ನೇಕಾರರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ಎಂದು ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಆದರೆ, ಬಿಜೆಪಿ ಬರೀ ಸುಳ್ಳುಗಳನ್ನು ಹೇಳುತ್ತ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದ ವಿಧಾನ ಪರಿಷತ್ ಸದಸ್ಯೆ ಉಮಾಶ್ರಿ
ಗುಳೇದಗುಡ್ಡ (ಮೇ.03): ಹಿಂದುತ್ವದ ಹೆಸರಿನಲ್ಲಿ ಕೋಮು ಗಲಭೆ ಹುಟ್ಟು ಹಾಕುತ್ತಿರುವ ಕೇಂದ್ರ ಬಿಜೆಪಿ ಜನ ವಿರೋಧಿ ಸರ್ಕಾರ ಎಂದು ಮಾಜಿ ಸಚಿವೆ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಟೀಕಿಸಿದರು. ಪಟ್ಟಣದಲ್ಲಿ ನೇಕಾರರ ಸಭೆಯಲ್ಲಿ ಮಾತನಾಡಿದ ಅವರು, ನೇಕಾರರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದ ಸರ್ಕಾರ ಎಂದು ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಆದರೆ, ಬಿಜೆಪಿ ಬರೀ ಸುಳ್ಳುಗಳನ್ನು ಹೇಳುತ್ತ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಚಾಲಕ, ಕೆಎಚ್ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ನೇಕಾರಿಕೆ ಉದ್ಯೋಗಕ್ಕೆ ಪುನಶ್ಚೇತನ ಹಾಗೂ ಉತ್ತೇಜನ ನೀಡಿದ್ದಾರೆ.10 ಎಚ್.ಪಿ.ವರೆಗೆ ಉಚಿತ ವಿದ್ಯುತ್, ನೇಕಾರ ಮಕ್ಕಳಿಗೆ ಶಿಷ್ಯವೇತನ, ಹಸಿವು ಮುಕ್ತಗೊಳಿಸಲು ಅನ್ನಭಾಗ್ಯ ನೀಡಿದೆ. ಆದರೆ, ಬಡವರ ನೋವಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆದ್ದರೆ ಜಿಲ್ಲೆಯ ನೇಕಾರರ ಇನ್ನೂ ಹಲವು ಬೇಡಿಕೆಗಳು ಈಡೇರಲಿವೆ. ನೇಕಾರರು ಸಂಯುಕ್ತಾ ಪಾಟೀಲ ಅವರ ಗೆಲುವಿಗೆ ಈ ಬಾರಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
undefined
ಆಡು ಭಾಷೆಯಲ್ಲಿ ಮಾತಾಡಿದ್ದೇನೆ, ಯಾರ ಸಾವು ಬಯಸಿಲ್ಲ: ಶಾಸಕ ರಾಜು ಕಾಗೆ ಸ್ಪಷ್ಟನೆ
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಬಾಗಲಕೋಟೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿರುವ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸುವುದರಿಂದ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು.
ಕಾವೇರಿ ಹ್ಯಾಂಡಲೂಮ್ ನಿಗಮದ ಅಧ್ಯಕ್ಷ ಬಿ.ಜೆ.ಗಣೇಶ, ಜವಳಿ ಮೂಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ, ಕೆಪಿಸಿಸಿ ಒಬಿಸಿ ಘಟಕ ಉಪಾಧ್ಯಕ್ಷ ಸಿ. ದೇವಾನಂದ ಬಳ್ಳಾರಿ, ಆರ್.ಜೆ. ರಾಮದುರ್ಗ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದ ಮದ್ದಾನಿ, ನೇಕಾರ ಮುಖಂಡರಾದ ರಾಜು ಜವಳಿ, ಸಿ.ಎಂ. ಚಿಂದಿ, ಹನುಮಂತ ಒಡ್ಡೋಡಗಿ, ಮಲ್ಲೇಶಪ್ಪ ಬೆಣ್ಣಿ, ವೈ.ಆರ್. ಹೆಬ್ಬಳ್ಳಿ ಹನುಮಂತಸಾ ಕಾಟವಾ, ನಾಗೇಶಪ್ಪ ಪಾಗಿ, ಶಿಲ್ಪಾ ಹಳ್ಳಿ, ಗೋಪಾಲ ಭಟ್ಟಡ, ವಿಠ್ಠಲಸಾ ಕಾವಡೆ, ರಾಜು ಸಂಗಮ ಸೇರಿದಂತೆ ಇನ್ನೂ ಅನೇಕರು ಇದ್ದರು.
ಪ್ರಧಾನಿ ಮೋದಿ ಎಲ್ಲರ ಖಾತೆ ₹ 15 ಹಾಕುತ್ತೇನೆ ಎಂದು ಅಧಿಕಾರಕ್ಕೆ ಬಂದರು. ಆದರೆ, ನಯಾಪೈಸೆ ಹಾಕಲಿಲ್ಲ. ಸುಳ್ಳುಗಳನ್ನು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಆಗಿದ್ದಾರೆ. ಸಂಯುಕ್ತಾ ಪಾಟೀಲರಿಗೆ ಮತ ನೀಡಿ ಗೆಲ್ಲಿಸಿ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರಿ ತಿಳಿಸಿದ್ದಾರೆ.