ಅಮಿತ್ ಶಾ ಮುಂದೆ ರಾಜ್ಯ ಸಂಪುಟ ಸವಾಲು, ರಜನಿಕಾಂತ್ ಆಸ್ಪತ್ರೆ ದಾಖಲು; ಡಿ.25ರ ಟಾಪ್ 10 ಸುದ್ದಿ!

By Suvarna NewsFirst Published Dec 25, 2020, 4:48 PM IST
Highlights

ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಿದ ಮೋದಿ, ರೈತರನನ್ನು ಕೀಳು ರಾಜಕೀಯಕ್ಕೆ ಬಲಿಕೊಡಬೇಡಿ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಅಮಿತ್ ಶಾಗೆ ಇದೀಗ ಸಂಪುಟ ಸವಾಲು ಎದುರಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತದ ಮೇಲೆ ದಾಳಿ ಎಂದ ಅಕ್ತರ್, ಕಂಡೀಷನ್ ಹಾಕಿ ಕಂಗನಾ ಕ್ರಿಸ್ಮಸ್ ವಿಶ್ ಸೇರಿದಂತೆ ಡಿಸೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
 

ಕೀಳು ರಾಜಕೀಯಕ್ಕೆ ರೈತರ ಬಲಿಕೊಡಬೇಡಿ; ದೀದಿ ಸೇರಿದಂತೆ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!...

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ರೈತರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. 

ವಿಶೇಷ ಅಧಿವೇಶನಕ್ಕಾಗಿ ಗೌರ್ನರ್‌ಗೆ ಮತ್ತೊಮ್ಮೆ ಕೇರಳ ಸರ್ಕಾರ ಶಿಫಾರಸು...

3 ಕೃಷಿ ಕಾಯ್ದೆ ವಿರುದ್ಧ ಗೊತ್ತುವಳಿ ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯಲು ಅನುಮತಿ ನೀಡಬೇಕೆಂದು ಕೇರಳ ಸರ್ಕಾರ ರಾಜ್ಯಪಾಲರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ ದಾಳಿ ರೂವಾರಿ ಹಫೀಜ್‌ಗೆ ಮತ್ತೆ 15 ವರ್ಷ ಸಜೆ: ಒಟ್ಟು 36 ವರ್ಷ ಜೈಲು...

ಭಯೋತ್ಪಾದಕ ಹಫೀಜ್‌ ಸಯೀದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಮೊದಲಿಗೆ ಕಾಶ್ಮೀರ, ಬಳಿಕ ಇಡೀ ಭಾರತದ ಮೇಲೆ ಇಸ್ಲಾಂ ಪಡೆಯಿಂದ ದಾಳಿ; ಅಖ್ತರ್ ಹೇಳಿಕೆ ವೈರಲ್...

ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಹಿಂದೆ ಭಾರತ ವಿರುದ್ದ ಹೇಳಿದ್ದಾರೆ ಎನ್ನಲಾದ ಮಾತಿನ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ರಜನಿ ಸೆಟ್‌ನಲ್ಲಿ ನಾಲ್ವರಿಗೆ ಕೊರೋನಾ: ಬಿಪಿ ಏರುಪೇರು, ಸೌತ್‌ ಸೂಪರ್‌ಸ್ಟಾರ್ ಆಸ್ಪತ್ರೆಗೆ ದಾಖಲು...

ಸೂಪರ್‌ಸ್ಟಾರ್ ರಜನೀಕಾಂತ್ ಶೂಟಿಂಗ್ ಸೆಟ್‌ನಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಶುಕ್ರವಾರ ನಟನನ್ನು ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ತಪಾಸಣೆ ನಡೆಸಿರುವ ವೈದ್ಯರು ರಜನಿ ಆರೋಗ್ಯದ ಮಾಹಿತಿ ನೀಡಿದ್ದಾರೆ.

36 ಲಕ್ಷ ಹೊಸ ಬಳಕೆದಾರರು ಸೇರ್ಪಡೆ; ಜಿಯೋ ಹಿಂದಿಕ್ಕಿದ ಏರ್‌ಟೆಲ್!...

ಇತರ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಟೆಲಿಕಾಂ ಸೇವೆಗಳಲ್ಲಿ ಭಾರಿ ಪೈಪೋಟಿ ಇದೆ. ಹೀಗಾಗಿ  ವಿಶ್ವದ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸೇವೆಗಳು ಭಾರತದಲ್ಲಿ ಲಭ್ಯವಿದೆ. ಪ್ರಮುಖಾಗಿ  ಭಾರತದಲ್ಲಿ ರಿಲಾಯನ್ಸ್ ಜಿಯೋ, ಏರ್‌ಟೆಲ್, ವೋಡಾಫೋನ್-ಐಡಿಯಾ ಪ್ರತಿಸ್ಪರ್ಧಿಗಳಾಗಿವೆ. ಇದೀಗ ಟ್ರಾಯ್ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಏರ್‌ಟೆಲ್, ತನ್ನ ಪ್ರತಿಸ್ಪರ್ಧಿಗಳಾದ ಜಿಯೋ ಹಾಗೂ ವೋಡಾಫೋನ್ ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ.

ವಾಜಪೇಯಿ ಹುಟ್ಟುಹಬ್ಬದಂದೇ ಅಟಲ್ ಸುರಂಗದಲ್ಲಿ 7 ಮಂದಿ ಆರೆಸ್ಟ್, 3 ಕಾರು ಸೀಝ್!...

ವಿಶ್ವದ ಅತೀ ಎತ್ತರದಲ್ಲಿರುವ ಸುರಂಗ ಮಾರ್ಗ ಅನ್ನೋ ಹೆಗ್ಗಳಿಕೆಗೆ ಅಟಲ್ ಸುರಂಗ ಪಾತ್ರವಾಗಿದೆ. ಮನಾಲಿ ಹಾಗೂ ಲೇಹ್ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರ ಕನಸಿನ ಯೋಜನೆ ಇದಾಗಿತ್ತು. ಹೀಗಾಗಿ ಅಟಲ್ ಸುರಂಗ ಎಂದೆ ಹೆಸರಿಡಲಾಗಿದೆ. ಇದೀಗ ಅಟಲ್ ಹುಟ್ಟು ಹಬ್ಬದ ದಿನವೇ ಅಟಲ್ ಸುರಂಗದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. 

ನೈಟ್ ಕರ್ಫ್ಯೂ ನಿರ್ಧಾರ ಮಾಡಿದ್ದ ಆ ಸಚಿವಗೆ ಡಿಕೆಶಿ ಫುಲ್ ಕ್ಲಾಸ್..!...

ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪನವರಿಗೆ ಯಾರು ಸಲಹೆ ಕೊಟ್ಟಿದ್ದು ಎನ್ನುವುದನ್ನು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮೆರಿ ಕ್ರಿಸ್ಮಸ್ ಎಂದ ಕಂಗನಾ..! ಅಂದಹಾಗೆ ಈ ವಿಶ್ ಎಲ್ರಿಗೂ ಇಲ್ಲ...

ಬಾಲಿವುಡ್ ನಟಿ ಕಂಗನಾ ರಣಾವತ್ ಮೆರಿ ಕ್ರಿಸ್ಮಸ್ ಎಂದು ವಿಶ್ ಮಾಡಿದ್ದಾರೆ. ಆದ್ರೆ ಈ ವಿಶ್ ಎಲ್ಲರಿಗೂ ಇಲ್ಲ. ಆದರೆ ಯಾರಿಗೆಲ್ಲ ಈ ವಿಶ್ ಎಂದೂ ಹೇಳಿದ್ದಾರೆ ಬಾಲಿವುಡ್ ಕ್ವೀನ್. ಯಾರಿಗೆಲ್ಲ ಈ ವಿಶ್..? ಯಾಕೆ ಈ ಕಂಡೀಷನ್

ಶಾ ರಾಜ್ಯ ಭೇಟಿಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್...

 ಬಹುದಿನಗಳಿಂದ ಕಾಯುತ್ತಿರುವ ಸಂಪುಟ ಕಸರತ್ತಿಗೆ ಅಂತಿಮ ಚಿತ್ರಣ ಸಿಗಲಿದೆ. ಇದರ ಮಧ್ಯೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

click me!