ವಾಜಪೇಯಿ ಹುಟ್ಟುಹಬ್ಬದಂದೇ ಅಟಲ್ ಸುರಂಗದಲ್ಲಿ 7 ಮಂದಿ ಆರೆಸ್ಟ್, 3 ಕಾರು ಸೀಝ್!
ವಿಶ್ವದ ಅತೀ ಎತ್ತರದಲ್ಲಿರುವ ಸುರಂಗ ಮಾರ್ಗ ಅನ್ನೋ ಹೆಗ್ಗಳಿಕೆಗೆ ಅಟಲ್ ಸುರಂಗ ಪಾತ್ರವಾಗಿದೆ. ಮನಾಲಿ ಹಾಗೂ ಲೇಹ್ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರ ಕನಸಿನ ಯೋಜನೆ ಇದಾಗಿತ್ತು. ಹೀಗಾಗಿ ಅಟಲ್ ಸುರಂಗ ಎಂದೆ ಹೆಸರಿಡಲಾಗಿದೆ. ಇದೀಗ ಅಟಲ್ ಹುಟ್ಟು ಹಬ್ಬದ ದಿನವೇ ಅಟಲ್ ಸುರಂಗದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಘಟನೆ ವಿವರ ಇಲ್ಲಿದೆ.
ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ. ದೇಶದೆಲ್ಲಡೆ ವಾಜಪೇಯಿ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ. ಜನ್ಮದಿನಾಚರಣೆ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಾಜಪೇಯಿ ಜನ್ಮದಿನದಂದೇ ಅಟಲ್ ಸುರಂಗದಲ್ಲಿ 7 ಮಂದಿಯನ್ನು ಹಿಮಾಚಲ ಪೊಲೀಸರು ಬಂಧಿಸಿದ್ದಾರೆ. ಇನ್ನು 3 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಟಲ್ ಸುರಂಗದೊಳಗೆ ಪ್ರಯಾಣಿಸುವರರು, ಸುರಂಗದೊಳಗೆ ವಾಹನ ನಿಲ್ಲಿಸುವಂತಿಲ್ಲ. ಆದರೆ ಮೂರು ಕಾರುಗಳಲ್ಲಿ ಬಂದ ಯುವಕರು ಕಾರು ನಿಲ್ಲಿಸಿ ಡ್ಯಾನ್ಸ್, ಮಾಡಿದ್ದಾರೆ.
ಫೋಟೋ, ವಿಡಿಯೋ ಮಾಡುತ್ತಾ ಸುರಂಗದೊಳಗೆ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದಾರೆ. ಗಂಟೆಗಳ ಕಾಲ ಸುರಂಗದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರು ಆಗಮಿಸುತ್ತಿದ್ದಂತೆ ಎಸ್ಕೇಪ್ ಆಗಲು ಯುವಕರ ಗುಂಪು ಯತ್ನಿಸಿದೆ. ಆದರೆ ಟ್ರಾಫಿಕ್‌ನಿಂದಾಗಿ ಯುವಕರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸುರಂಗದೊಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಯುವಕರ ನಿಯಮ ಉಲ್ಲಂಘನೆ ದಾಖಲಾಗಿದೆ.
7 ಮಂದಿಯನ್ನು ಅರೆಸ್ಟ್ ಮಾಡಿದ ಪೊಲೀಸರು, 3 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ವಾಜಪೇಯಿ ಅವರ ಕನಸಿನ ಯೋಜನೆಯಾಗಿದ್ದ ಮನಾಲಿ ಹಾಗೂ ಲೇಹ್ ಸುರಂಗ ಮಾರ್ಗ ಮೋದಿ ಸರ್ಕಾರ ಪೂರ್ಣಗೊಳಿಸಿತ್ತು.
ಅತ್ಯಾಧುನಿಕವಾಗಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನೇ ಈ ಸುರಂಗಕ್ಕೆ ಇಡಲಾಗಿದೆ. ಇದೀಗ ಇದೇ ಸುರಂಗದಲ್ಲಿ ಈ ರೀತಿಯ ಹಲವು ಘಟನೆಗಳು ನಡೆಯುತ್ತಿದೆ.
ಸುರಂಗದೊಳಗೆ ಗರಿಷ್ಠ ವೇಗ 80 ಕಿ.ಮೀ ಪ್ರತಿ ಗಂಟೆಗೆ. ಆದರೆ ಇಲ್ಲಿ ಅತೀ ವೇಗದ ಚಾಲನೆ, ವಾಹನ ನಿಲ್ಲಿಸಿ ಫೋಟೋ ಕ್ಲಿಕ್ಲ್ ಮಾಡ ಇತರ ವಾಹನಗಳಿಗೆ ಸಮಸ್ಯೆ ಮಾಡಿದ, ಅಪಘಾತಕ್ಕೆ ಕಾರಣ ಮಾಡಿದ ಹಲವು ಪ್ರಕರಣಗಳು ದಾಖಲಾಗಿದೆ.