ರೋಹಿತ್ ವೇಮುಲು ದಲಿತನಲ್ಲ, ತೆಲಂಗಾಣ ಪೊಲೀಸರಿಂದ ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್ ಚಿಟ್!

Published : May 03, 2024, 11:01 PM IST
ರೋಹಿತ್ ವೇಮುಲು ದಲಿತನಲ್ಲ, ತೆಲಂಗಾಣ ಪೊಲೀಸರಿಂದ ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್ ಚಿಟ್!

ಸಾರಾಂಶ

ತೆಲಂಗಾಣ ಸೇರಿದಂತೆ ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಕ್ಲೋಸ್ ಮಾಡಿದ್ದಾರೆ. ರೋಹಿತ್ ದಲಿತನೇ ಅಲ್ಲ, ಈತನ ಆತ್ಮಹತ್ಯೆಗೆ ಕಾರಣಗಳೇ ಬೇರೆ ಎಂದು ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ನಾಯಕರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.  

ಹೈದರಾಬಾದ್(ಮೇ.03) ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಕ್ಲೋಸ್ ಆಗಿದೆ. ಸುದೀರ್ಘ ತನಿಖೆ ನಡೆಸಿದ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿ ಸಲ್ಲಿಸಿದ್ದಾರೆ. ಈ ವರದಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಇಷ್ಟೇ ಅಲ್ಲ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ಮೃತಿ ಇರಾನಿ, ಎಬಿಬಿಪಿ ನಾಯಕರು, ಬಿಜೆಪಿ ನಾಯಕರಿಗೆ ತೆಲಂಗಾಣ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಪ್ರಮುಖವಾಗಿ ರೋಹಿತ್ ವೇಮುಲಾ ದಲಿತನೇ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.

2016ರಲ್ಲಿ ರೋಹಿತ್ ವೇಮುಲಾ ಅತ್ಯಹತ್ಯೆ ಹಿಂದೆ ಬಿಜೆಪಿ ನಾಯಕಿ ಸ್ಮತಿ ಇರಾನಿ ಒತ್ತಡ, ತೆಲಂಗಾಣ ಬಿಜೆಪಿ ನಾಯಕರು ಹಾಗೂ ಎಬಿವಿಪಿ ಕೈವಾಡವಿದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಆರೋಪಿಸಿತ್ತು. ಭಾರಿ ಪ್ರತಿಭಟನೆಯನ್ನು ನಡೆಸಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ತೆಲಂಗಾಣ ಪೊಲೀಸರು ಸಲ್ಲಿಸಿದ್ದ ವರದಿ ಹಲವು ಅಚ್ಚರಿ ಮಾಹಿತಿ ಬಹಿರಂಗಪಡಿಸಿದೆ.

ವೇಮುಲ ತಾಯಿಗೆ ರಾಹುಲ್ ಆಮಿಷ..?

ರೋಹಿತ್ ವೇಮುಲ ದಲಿತ ಜಾತಿಗೆ ಸೇರಿದವನಲ್ಲ. ರೋಹಿತ್ ತಾಯಿ ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿದ್ದರು. ಇದು ರೋಹಿತ್ ವೇಮುಲಾಗೆ ತಿಳಿದಿದ್ದು. ತನ್ನ ಅಸಲಿ ಜಾತಿ ಎಲ್ಲಿಬಹಿರಂಗವಾಗುತ್ತದೆ ಅನ್ನೋ ಭಯದಿಂದ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಜಾತಿ ನಕಲಿ ಮಾಡಿರುವುದು ಇತರರಿಗೆ ಗೊತ್ತಾದರೆ ಗೌರವ ಹಾಳಾಗುತ್ತದೆ. ಇದೇ ಜಾತಿ ಮುಂದಿಟ್ಟುಕೊಂಡು ಕೆಲ ರಾಜಕೀಯ ಮಾಡಿರುವುದಾಗಿ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

ತನ್ನ ಜಾತಿ ಬಹಿರಂಗವಾದರೆ ತಾನು ಅನುಭವಿಸುತ್ತಿರುವ ಸವಲತ್ತು, ಶೈಕ್ಷಣಿಕ ಪದವಿಯನ್ನು ಕಳೆದುಕೊಳ್ಳಬೇಕಾಗುತ್ತೆ ಅನ್ನೋ ಭಯ ರೋಹಿತ್‌ಗೆ ಕಾಡಿತ್ತು. ವಿದ್ಯಾಭ್ಯಾಸದಲ್ಲೂ ರೋಹಿತ್ ಹಿಂದಿದ್ದ. ಒಂದು ಪಿಹೆಚ್‌ಡಿ ಅರ್ಧಕ್ಕೆ ನಿಲ್ಲಿಸಿ ಮತ್ತೊಂದು ವಿಷಯ ಆಯ್ಕೆ ಮಾಡಿಕೊಂಡಿದ್ದ.  ಶೈಕ್ಷಣಿಕ ವಿಷಯಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದ. ಈ ರೀತಿಯ ಕೆಲ ಕಾರಣಗಳು ರೋಹಿತ್ ವೇಮುಲಾ ಆತ್ಮಹತ್ಯೆ ಕಾರಣವಾಗಿದೆ ಎಂದು ತೆಲಂಗಾಣ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.

ವೇಮುಲ ಕುಟುಂಬಕ್ಕೆ ಕೈ ಕೊಟ್ಟ ಮುಸ್ಲೀಂ ಲೀಗ್

ಈ ಪ್ರಕರಣದಲ್ಲಿ ಸ್ಮೃತಿ ಇರಾನಿ, ಸಿಕಂದರಬಾದ್ ಮಾಜಿ ಬಿಜೆಪಿ ಸಂಸದ ಬಂಡಾರು ದತ್ತಾತ್ರೆಯ, ಉಪಕುಲಪತಿ ಅಪ್ಪಾ ರಾವ್, ಎಬಿವಿಪಿ ನಾಯಕರು ಸೇರಿದಂತೆ ಕೆಲವರ ವಿರುದ್ಧ ಆರೋಪಗಳಿಗೆ ತೆಲಂಗಾಣ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!