ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ: ಅರೆಸೇನೆ ನಿಯೋಜನೆ!

ಅಸ್ಸಾಂ ಮತ್ತು ಮಿಜೋರಂ ನಡುವಿನ ಗಡಿವಿವಾದ|  ಗಡಿವಿವಾದ ಮತ್ತಷ್ಟು ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಸ್ಥಳಕ್ಕೆ ಹೆಚ್ಚುವರಿ ಅರೆಸೇನಾ ಪಡೆ ನಿಯೋಜನೆ

Assam Mizoram border flare up Central forces deployed pod

ಗುವಾಹಟಿ(ನ.07): ಅಸ್ಸಾಂ ಮತ್ತು ಮಿಜೋರಂ ನಡುವಿನ ಗಡಿವಿವಾದ ಮತ್ತಷ್ಟುಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಸ್ಥಳಕ್ಕೆ ಹೆಚ್ಚುವರಿ ಅರೆಸೇನಾ ಪಡೆ ನಿಯೋಜಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದೆ.

ಉಭಯ ರಾಜ್ಯಗಳು 164.6 ಕಿ.ಮೀ ಗಡಿ ಹಂಚಿಕೊಂಡಿದೆ. ಆದರೆ ತನಗೆ ಸೇರಿದ 509 ಚದರ ಮೈಲು ಜಾಗ ಅಸ್ಸಾಂ ಅತಿಕ್ರಮಿಸಿಕೊಂಡಿದೆ ಎಂದು 50 ವರ್ಷಗಳಿಂದಲೂ ಮಿಜೋರಾಂ ಆರೋಪಿಸುತ್ತಲೇ ಇದೆ. ಇದೇ ವಿಷಯ ಸಂಬಂಧ ತಿಂಗಳ ಹಿಂದೆ ಗಡಿಯಲ್ಲಿ ಸಣ್ಣದಾಗಿ ಗುಂಪು ಘರ್ಷಣೆ ನಡೆದಿತ್ತು.

ಈ ವೇಳೆ ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಅಂದಿನಿಂದಲೂ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಥಳಕ್ಕೆ ಹೆಚ್ಚುವರಿ ಪಡೆ ನಿಯೋಜಿಸಿದೆ.

Latest Videos
Follow Us:
Download App:
  • android
  • ios