ಭಯೋತ್ಪಾದಕ ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಲಾಹೋರ್(ಡಿ.25): ಮುಂಬೈ ಸರಣಿ ದಾಳಿಯ ಸೂತ್ರಧಾರಿ ಹಾಗೂ ಜಮಾತ್-ಉದ್-ದವಾ ಉಗ್ರ ಸಂಘಟನೆ ಮುಖ್ಯಸ್ಥ ಭಯೋತ್ಪಾದಕ ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅಲ್ಲದೆ ಸಯೀದ್‌ಗೆ 2 ಲಕ್ಷ ರು. ದಂಡ ವಿಧಿಸಲಾಗಿದೆ. ಈಗಾಗಲೇ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ನಾಲ್ಕು ಪ್ರಕರಣಗಳಲ್ಲಿ ಸಯೀದ್‌ಗೆ 21 ವರ್ಷ ಸಜೆ ವಿಧಿಸಲಾಗಿದ್ದು, ಒಟ್ಟಾರೆ ಐದು ಭಯೋತ್ಪಾದನೆಗೆ ಸಂಬಂಧಿಸಿದ ಕೇಸ್‌ಗಳಲ್ಲಿ ಉಗ್ರ ಸಯೀದ್ 36 ವರ್ಷಗಳ ಕಾಲ ಜೈಲು ಶಿಕ್ಷೆ ಗುರಿಯಾದಂತಾಗಿದೆ.
2009ರಲ್ಲಿ ಚಾಲನೆ ಸಿಕ್ಕ ಕೊಚ್ಚಿ- ಮಂಗಳೂರು ಗ್ಯಾಸ್ ಪೈಪ್‌ಲೈನ್ ಉದ್ಘಾಟನೆಗೆ ಡೇಟ್ ಫಿಕ್ಸ್
ಸದ್ಯ ಅವನು ಲಾಹೋರ್‌ನಲ್ಲಿರುವ ಕೋಟ್ ಲಖ್‌ಪತ್ ಜೈಲಿನಲ್ಲಿದ್ದಾನೆ. 2008ರ ನವೆಂಬರ್ 26ರಂದು ಲಷ್ಕರ್ ಉಗ್ರರು ನಡೆಸಿದ ಮುಂಬೈ ದಾಳಿಯಲ್ಲಿ ಒಟ್ಟಾರೆ 174 ನಾಗರಿಕರು ಹತ್ಯೆಗೀಡಾಗಿ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
