ಸೂಪರ್‌ಸ್ಟಾರ್ ರಜನೀಕಾಂತ್ ಶೂಟಿಂಗ್ ಸೆಟ್‌ನಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಶುಕ್ರವಾರ ನಟನನ್ನು ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ತಪಾಸಣೆ ನಡೆಸಿರುವ ವೈದ್ಯರು ರಜನಿ ಆರೋಗ್ಯದ ಮಾಹಿತಿ ನೀಡಿದ್ದಾರೆ.

ಕಳೆದ 10 ದಿನಗಳಿಂದ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಸುತ್ತಿದ್ದ ನಟ ಶುಕ್ರವಾರ ಬೆಳಗ್ಗೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 22ರಂದು ನಟನಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದ್ದು, ನಟನನ್ನು ಐಸೊಲೇಟ್ ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ತಲೈವಿ ಸಿನಿಮಾ: ಅರವಿಂದ್ ಸ್ವಾಮಿ MGR ಲುಕ್ ರಿವೀಲ್..!

ನಟನಿಗೆ ಕೊರೋನಾ ವೈರಸ್‌ನ ಯಾವುದೇ ಲಕ್ಷಣಗಳಿಲ್ಲದಿದ್ದರೂ, ರಕ್ತದೊತ್ತಡದಲ್ಲಿ ಗಣನೀಯ ಬದಲಾವಣೆ ಇದೆ. ಬಿಪಿ ಸಾಧಾರಣ ಸ್ಥಿತಿಗೆ ಬರುವ ತನಕ ನಟನಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಬಿಟ್ಟು ನಟನಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

70 ವರ್ಷದ ನಟ ಸಿರುಥೈ ಶಿವ ಅವರ ಅಣ್ಣಾಥೆ ಚಿತ್ರದ ಚಿತ್ರೀಕರಣದಲ್ಲಿದ್ದು, ಇದರಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬು ಮತ್ತು ಮೀನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.