ಬೆಂಗಳೂರು (ನ. 07): ವಾಯುಮಾಲಿನ್ಯ ತಡೆಗಟ್ಟಲು, ಕೋವಿಡ್ ಸೋಂಕಿತರ ಆರೋಗ್ಯ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಹಸಿರು ಪಟಾಕಿಗೆ ಮಾತ್ರ ಬಳಸಿ ಎಂದು ಸಿಎಂ ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಗಸೂಚಿ ಹೊರಬರಬೇಕಷ್ಟೇ. ಸರ್ಕಾರದ ಈ ನಿರ್ಧಾರಕ್ಕೆ ಪರ- ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮಾಲಿಕರು ಪಟಾಕಿಯನ್ನು ಖರೀದಿಸಿದ್ದಾರೆ. ಈಗ ಪಟಾಕಿ ನಿಷೇಧ ಹೇರಲು ಸರ್ಕಾರ ನಿರ್ಧರಿಸಿರುವುದರಿಂದ ಮಾಲಿಕರು ಕಂಗಾಲಾಗಿದ್ದಾರೆ. ಕೋರ್ಟ್ ಮೊರೆ ಹೋದರೂ ಅಚ್ಚರಿಯಿಲ್ಲ. 

ಒಂದು ಕಡೆ ವ್ಯಾಪಾರಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರೆ ಇನ್ನೊಂದು ಕಡೆ ತಜ್ಞರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

ಪಟಾಕಿ ಬ್ಯಾನ್ ಮಾಡುವ ನಿರ್ಧಾರವನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸ್ವಾಗತಿಸಿದ್ದಾರೆ. 

ಪಟಾಕಿ ನಿಷೇಧದ ಬೆನ್ನಲ್ಲೇ ಭರ್ಜರಿ ಪಟಾಕಿ ಖರೀದಿಸಿದ ಗ್ರಾಹಕರು