲಿ(ನ.30):   ಇತ್ತೀಚಿನ ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಚಾಟಿ ಬೀಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಂತರಿಕ ಕಚ್ಚಾಟ ಮತ್ತು ಪರಸ್ಪರರ ಮೇಲಿನ ಟೀಕೆಗಳು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿವೆ. ತಪ್ಪುಗಳಿಂದ ನಾವು ಪಾಠ ಕಲಿಯದೇ ಹೋದಲ್ಲಿ ಗೆಲುವು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಇದಕ್ಕಾಗಿ ನಾವು ಒಂದಿಷ್ಟು ಕಠಿಣ ಕ್ರಮ ಅಗತ್ಯ ಎನ್ನುವ ಮೂಲಕ ಪಕ್ಷದ ಸಂಘಟನೆಯಲ್ಲಿ ಬದಲಾವಣೆಯ ಸುಳಿವು ನೀಡಿದ್ದಾರೆ. 

ಇದೆ ವೇಳೆ ಚುನಾವಣೆ ವೇಳೆ ನಮ್ಮ ಪರವಾಗಿರುವ ವಾತಾವರಣ, ನಮಗೆ ಗೆಲುವಿನ ಭರವಸೆ ನೀಡಲ್ಲ. ಅಲೆಯನ್ನು ಫಲಿತಾಂಶವಾಗಿ ಬದಲಿಸುವುದನ್ನು ಕಲಿಯಬೇಕು. ಹಳೆಯ ವಿಧಾನಗಳಿಂದ ಗೆಲುವು ಸಾಧ್ಯವಿಲ್ಲ. ನಿತ್ಯ ರಾಜಕೀಯ ಎದುರಾಳಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕು ಎಂದರು. 

ಇವಿಎಂ ವಿರುದ್ಧ ಭಾರತ್‌ ಜೋಡೋ ರೀತಿ ರ್‍ಯಾಲಿ: ಮಲ್ಲಿಕಾರ್ಜುನ ಖರ್ಗೆ

ಜೊತೆಗೆ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ರಾಷ್ಟ್ರೀಯ ವಿಷಯ, ರಾಷ್ಟ್ರೀಯ ನಾಯಕರ ಮೇಲಿನ ಅವಲಂಬನೆ ತಪ್ಪಬೇಕು. ಅದರ ಬದಲು ನಾವು ಸ್ಥಳೀಯ ವಿಷಯ ಮತ್ತು ಸ್ಥಳೀಯ ನಾಯಕತ್ವವನ್ನು ಮುನ್ನೆಲೆಗೆ ತರಬೇಕು ಎಂದು ಪಕ್ಷದ ನಾಯಕರಿಗೆ ಖರ್ಗೆ ಸಲಹೆ ನೀಡಿದರು. ಅಲ್ಲದೆ ಪಕ್ಷದ ಸೋಲಿನ ಪರಾಮರ್ಶೆಗೆ ಕಾರಣ ಹುಡುಕಲು ಆಂತರಿಕವಾಗಿ ಸಮಿತಿ ರಚಿಸುವ ಘೋಷಣೆಯನ್ನೂ ಖರ್ಗೆ ಮಾಡಿದ್ದಾರೆ. 

ಮಹತ್ವದ ಚರ್ಚೆ:

ಹರ್ಯಾಣ,  ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯಲ್ಲಿನ ಪಕ್ಷದ ಅನಿರೀಕ್ಷಿತ, ಆಘಾತಕಾರಿ ಸೋಲು ಮತ್ತು ಹಿನ್ನಡೆ ಕುರಿತು ಚರ್ಚೆ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರ ರಚನೆಗಾಗಿ ಕಾಂಗ್ರೆಸ್‌ನ ಅತ್ಯುನ್ನತ ನೀತಿ ನಿರ್ಧಾರ ಮಂಡಳಿಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಶುಕ್ರವಾರ ಇಲ್ಲಿ ಸಭೆ ಸೇರಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಸೋಲುಗಳಿಂದ ನಾವು ಪಾಠ ಕಲಿಯಬೇಕಿದೆ. ಪಕ್ಷದಲ್ಲಿನ ನ್ಯೂನತೆ ಸರಿಪಡಿಸಬೇಕು. ಅಪಪ್ರಚಾರ, ಸುಳ್ಳುಹೇಳಿಕೆ ಎದುರಿಸುವ ತಂತ್ರಗಾರಿಕೆ ರೂಪಿಸಬೇಕು. ಪಕ್ಷವನ್ನು ಬಲಪಡಿಸಲು ತಳಮಟ್ಟದಿಂದ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ತನಕವೂ ಬದಲಾವಣೆ ಆಗಬೇಕಿದೆ. ಪಕ್ಷವನ್ನು ಬೂತ್ ಮಟ್ಟದವರೆಗೆ ಬಲ ಪಡಿಸಬೇಕು. ಹಲವು ರಾಜ್ಯಗಳಲ್ಲಿ ಪಕ್ಷ ನಿರೀಕ್ಷೆಗೆ ತಕ್ಕಂತೆ ಇಲ್ಲ. ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ. ಮುಂದೆ ದೇಶದಲ್ಲಿ ನಡೆಯಲಿರುವ ಚುನಾವಣೆಗೆ ಈಗಿನಿಂದಲೂ ತಯಾರಿ ನಡೆಸಬೇಕು ಎಂದು ಖರ್ಗೆ ಕರೆ ಕೊಟ್ಟರು. 

ಅದಾನಿ ಸರ್ಕಾರದ ಆಸ್ತಿ ಪಡೆದು, ಅವುಗಳನ್ನೇ ಅಡವಿಟ್ಟು ಬ್ಯಾಂಕ್ ಸಾಲ ಪಡೆಯುತ್ತಾರೆ; ಮಲ್ಲಿಕಾರ್ಜುನ ಖರ್ಗೆ

ದೇಶದ ಧ್ವನಿ: 

ಕಾಂಗ್ರೆಸ್‌ನ ಸತತ ಸೋಲಿನಿಂದ ಸರ್ವಾಧಿಕಾರಿ ಶಕ್ತಿಗಳು ತನ್ನ ಬೇರು ಆಳವಾಗಿಸಿಕೊಳ್ಳುತ್ತಿದೆ. ಒಬ್ಬರಾದ ಮೇಲೆ ಒಬ್ಬರು ಸ್ವಾಯತ್ತ ಸಂಸ್ಥೆಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ನಿರುದ್ಯೋಗ, ಹಣದುಬ್ಬರ ಅಸಮಾ ನತೆಯಿಂದ ತೊಂದರೆಗೊಳಗಾಗುತ್ತಿರುವ ದೊಡ್ಡ ವರ್ಗದವರು ಹುಟ್ಟಿಕೊಂಡಿದ್ದಾರೆ. ನಾವು ಅವರ ಧ್ವನಿಯಾಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹುಮುಖ್ಯ, ಯಾಕೆಂದರೆ ಒಂದು ವೇಳೆ ನಮ್ಮ ಸರ್ಕಾರವಿದ್ದರೆ 140 ಕೋಟಿ ಜನರ ಅಜೆಂಡಾವನ್ನು ಜಾರಿಗೆ ತರಬಹುದು. ದೇಶದ ಪ್ರಗತಿಯಾಗಬಹುದು' ಎಂದರು 

ಮಹಾ ಸೋಲು ಅನಿರೀಕ್ಷಿತ: 

'ಲೋಕಸಭೆ ಚುನಾವಣೆ ಉತ್ತಮ ಫಲಿತಾಂಶದ ನಂತರದ ಈ ಫಲಿತಾಂಶವು ಪಕ್ಷವನ್ನು ಚಕಿತಗೊಳಿಸಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಹುಮ್ಮಸ್ಸಲ್ಲೇ ಪಕ್ಷ ವಿಧಾನಸಭೆ ಚುನಾವಣೆಯನ್ನೂ ಎದುರಿಸಿತ್ತು. ಆದರೆ ಈ ಸೋಲು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶ ರಾಜಕೀಯ ಪಂಡಿತರಿಗೂ ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ. ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ಶಂಕಾಸ್ಪದವಾಗಿ ಇರಿಸಿದೆ. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ' ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!