ಪ್ರಜ್ವಲ್‌ ಲೈಂಗಿಕ ದೌರ್ಜನ್ಯವಷ್ಟೇ ಅಲ್ಲ, ರೇಪ್‌ ಮಾಡಿದ್ದಾನೆ: ಸಿಎಂ ಸಿದ್ದರಾಮಯ್ಯ

By Girish Goudar  |  First Published May 3, 2024, 11:11 PM IST

ಯಾವುದೇ ಸಂತ್ರಸ್ತ ಹೆಣ್ಣುಮಗಳು ರೇಪ್ ಆಗಿದೆ ಎಂದು ಸುಳ್ಳು ಹೇಳ್ತಾಳಾ? ಅವಳ ಜೀವನ ಹಾಳಾಗಲ್ವಾ? ಮದುವೆಯಾದ ಹೆಣ್ಮಗಳು ಬಹಿರಂಗವಾಗಿ ರೇಪ್ ಮಾಡಿದಾರೆ ಎಂದು ಹೇಳಬೇಕಾದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಹೆಣ್ಮಕ್ಕಳು ಸುಳ್ಳು ಹೇಳಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ 


ಬಾಗಲಕೋಟೆ(ಮೇ.03): ಪ್ರಜ್ವಲ್ ರೇವಣ್ಣ ಕೇವಲ ಲೈಂಗಿಕ ದೌರ್ಜನ್ಯ ಎಸಗಿಲ್ಲ. ರೇಪ್ ಮಾಡಿದ್ದಾನೆ. ರೇಪ್ ಕೇಸ್ ದಾಖಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂತ್ರಸ್ತ ಹೆಣ್ಣುಮಗಳು ರೇಪ್ ಆಗಿದೆ ಎಂದು ಸುಳ್ಳು ಹೇಳ್ತಾಳಾ? ಅವಳ ಜೀವನ ಹಾಳಾಗಲ್ವಾ? ಮದುವೆಯಾದ ಹೆಣ್ಮಗಳು ಬಹಿರಂಗವಾಗಿ ರೇಪ್ ಮಾಡಿದಾರೆ ಎಂದು ಹೇಳಬೇಕಾದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಹೆಣ್ಮಕ್ಕಳು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಎಲ್ಲಿಗಾದ್ರೂ ಎಸ್ಕೇಪ್ ಆಗಿರಲಿ. ಯಾವ ದೇಶದಲ್ಲಿದ್ದರೂ ಹಿಡ್ಕೊಂಡು ಬರ್ತಿವಿ ಎಂದು ಗುಡುಗಿದ ಅವರು, ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸ್‌ಪೋರ್ಟ್‌ ರದ್ದು ಮಾಡಿದ ಮೇಲೆ ವಿದೇಶದಲ್ಲಿರಲು ಆಗಲ್ಲ. ಪ್ರಧಾನಿ ಪಾಸ್‌ಪೋರ್ಟ್‌ ಕ್ಯಾನ್ಸಲ್ ಮಾಡಲಿ ಎಂದು ಆಗ್ರಹಿಸಿದರು.

Tap to resize

Latest Videos

undefined

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಎಚ್‌ಡಿಕೆ

ಚುನಾವಣೆ ಪ್ರಚಾರದಲ್ಲಿ ರೇವಣ್ಣ ಮಗ ಬೇರೆಯಲ್ಲ, ನನ್ನ ಮಗ ಬೇರೆ ಅಲ್ಲ ಅಂತಿದ್ದ ಕುಮಾರಸ್ವಾಮಿ ಈಗ ನಾವು ಬೇರೆ ಬೇರೆ ಆಗಿಬಿಟ್ಟಿದ್ದೀವಿ, ರೇವಣ್ಣ ಕುಟುಂಬ ಬೇರೆ ನಾವು ಬೇರೆ ಅಂತಿದ್ದಾರೆ. ಹಾಗಿದ್ದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ವಕೀಲರ ಜೊತೆ ಯಾಕೆ ಚರ್ಚೆ ಮಾಡಿದ್ದಾರೆ? ಅವರು ಅಪ್ಪನೂ ಅವನು ಲಾಯರ್‌ಗಳನ್ನ ಯಾಕೆ ಕರಿಸ್ತಿದ್ದಾರೆ. ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದು ಒಟ್ಟಿಗೆ, ತಪ್ಪು ಮಾಡೋದೋ ಒಟ್ಟಿಗೆ ಎಂದು ಹರಿಹಾಯ್ದರು.

ಗೊತ್ತಿದ್ದರೂ ಮೈತ್ರಿ ಮಾಡಿಕೊಂಡಿದ್ಯಾಕೆ?:

ಪ್ರಜ್ವಲ್ ವಿಷಯ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಮೊದಲೇ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಇವೆ ಎಂಬುದೂ ಗೊತ್ತಿತ್ತು. ಆದರೂ, ಬಿಜೆಪಿಯವರು ಪ್ರಜ್ವಲ್‌ಗೆ ಸೀಟು ಬಿಟ್ಟುಕೊಟ್ಟರು. ಬಿಜೆಪಿಯವರು ತಪ್ಪು ಮಾಡಿದ್ದಾರೆ. ಪ್ರಜ್ವಲ್ ವಿಡಿಯೋ ಬಗ್ಗೆ ಗೊತ್ತಿದ್ದರೂ ಯಾಕೆ ಮೈತ್ರಿ ಮಾಡಿಕೊಂಡರು? ಪ್ರಕರಣದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.

ಅಮಿತ್‌ ಶಾ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ:

ಅಮಿತ್ ಶಾ, ಪ್ರಧಾನಿ ಮೋದಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತಾರೆ. ನಾ ಖಾವುಂಗಾ ನಾ ಖಾನೆ ದೂಂಗಾ ಅಂತಾರೆ. ಐಟಿ, ಇಡಿ ರೇಡ್ ಆದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಪರಾಧಿಗಳನ್ನೆಲ್ಲ ಸೇರಿಸಿಕೊಂಡಿದ್ದಾರೆ. ಅವರು ಅಧಿಕಾರಕ್ಕಾಗಿ ಮಾಡಬಾರದ್ದೆಲ್ಲವನ್ನೂ ಮಾಡ್ತಾರೆ. ಅವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಮೀಸಲಾತಿ ಮೇಲೆ ನಂಬಿಕೆ ಇಲ್ಲ. ಐಕ್ಯತೆಯಲ್ಲಿ ನಂಬಿಕೆ ಇಲ್ಲ. ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ದೆ ಆರ್ ಅಗೈನೆಸ್ಟ್‌ ಡೆಮಾಕ್ರಸಿ (ಅವರೆಲ್ಲ ಪ್ರಜಾಪ್ರಭುತ್ವ ವಿರೋಧಿಗಳು). ಅಮಾಯಕರಿಗೆ ಕಿರುಕುಳ ಕೊಡೋದೆ ಅವರ ಉದ್ದೇಶ. ಅ ಮೂಲಕ ಸಮಾಜ ಡಿವೈಡ್ ಮಾಡೋದು ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

ಮಗನಂತೆ ತಂದೆ ವಿದೇಶಕ್ಕೆ ತೆರಳದಂತೆ ಹೆಚ್‌ಡಿ ರೇವಣ್ಣ ವಿರುದ್ಧವೂ ಲುಕ್ ಔಟ್ ನೋಟಿಸ್ ಜಾರಿ

ಹುಬ್ಬಳ್ಳಿ ನೇಹಾ ಕೊಲೆ ಲವ್ ಜಿಹಾದ್ ಎಂಬ ಅಮಿತ್ ಶಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಅಮಿತ್ ಶಾ ರಾಜಕೀಯಕ್ಕೋಸ್ಕರ ಹೀಗೆಲ್ಲ ಹೇಳ್ತಾರೆ. ನೇಹಾ ಪ್ರಕರಣದಲ್ಲಿ ನಾವು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದೀವಿ. ಪ್ರಕರಣ ಸಿಐಡಿಗೆ ವಹಿಸಿದ್ದೇವೆ. ಸ್ಪೇಷಲ್ ಕೋರ್ಟ್‌ ರಚಿಸಿದ್ದೇವೆ, ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ನಾನೇ ಮಾತಾಡಿದ್ದೀನಿ ಎಂದರು.

ಸರ್ಕಾರ ಕಾನೂನು ಪ್ರಕಾರ ಏನೆಲ್ಲ ಮಾಡೋಕೆ ಸಾಧ್ಯ ಇದೆ ಎಲ್ಲವನ್ನು ಮಾಡಿದ್ದೀವಿ. ಆದರೆ ಜಿಹಾದ್ ಎಂದು ರಾಜಕೀಯಕ್ಕೋಸ್ಕರ ಹೇಳುತ್ತಿದ್ದಾರೆ, ಅಮಿತ್ ಶಾ ಗೃಹಸಚಿವರು. ಮಣಿಪುರ ಘಟನೆ ಬಗ್ಗೆ ಯಾಕೆ ಮಾತಾಡಲಿಲ್ಲ. ಅಷ್ಟೆಲ್ಲ ಹಿಂಸಾಚಾರ ನಡೆದರೂ ಮಣಿಪುರ ಸರ್ಕಾರ ಮುಂದುವರಿಸಿದರು. ನೀವು ಆ ಪ್ರಶ್ನೆ ಕೇಳಿ, ಯು ಬಿಯಿಂಗ್ ಎ ಹೋಮ್ ಮಿನಿಸ್ಟರ್ ಏನ್ ಮಾಡಿದ್ರಿ. ಸೂಪರ್ ಸೀಡ್ ಮಾಡಿದ್ರಾ? ಚೀಪ್ ಮಿನಿಸ್ಟರ್ ಬದಲಾಯಿಸಿದರಾ? ಸರ್ಕಾರ ಡಿಸ್ಮಿಸ್ ಮಾಡಿದ್ರಾ ಎಂದು ಸಿಎಂ ಪ್ರಶ್ನಿಸಿದರು.

click me!