ಇಲ್ಲಿವೆ ನೋಡಿ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಲು ಕಾರಣವಾದ 5 ಅಂಶಗಳು..!

First Published 7, Nov 2020, 2:20 PM

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ್ ಅಂತ್ಯವಾಗಿದೆ.
ಅಲ್ಪ ಮೊತ್ತದ ಸ್ಕೋರ್ ಕಾಪಾಡಿಕೊಳ್ಳುವಲ್ಲಿ ಕೊನೆಯ ಓವರ್‌ವರೆಗೂ ಆರ್‌ಸಿಬಿ ಹೋರಾಡಿತಾದರೂ ಗೆಲುವು ದಾಖಲಿಸಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಹೈದರಾಬಾದ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು. ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳೇನು ಎನ್ನುವುದನ್ನು ನೋಡುವುದಾದರೆ...

1. ಟಾಸ್‌ ಕೈಕೊಟ್ಟಿದ್ದು ಆರ್‌ಸಿಬಿ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದ್ದು:

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಈ ಹಿಂದಿನ 5 ಪಂದ್ಯಗಳಲ್ಲೂ ಚೇಸ್ ಮಾಡಿದ ತಂಡ ಗೆಲುವನ್ನು ದಾಖಲಿಸಿತ್ತು. ಅದರಂತೆ ಆರ್‌ಸಿಬಿ ಎದುರು ಟಾಸ್ ಗೆದ್ದ ಹೈದರಾಬಾದ್ ನಾಯಕ ಫೀಲ್ಡಿಂಗ್ ಆಯ್ದುಕೊಂಡರು. ಬಳಿಕ ವಿರಾಟ್ ಪಡೆಯನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿ ಸನ್‌ರೈಸರ್ಸ್ ಬಳಿಕ ರೋಚಕ ಗೆಲುವು ದಾಖಲಿಸಿತು.

2. ವಿರಾಟ್ ಪಡೆಯನ್ನು ಕಾಡಿದ ಬ್ಯಾಟಿಂಗ್‌ ಜೊತೆಯಾಟದ ಕೊರತೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆರೋನ್ ಫಿಂಚ್ ಹಾಗೂ ಎಬಿ ಡಿವಿಲಿಯರ್ಸ್‌ ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ನಿರೀಕ್ಷಿತ ಜತೆಯಾಟದ ಪ್ರದರ್ಶನ ಮೂಡಿ ಬರಲಿಲ್ಲ. ಫಿಂಚ್-ಎಬಿಡಿ ಜೋಡಿ 41 ರನ್‌ಗಳ ಜತೆಯಾಟವಾಡಿದ್ದೇ ಆರ್‌ಸಿಬಿ ಪರ ಮೂಡಿ ಬಂದ ಗರಿಷ್ಠ ಜತೆಯಾಟ ಎನಿಸಿತು.

3. ಮಹತ್ವದ ಸಂದರ್ಭದಲ್ಲಿ ಕೈಕೊಟ್ಟ ಬ್ಯಾಟ್ಸ್‌ಮನ್‌ಗಳು..!

ಟೂರ್ನಿಯಾದ್ಯಂತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ ಹಾಗೂ ಶಿವಂ ದುಬೈ ಕೂಡಾ ಎರಡಂಕಿ ಮೊತ್ತ ದಾಖಲಿಸಲು ವಿಫಲವಾಗಿದ್ದು ತಂಡಕ್ಕೆ ನುಂಗಲಾರದು ತುತ್ತಾಗಿ ಪರಿಣಮಿಸಿತು.

Probably, the young guns couldn’t manage a stable head thereon and lost four consecutive league matches thereon yet managed to qualify for the playoffs as Net Run-rate favoured them.

ಅಲ್ಪ ಮೊತ್ತವನ್ನು ಕಾಪಾಡಿಕೊಳ್ಳುವಲ್ಲಿ ಮೊಹಮ್ಮದ್ ಸಿರಾಜ್, ಆಡಂ ಜಂಪಾ ಹಾಗೂ ಯುಜುವೇಂದ್ರ ಚಹಾಲ್ ಉತ್ತಮ ಹೋರಾಟ ನಡೆಸಿದರು. ಪರಿಣಾಮ ಮೊದಲ 12 ಓವರ್‌ ಅಂತ್ಯದ ವೇಳೆಗೆ ಹೈದರಾಬಾದ್ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 67 ರನ್ ಗಳಿಸಿತ್ತು. ಈ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಆರ್‌ಸಿಬಿ ಬೌಲರ್‌ಗಳು ವಿಫಲವಾದರು.

5. ಆರ್‌ಸಿಬಿ ಗೆಲುವು ಕಸಿದ ವಿಲಿಯಮ್ಸನ್-ಹೋಲ್ಡರ್ ಜೋಡಿ:

ಒಂದು ಹಂತದಲ್ಲಿ ವಾರ್ನರ್, ಮನೀಶ್ ಪಾಂಡೆ ಹಾಗೂ ಪ್ರಿಯಂ ಗರ್ಗ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ತಂಡಕ್ಕೆ ವಿಲಿಯಮ್ಸನ್(50) ಹಾಗೂ ಹೋಲ್ಡರ್(24) ಜೋಡಿ 5ನೇ ವಿಕೆಟ್‌ಗೆ ಮುರಿಯದ 65 ರನ್‌ಗಳ ಜತೆಯಾಟವಾಡುವ ಮೂಲಕ ಆರ್‌ಸಿಬಿ ಕಡೆ ವಾಲಿದ್ದ ಪಂದ್ಯವನ್ನು ತಮ್ಮ ಕಡೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು.

loader