80 ಲಕ್ಷ ಜನರ ಮೊಬೈಲ್‌ನಲ್ಲಿವೆ 15 ನಕಲಿ ಲೋನ್ ಆ್ಯಪ್‌ಗಳು; ಇದ್ರೆ ಇಂದೇ ಡಿಲೀಟ್ ಮಾಡಿ, ಎಚ್ಚರಿಕೆ ಸಂದೇಶ

By Mahmad Rafik  |  First Published Nov 29, 2024, 8:10 PM IST

McAfee ವರದಿಯ ಪ್ರಕಾರ, ನಕಲಿ ಸಾಲ ಆಪ್‌ಗಳನ್ನು ಡೌನ್‌ಲೋಡ್ ಮಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಈ ಆಪ್‌ಗಳು ಬಳಕೆದಾರರ ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಯನ್ನು ಕದಿಯಬಹುದು. McAfee 15 ಅಪಾಯಕಾರಿ ನಕಲಿ ಸಾಲ ಆಪ್‌ಗಳನ್ನು ಪಟ್ಟಿ ಮಾಡಿದೆ.


ನವದೆಹಲಿ: ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು McAfee ವರದಿ ಮಾಡಿದೆ. ಅದರಲ್ಲಿಯೂ ಕಳೆದ ಕೆಲವು ತಿಂಗಳಲ್ಲಿ ಸಾಲ ನೀಡುವ ಸುಳ್ಳು ಭರವಸೆ ನೀಡುವ ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ ಎಂದು McAfee ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ನಕಲಿ ಆಪ್‌ಗಳು ಬಳಕೆದಾರರ ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಯುನ್ನು ಕದಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ. McAfee 15 ನಕಲಿ ಸಾಲದ ಅಪ್ಲಿಕೇಶನ್‌ಗಳ ಹೆಸರನ್ನು ಬಹಿರಂಗಗೊಳಿಸಿದ್ದು, ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿದ್ರೆ ಇಂದೇ ಡಿಲೀಟ್ ಮಾಡುವ ಸಲಹೆಯನ್ನು ನೀಡಿದೆ. ಸುಮಾರು 80 ಲಕ್ಷಕ್ಕೂ ಅಧಿಕ ಬಳಕೆದಾರರು  Google Play Storeನಿಂದ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವ ಆತಂಕಕಾರಿ ವರದಿ ಬಹಿರಂಗವಾಗಿದೆ. 

ಗೂಗಲ್ ಪ್ಲೇ ಸ್ಟೋರ್‌ನಿಂದ ಈ ನಕಲಿ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿದ್ರೂ ಅನೇಕರು ತಮ್ಮ ಮೊಬೈಲ್‌ನಲ್ಲಿ ಈ ಆಪ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಯಾವೆಲ್ಲಾ ಆಪ್‌ಗಳಿವೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. 

Latest Videos

undefined

ಈ ಅಪ್ಲಿಕೇಶನ್‌ಗಳು ಏಕೆ ಅಪಾಯಕಾರಿ?
ಈ ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಾಗ ಕರೆಗಳು, ಸಂದೇಶಗಳು, ಕ್ಯಾಮರಾ, ಮೈಕ್ರೊಫೋನ್ ಮತ್ತು ಲೊಕೇಶನ್ ಬಗ್ಗೆ ತಿಳಿದುಕೊಳ್ಳುವ ಅನುಮತಿಯನ್ನು ಕೇಳುತ್ತವೆ. ಆಪ್ ಓಪನ್ ಆಗಬೇಕಾದ್ರೆ ಇದೆಲ್ಲಕ್ಕೂ ಬಳಕೆದಾರರು ಅನುಮತಿಯನ್ನು ನೀಡಬೇಕಾಗುತ್ತದೆ. ಈ ಮೂಲಕ ನಕಲಿ ಆಪ್‌ ಡೆವಲಪರ್‌ಗಳು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಯನ್ನು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ. ಬ್ಯಾಂಕ್ ಅಕೌಂಟ್, ಪಾಸ್‌ವರ್ಡ್ ಸೇರಿದಂತೆ ಇತರೆ ಸೂಕ್ಷ್ಮ ಮಾಹಿತಿಯನ್ನು ಸುಲಭವಾಗಿ ಈ ಆಪ್‌ಗಳ ಮೂಲಕ ಕದಿಯಬಹುದಾಗಿದೆ.

ಇದನ್ನೂ ಓದಿ: 1 ಜನವರಿ 2025ರಿಂದ ಟೆಲಿಕಾಂ ನಿಯಮಗಳಲ್ಲಿ ದೊಡ್ಡ ಬದಲಾವಣೆ; Jio, Airtel, Voda ಮತ್ತು BSNL ಗ್ರಾಹಕರ ಪರಿಣಾಮ?

15 ನಕಲಿ ಸಾಲದ ಅಪ್ಲಿಕೇಶನ್‌ಗಳ ಹೆಸರು ಹೀಗಿದೆ.

  1. Préstamo Seguro-Rápido, seguro
  2. Préstamo Rápido-Credit Easy
  3. ได้บาทง่ายๆ-สินเชื่อด่วน
  4. RupiahKilat-Dana cair
  5. ยืมอย่างมีความสุข – เงินกู้
  6. เงินมีความสุข – สินเชื่อด่วน
  7. KreditKu-Uang Online
  8. Dana Kilat-Pinjaman kecil
  9. Cash Loan-Vay tiền
  10. RapidFinance
  11. PrêtPourVous
  12. Huayna Money 
  13. IPréstamos: Rápido
  14. ConseguirSol-Dinero Rápido
  15. ÉcoPrêt Prêt En Ligne

ಆನ್‌ಲೈನ್ ಮತ್ತು ಸೈಬರ್ ವಂಚನೆಗಳ ಹೆಚ್ಚಳದ ಬಗ್ಗೆ ಗೂಗಲ್ ಇತ್ತೀಚೆಗೆ ಬಳಕೆದಾರರನ್ನು ಎಚ್ಚರಿಸಿದೆ. ತಂತ್ರಜ್ಞಾನವು ಹೆಚ್ಚು ಬೆಳೆಯುತ್ತಿದ್ದಂತೆ ವಂಚಕರು ಸಹ ಹುಟ್ಟಿಕೊಂಡಿದ್ದಾರೆ. ಉಚಿತ ಸಾಲದ ಸೌಲಭ್ಯ ನೀಡುವಂತಹ ಫೋನ್ ಕರೆಗಳನ್ನು ಸ್ವೀಕರಿಸೋದು ಸಹ ಅಪಾಯಕಾರಿ. ಅಪರಿಚಿತರೊಂದಿಗೆ ಯಾವುದೇ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೇಲಿನ 15ರಲ್ಲಿ ಯಾವುದೇ ಒಂದೇ ಒಂದು ಆಪ್ ಇದ್ರೆ ಇಂದೇ ಡಿಲೀಟ್ ಮಾಡಿಕೊಳ್ಳಿ. ಯಾವುದೇ ಅನುಮಾನಸ್ಪದ ಆಪ್ ಗಳಿದ್ರೂ ಅವುಗಳನ್ನು ಪರಿಶೀಲಿಸಿ ಡಿಲೀಟ್ ಮಾಡಿ.

ಇದನ್ನೂ ಓದಿ: 6499 ರೂಪಾಯಿಯಲ್ಲಿ ಒಮ್ಮೆ ಚಾರ್ಜ್ ಮಾಡಿದ್ರೆ 840 ಗಂಟೆ ಬರೋ ಸ್ಮಾರ್ಟ್‌ಫೋನ್ 

click me!